ಕುಮಟಾ: ` ಮನುಷ್ಯರಲ್ಲಿ ದೈವತ್ವ ಕಾಣುವ ಮೂಲಕ ಲಯನ್ಸ್ ಕ್ಲಬ್ ತನ್ನ ಕಾರ್ಯಕ್ರಮಗಳುದ್ದಕ್ಕೂ ಮಾನವೀಯ ತತ್ವಗಳನ್ನು ಅನುಸರಿಸುತ್ತ ಬಂದಿದೆ’ ಎಂದು ಲಯನ್ಸ್ ಅಂತರರಾಷ್ಟ್ರೀ ಯ ಸಂಸ್ಥೆಯ ಪದಾಧಿಕಾರಿ ಕೆ.ವಿ. ವಂಶೀಧರ ಬಾಬು ಹೇಳಿದರು.

ಪಟ್ಟಣದಲ್ಲಿ ಶನಿವಾರ ಕುಮಟಾ ಲಯನ್ಸ್ ಕ್ಲಬ್ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾನಾಡಿದರು.

`ಕುಮಟಾ ಲಯನ್ಸ್ ಕ್ಲಬ್ ತನ್ನ ಐವತ್ತು ವರ್ಷಗಳ ತನ್ನ ಅರ್ಥಪೂರ್ಣ ಪಯಣದಲ್ಲಿ ಲಯನ್ಸ್-ರೇವಣಕರ್ ಧರ್ಮಾರ್ಥ ಕಣ್ಣಿನ ಆಸ್ಪತ್ರೆಯಂಥ ಸೌಲಭ್ಯವನ್ನು ಜನತೆಗೆ ನೀಡಿರುವುದು ಹೆಮ್ಮೆಯ ಸಂಗತಿ’ ಎಂದರು.

ಹಿರಿಯ ಪದಾಧಿಕಾರಿ ವಿ.ವಿ.ಕೃಷ್ಣಾರೆಡ್ಡಿ, ‘ಕುಮಟಾ ಲಯನ್ಸ್ ಸಂಸ್ಥೆ ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ಸಮೀಪದ ಚಂದಾವರದಲ್ಲಿ ದೃಷ್ಟಿ ತಪಾಸಣೆ ಕೇಂದ್ರ, ಅಳ್ವೆಕೋಡಿಯಲ್ಲಿ ಅಕ್ಷಯ ಕೌಶಲಾಭಿವೃದ್ಧಿ ಕೇಂದ್ರ ಆರಂಭಿಸಿದೆ. ಸಂಸ್ಥೆ ವತಿಯಿಂದ ಅರ್ಹರಿಗೆ ಶ್ರವಣ ಸಾಧನಗಳನ್ನು ನೀಡುವ ಯೋಜನೆ ಹೊಂದಲಾಗಿದೆ. ಲಯನ್ಸ್ ಸಂಸ್ಥೆ ಮಾನವೀಯ ನೆಲೆಯಲ್ಲಿ ಸಮಾಜಕ್ಕೆ ಅಗತ್ಯವಿರುವುದನ್ನು ನೀಡಲು ಸದಾ ಬದ್ಧ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ `ಸ್ವರ್ಣ ಸಿಂಹ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ‘ಅಂತರರಾಷ್ಟ್ರೀಯ ಮಟ್ಟದ ಸೇವಾ ಸಂಸ್ಥೆಗಳಾದ ಲಯನ್ಸ್ ಹಾಗೂ ರೋಟರಿ ಕ್ಲಬ್ಗಳು ಭಾರತೀಯ ಸಂಸ್ಕೃತಿ ಗೌರವಿಸಿ ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅಮೂಲ್ಯ ಸೌಲಭ್ಯಗಳನ್ನು ಒದಗಿಸಿ ತಮ್ಮ ಹೆಜ್ಜೆ ಗುರುತು ಮೂಡಿಸಿವೆ’ ಎಂದರು.

ಲಯನ್ಸ್ ಸಂಸ್ಥೆಯ ಮೋಹನಕುಮಾರ, ಜೈ ಅಮೋಲ ನಾಯ್ಕ, ರಾಜಶೇಖರ್ ಹಿರೇಮಠ, ಸುದೇಶ್ ಬೋರ್ಕರ್, ರವಿ ಹೆಗಡೆ ಹೂವನಮನೆ, ಗಣಪತಿ ನಾಯಕ, ಗಿರಿಶ್ ಕುಚಿನಾಡ, ಡಾ. ಕೀರ್ತಿ, ಮಂಗಲಾ ನಾಯಕ, ಎಸ್.ಎಸ್. ಹೆಗಡೆ, ಎಂ.ಎಂ.ಹೆಗಡೆ, ಮದನ ನಾಯಕ, ಸಿ.ಎಸ್.ವೆರ್ಣೇಕರ್, ಪ್ರೇಮಾನಂದ ಶಾನಭಾಗ, ಕುಮಟಾ ಲಯನ್ಸ್ ಕ್ಲಬ್ ಅಧ್ಯಕ್ಷ ನಾಗರಾಜ ಭಟ್ಟ, ಜಿ.ಎಸ್. ಭಟ್ಟ, ರವಿಂದ್ರ ಭಟ್ಟ ಸೂರಿ, ರೋಟರಿ ಕ್ಲಬ್ ಎನ್.ಆರ್. ಗಜು, ಗುರುರಾಜ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-20-242739110

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.