ಕುಮಟಾ: 200 ವರ್ಷಗಳ ಇತಿಹಾಸವಿರುವ ಪಟ್ಟಣದ ಹೆರವಟ್ಟಾದ ಸಾಣಿ ಅಮ್ಮ ದೇವಸ್ಥಾನದ ಅಮೃತ ಮಹೋತ್ಸವ ಸಂಭ್ರಮ ಮೇ 7 ರಿಂದ 11ರ ವರೆಗೆ ನಡೆಯಲಿದೆ ಎಂದು ಅಮೃತ ಮಹೋತ್ಸವ ಸಮಿತಿ ಕಾರ್ಯದರ್ಶಿ ಬಿ.ಎನ್. ಕೆ ನಾಗರಾಜ್ ತಿಳಿಸಿದರು.

ದೇವಸ್ಥಾನದ ಸಭಾ ಭವನದಲ್ಲಿ ಈಚೆಗೆ ಕರೆದ ಪತ್ರಿಕಾಗೋಷ್ಠಿಯಲಿ ಮಾತನಾಡಿದ ಅವರು, ಸಾಣಿ ಅಮ್ಮ ದೇವಾಲಯ ಹಾಗೂ ಪರಿವಾರ ದೇವರ ಜೀರ್ಣೋದ್ಧಾರ ಕಾರ್ಯ ನಡೆಸಲು ಭಕ್ತರೆಲ್ಲ ಸೇರಿ ನಿರ್ಧರಿಸಿದ್ದಾರೆ. ದೇವಾಲಯಕ್ಕೆ 75 ವರ್ಷ ತುಂಬಿದ್ದರಿಂದ ಇದೇ ಸಂದರ್ಭದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಕೂಡ ನಡೆಯಲಿದೆ’ ಎಂದರು.

ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಂತರ ಮೇ 10 ರಂದು ದೇವಿಯ ನಗರೋತ್ಸವ , ಅಷ್ಟಾವಧಾನ ಸೇವೆ ನಡೆಯಲಿದೆ. ಮೇ. 11ರಂದು 108 ಬ್ರಹ್ಮ ಕಳಶಾಭಿಷೇಕ, ಹೋಮ, ಮಹಾ ಪೂರ್ಣಾಹುತಿ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ’ ಎಂದರು.

ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ವೆಂಕಟೇಶ ನಾಯಕ, ಸಮಿತಿ ಅಧ್ಯಕ್ಷ ಶೈಲೇಶ ನಾಯ್ಕ ಮಾತನಾಡಿದರು. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ನಾಗಪ್ಪ ಗೌಡ, ಕಾರ್ಯದರ್ಶಿ ಭಗವಾನ ನಾಯ್ಕ, ಪ್ರಮುಖರಾದ ಗಜಾನನ ನಾಯ್ಕ, ದೇವಪ್ಪ ನಾಯ್ಕ, ಅಣ್ಣಯ್ಯ ಪೈ, ಮಾದೇವ ಗೌಡ, ಶೇಖರ ಪಟಗಾರ, ಎಂ ಜಿ ನಾಯ್ಕ, ಮಂಜುನಾಥ ಮಡಿವಾಳ, ನಾರಾಯಣ ನಾಯ್ಕ, ಲಕ್ಷ್ಮಣ ನಾಯ್ಕ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-20-1229217016

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.