ಶಿರಸಿ: ತಾಲ್ಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಲೇಔಟ್ಗಳಲ್ಲಿ ದಾಖಲಾತಿ ಹಾಗೂ ನಿರ್ವಹಣೆ ಸಮಸ್ಯೆ, ರಸ್ತೆ ನಿರ್ಮಾಣದ ಕಳಪೆ ಕಾಮಗಾರಿಗಳ ಕುರಿತಾದ ಗಂಭೀರ ದೂರುಗಳ ಮಧ್ಯೆಯೇ ಶಾಸಕ ಭೀಮಣ್ಣ ನಾಯ್ಕ ಅವರ ನೇತೃತ್ವದಲ್ಲಿ ಗುರುವಾರ ನಡೆದ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರ ಹಲವು ಅರ್ಜಿಗಳನ್ನು ಇತ್ಯರ್ಥ ಮಾಡಲಾಯಿತು.

ದೊಡ್ನಳ್ಳಿಯ ಶಂಭುಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಯಿತು.

ಸಭೆಯಲ್ಲಿ ಪ್ರಮುಖವಾಗಿ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹90 ಸಾವಿರ ವೆಚ್ಚದ ರಸ್ತೆ ಕಾಮಗಾರಿಯಲ್ಲಿ ಕೇವಲ ಮಣ್ಣು ಸುರಿದು ಕಳಪೆ ಮಾಡಲಾಗಿದೆ ಎಂದು ಸ್ಥಳೀಯರು ಶಾಸಕರ ಮುಂದೆ ಆಕ್ರೋಶ ಹೊರಹಾಕಿದರು. ಅಲ್ಲದೆ, ಕಳೆದ ಹಲವು ವರ್ಷಗಳ ಹಿಂದೆ ಹಸ್ತಾಂತರಿಸಿಕೊಂಡ ಲೇಔಟ್ಗಳಿಗೆ ಸರಿಯಾದ ದಾಖಲಾತಿಗಳಿಲ್ಲ ಹಾಗೂ ಯಾವುದೇ ನಿರ್ವಹಣೆಯೂ ನಡೆಯುತ್ತಿಲ್ಲ ಎಂದು ನಿವಾಸಿಗಳು ಅಹವಾಲು ಹೇಳಿಕೊಂಡರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜತೆಗೆ, ವಿದ್ಯುತ್ ಸಂಪರ್ಕ, ಮನೆ ನಂಬರ್ ಮತ್ತು ರಸ್ತೆ ನಿರ್ವಹಣೆ ಕುರಿತಾದ ಅಹವಾಲುಗಳನ್ನು ಆಲಿಸಿ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಿದರು.

‘ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತವಾಗದೆ ಗ್ರಾಮೀಣ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು’ ಎಂದು ಎಚ್ಚರಿಸಿದ ಶಾಸಕರು, ‘ಜನರ ಮನೆಬಾಗಿಲಿಗೇ ಆಡಳಿತ ತರುವುದೇ ಸಭೆಯ ಉದ್ದೇಶ’ ಎಂದರು.

ಸಭೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಉಪವಿಭಾಗಾಧಿಕಾರಿ ಚಂದ್ರಶೇಖರ, ತಹಶೀಲ್ದಾರ ಪಟ್ಟರಾಜ ಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯಿತಿ ಪ್ರತಿನಿಧಿಗಳು ಇದ್ದರು.

ಜನಸಾಮಾನ್ಯರು ಕೆಲಸಗಳಿಗಾಗಿ ಅಲೆದಾಡುವುದನ್ನು ತಪ್ಪಿಸಬೇಕು. ಈ ನಿಟ್ಟಿನಲ್ಲಿ ಆಡಳಿತ ಅಧಿಕಾರಿ ವರ್ಗ ಸದಾ ಕಾರ್ಯ ನಿರ್ವಹಿಸಬೇಕು
ಭೀಮಣ್ಣ ನಾಯ್ಕ ಶಾಸಕ

ಸ್ವಂತ ಖರ್ಚಿನಲ್ಲಿ ಹೊಲಿಗೆ ಯಂತ್ರ ವಿತರಣೆ

ಸಭೆಯಲ್ಲಿ ಕಲ್ಪನಾ ಶರತ್ ಪಾವಸ್ಖರ್ ಎಂಬ ಮಹಿಳೆಯು ತಾನು ಅತ್ಯಂತ ಬಡವಳಾಗಿದ್ದು ಜೀವನೋಪಾಯಕ್ಕಾಗಿ ಹೊಲಿಗೆ ಯಂತ್ರವೊಂದನ್ನು ನೀಡುವಂತೆ ಮನವಿ ಮಾಡಿದರು. ಮಹಿಳೆಯ ಅಳಲನ್ನು ತಕ್ಷಣವೇ ಆಲಿಸಿದ ಶಾಸಕರು ಯಾವುದೇ ವಿಳಂಬ ಮಾಡದೆ ತಮ್ಮ ಸ್ವಂತ ಖರ್ಚಿನಲ್ಲಿ ಅಂಗಡಿಯಿಂದ ಹೊಸ ಹೊಲಿಗೆ ಯಂತ್ರವನ್ನು ತರಿಸಿ ಸ್ಥಳದಲ್ಲೇ ಹಸ್ತಾಂತರಿಸಿದರು. ಇದೇ ವೇಳೆ ಮತ್ತೊಬ್ಬ ಮಹಿಳೆ ತನ್ನ ಪತಿಯ ಅನಾರೋಗ್ಯದ ಕುರಿತು ಪ್ರಸ್ತಾಪಿಸಿದಾಗ ಅವರಿಗೂ ಶಾಸಕರು ವೈಯಕ್ತಿಕವಾಗಿ ಧನಸಹಾಯ ಮಾಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.