ಕುಮಟಾ: ‘ದೇಸಿಯ ಭತ್ತದ ನೂರಾರು ತಳಿಯ ಬೀಜಗಳನ್ನು ಸಂರಕ್ಷಿಸಲು ಬೀಜ ಬ್ಯಾಂಕ್ ಸ್ಥಾಪಿಸಿರುವುದು ಸ್ವಾಗತಾರ್ಹ. ಇದರಿಂದ ಸಾಂಪ್ರದಾಯಿಕ ಕೃಷಿಯ ಬಗ್ಗೆ ಅರಿವು ಮೂಡಲಿದೆ’ ಎಂದು ಜರ್ಮನಿಯ ಕಾನ್ಸುಲೇಟ್ ಜನರಲ್ ಫೆಡರಲ್ ರಿಪಬ್ಲಿಕ್ ಸಂಸ್ಥೆಯ ಪ್ರತಿನಿಧಿ ಕಾಯಾ ಸ್ಕ್ವಾಮ್ ಹೇಳಿದರು.

ಜರ್ಮನಿಯ ಕಾನ್ಸುಲೇಟ್ ಜನರಲ್ ಫೆಡರಲ್ ರಿಪಬ್ಲಿಕ್ ಹಾಗೂ ಶಿರಸಿಯ ಸ್ಕೊಡ್ವೆಸ್ ಸಂಸ್ಥೆ ಸಹಯೋಗದಲ್ಲಿ ತಾಲ್ಲೂಕಿನ ಕಾಗಾಲದಲ್ಲಿ ಪ್ರಗತಿಪರ ಕೃಷಿಕ ನಾಗರಾಜ ನಾಯ್ಕ ಆರಂಭಿಸಿದ ಸಹ್ಯಾದ್ರಿ ಬೀಜ ಬ್ಯಾಂಕ್ ಅನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ತುಂಬಾ ಶ್ರಮದಿಂದ ಸ್ಥಾಪಿಸಿದ ಬೀಜ ಬ್ಯಾಂಕಿನ ಪ್ರಯೋಜನವನ್ನು ಸ್ಥಳೀಯರು ಪಡೆದುಕೊಳ್ಳಬೇಕು’ ಎಂದರು.

ಶಿರಸಿ ಕೃಷಿ ವಿಜ್ಞಾನ ಕೇಂದ್ರ ಹಿರಿಯ ಸಂಶೋಧಕಿ ರೂಪಾ ಪಾಟೀಲ, `ದೇಶದ ಇನ್ಯಾವುದೇ ಪ್ರದೇಶದಲ್ಲಿ ಇಲ್ಲದ ಕಗ್ಗ ಭತ್ತದ ತಳಿ ಇಲ್ಲಿ ಇದೆ’ ಎಂದರು.

ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಎಂ.ಡಿ. ಸುಭಾಶ್ಚಂದ್ರನ್ ಮಾತನಾಡಿ, 'ಹಿಂದೆ ಕೃಷಿ ವೈವಿಧ್ಯತೆಗೆ ಹೆಸರಾಗಿದ್ದ ಭಾರತದಲ್ಲಿ 1.10 ಲಕ್ಷ ಭತ್ತದ ತಳಿಗಳಿದ್ದವು. ಆದರೆ, ಇಂದು ಶೇ 90ರಷ್ಟು ತಳಿಗಳು ಕಳೆದುಹೋಗಿವೆ’ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾಂವ್ಕರ್, ಕೃಷಿ ತಜ್ಞ ಸುಭಾಸ್ ಶಿರಾಲಿ, ನಮೃತಾ ಶರ್ಮ, ಮಂಜುಳಾ ಮುಂದಕಾನ್, ಸ್ಕೊಡ್ವೆಸ್ ಕಾರ್ಯಕ್ರಮ ಅಧಿಕಾರಿ ನಾರಾಯಣ ಹೆಗಡೆ, ಪಿ.ಡಿ.ಒ ನವೀನ ನಾಯ್ಕ, ಗೀತಾ ನಾಯಕ, ಸಿ.ಎಂ. ಪಟಗಾರ, ಶಂಕರ ನಾಯ್ಕ, ರತ್ನಾಕರ ನಾಯ್ಕ, ಭುವನ ಭಾಗ್ವತ, ಪ್ರಶಾಂತ ನಾಯ್ಕ, ಗಂಗಾಧರ ನಾಯ್ಕ ಪಾಲ್ಗೊಂಡಿದ್ದರು. ಪ್ರಗತಿಪರ ಕೃಷಿಕರಾದ ಆರ್.ಜಿ. ಹೆಗಡೆ, ನಾಗರಾಜ ನಾಯ್ಕ ಅವರನ್ನು ಗೌರವಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-20-23236680

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.