ಕುಮಟಾ: ತೋಟಗಾರಿಕೆ ಇಲಾಖೆ ವತಿಯಿಂದ ಸಿಗುವ ವಿವಿಧ ಸೌಲಭ್ಯಗಳ ಮಾಹಿತಿಯನ್ನು ಇಲಾಖೆ ಕಚೇರಿ ಎದುರು ದೊಡ್ಡ ನಾಮಫಲಕದಲ್ಲಿ ಪ್ರದರ್ಶಿಸಿದ್ದು, ರೈತರು ಹಾಗೂ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.

ಬೃಹತ್ ನಾಮಫಲಕದಲ್ಲಿ ವಿವಿಧ ಯೋಜನೆಗಳ ಮಾಹಿತಿ ಹಾಗೂ ಹಿಂದೆ ಸೌಲಭ್ಯ ಪಡೆದ ಫಲಾನುಭವಿಗಳ ಚಿತ್ರ ನೋಡಿ ರೈತರು ಇಲಾಖೆಯ ಅಧಿಕಾರಿಗಳ ಬಳಿ ತಮ್ಮ ಅಗತ್ಯತೆಗಳ ಬಗ್ಗೆ ಚರ್ಚಿಸಲು ಈ ಸೌಲಭ್ಯ ಅನುಕೂಲವಾಗಿದೆ. ಇದು ಹೆಚ್ಚಿನ ಸಂಖ್ಯೆಯ ರೈತರನ್ನು ತೋಟಗಾರಿಕಾ ಕಚೇರಿಯತ್ತ ಸೆಳೆಯುತ್ತಿದೆ.

ಹೆಚ್ಚಿನ ಮಾಹಿತಿ ನೀಡಿದ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಲಿಂಗರಾಜು ಇಟ್ನಾಳ, ‘ಇಲಾಖೆ ಆವರಣ ಪ್ರವೇಶ ದ್ವಾರದಲ್ಲೇ ಮೊದಲೇ ದೊಡ್ಡ ನಾಫಲಕದಲ್ಲಿ ಇಲಾಖೆಯ ವಿವಿಧ ಸೌಲಭ್ಯಗಳ ಬಗ್ಗೆ ಚಿತ್ರ ಸಹಿತ ಮಾಹಿತಿ ನೋಡುವ ರೈತರು ತಮಗೆ ಅಗತ್ಯವಿರುವ ಯೋಜನೆಗಳ ಬಗ್ಗೆ ಕಚೇರಿಯೊಳಗೆ ಬಂದು ಚರ್ಚಿಸಲು ಅನುಕೂಲವಾಗುತ್ತದೆ. ಕಚೇರಿಗೆ ಬರುವ ಪ್ರಜ್ಞಾವಂತ ನಾಗರಿಕರು ಇಲ್ಲಿರುವ ಸೌಲಭ್ಯಗಳ ಬಗ್ಗೆ ತಮ್ಮ ಸುತ್ತಲಿನ ರೈತರಿಗೆ ಮಾಹಿತಿ ನೀಡಲು ಇದು ಸಹಾಯಕವಾಗಿದೆ’ ಎಂದರು.

`ರೈತರಿಗೆ ಬೇಕಾದ ಸೌಲಭ್ಯಗಳ ಚಿತ್ರಗಳು ಇಲ್ಲಿರುವುದರಿಂದ ಅವುಗಳ ಬಗ್ಗೆ ಅವರು ನೇರವಾಗಿ ಅರ್ಜಿ ಸಲ್ಲಿಸುವುದಕ್ಕೂ ಸಹಕಾರಿ. ರೈತರು ಹೊಸ ಯೋಜನೆಗಳ ಬಗ್ಗೆ ತಿಳಿಸಿದರೆ ಅವುಗಳ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಕಳುಹಿಸಿ ಮಂಜೂರಿ ಮಾಡಿಸಿಕೊಡಲಾಗುವುದು. ಅವುಗಳಲ್ಲಿ ತೋಟಗಾರಿಕೆ ಅನುದಾನ, ತೋಟಗಾರಿಕಾ ಬೆಂಬಲ, ಆರ್ಥಿಕ ನೆರವು, ಸಹಾಯಧನದ ಸೌಲಭ್ಯಗಳು, ಪ್ರೋತ್ಸಾಹಧನ, ನರ್ಸರಿ ಬೆಂಬಲ ಸೌಲಭ್ಯ, ರಿಯಾಯಿತಿ ದರದ ಅತ್ಯುತ್ತಮ ಗುಣಮಟ್ಟದ ರೋಗ ನಿರೋಧಕ ಶಕ್ತಿ ಹೊಂದಿರುವ ಸ್ಥಳೀಯ ಅಡಿಕೆ, ತೆಂಗಿನ ಸಸಿಗಳು ಸೇರಿವೆ. ಅವುಗಳ ವಿತರಣಾ ಕಾರ್ಯಕ್ರಮ ಈಗಾಗಲೇ ಆರಂಭವಾಗಿದೆ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-20-452706260

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.