ಕುಮಟಾ: ‘ರಾಷ್ಟ್ರೀಯ ಹೆದ್ದಾರಿ ಹಾಗೂ ಐ.ಆರ್.ಬಿ ಅಧಿಕಾರಿಗಳಿಗೆ ತಾವು ಕೆಲಸ ಮಾಡದೆ ಕಾಲ ಕಳೆಯುತ್ತಿದ್ದೇವೆ ಎನ್ನುವ ಬಗ್ಗೆ ಯಾವ ಮುಜುಗುರವೂ ಆಗುತ್ತಿಲ್ಲ. ನೀವು ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಸಿಗದೆ ಅಡಗಿಕೊಂಡು ಓಡಾಡುತ್ತಿದ್ದೀರಿ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಆಕ್ರೋಶಗೊಂಡ ಸಾರ್ವಜನಿಕರು ನಿಮ್ಮ ಮೇಲೆ ಮುಗಿ ಬೀಳುವ ಕ್ಷಣಗಳು ದೂರವಿಲ್ಲ’ ಎಂದು ಸೋಮವಾರ ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಶಾಸಕ ದಿನಕರ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ ಹರಿಕಂತ್ರ , ‘ಮಿರ್ಜಾನಿನಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆ ಬಿಟ್ಟ ನಂತರ ಹೆದ್ದಾರಿ ಬದಿ ನಿರ್ಮಿಸಿದ್ದ ಕಿರಿದಾದ ತಂಗುದಾಣದಲ್ಲಿ ಮಳೆಯಲ್ಲಿ ತೊಯ್ಯುತ್ತ ನಿಲ್ಲಬೇಕಾಗಿದೆ. ಮಳೆ ನೀರು ಸರಾಗ ಹರಿಯದೇ ಹೆದ್ದಾರಿಯಲ್ಲಿ ನಿಲ್ಲುತ್ತದೆ. ಇವೆಲ್ಲ ಸರಿಯಾಗುವುದು ಇನ್ನು ಯಾವ ಕಾಲಕ್ಕೆ’ ಎಂದು ಪ್ರಶ್ನಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಣೇಶ ಅಂಬಿಗ, ಬಿ.ಜೆ.ಪಿ ಅಧ್ಯಕ್ಷ ಜಿ.ಐ. ಹೆಗಡೆ,`ದುಂಡುಕುಳಿಯ ರಾಷ್ಟ್ರೀಯ ಹೆದ್ದಾರಿ ಬದಿ ಕತ್ತರಿಸಿದ ಗುಡ್ಡದಿಂದ ದೊಡ್ಡ ಬಂಡೆಗಳು ಮಳೆಗಾಲದಲ್ಲಿ ಉರುಳುವ ಸಾಧ್ಯತೆ ಇದೆ. ಪಟ್ಟಣ ಪ್ರವೇಶಿಸುವ ಮಾನೀರ ಬಳಿ ಇನ್ನೂ ಹೆದ್ದಾರಿ ಅಗಲೀಕರಣ ನಡೆಯದೆ ಅಪಘಾತಗಳು ಉಂಟಾಗುತ್ತಿವೆ’ ಎಂದರು. ಅದಕ್ಕೆ ತಹಶೀಲ್ದಾರ್ ಕೃಷ್ಣ ಕಾಮಕಾರ, ‘ಗುಡ್ಡ ಕುಸಿತದಿಂದ ಈ ವರ್ಷ ಮತ್ತೆ ಹೆದ್ದಾರಿ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ’ ಎಂದರು.

ಪಶು ಸಂಗೋಪನಾ ಇಲಾಖೆ ವೈದ್ಯಾಧಿಕಾರಿ ಡಾ. ವಿಶ್ವನಾಥ ಹೆಗಡೆ, ‘ಹೈನುಗಾರಿಕೆ ನಡೆಸುವವರಿಗೆ ಬ್ಯಾಂಕ್ನಿಂದ ಕಿಸಾನ್ ಕ್ರೆಡಿಟ್ ಸಾಲ ಸೌಲಭ್ಯಗಳಿದ್ದು ಪ್ರತಿ ಹಸುವಿಗೆ ₹ 16 ಸಾವಿರದಿಂದ ₹ ಸಾವಿರವರೆಗೆ ಶೇ 7 ರಿಂದ ಶೇ3 ಬಡ್ಡಿ ದರದ ಮೇಲೆ ಸಾಲ ಸೌಲಭ್ಯ ದೊರೆಯಲಿದೆ’ ಎಂದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಇ.ಒ ಆರ್.ಎಲ್.ಭಟ್, ಆಡಳಿತಾಧಿಕಾರಿ ಪ್ರಕಾಶ ಹಾಲಮ್ಮನವರ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-20-1865521343

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.