ಕುಮಟಾ: `ಗೋವಿನಲ್ಲಿ ತಾಯಿಯನ್ನು ಕಾಣುವ ಸಂಸ್ಕೃತಿಯನ್ನು ಬೆಳೆಸಿಕೊಂಡರೆ ಆರೋಗ್ಯವಂತರಾಗಿ ದೀರ್ಘ ಕಾಲ ಬಾಳುವ ದೈಹಿಕ, ಮಾನಸಿಕ ಸ್ಥಿತಿ ಲಭಿಸುತ್ತದೆ' ಎಂದು ಶಿರಸಿಯ ಶ್ರೀ ಕೃಷ್ಣ ಭಾರತೀಯ ಗೋ ತಳಿ ಸಂರಕ್ಷಣಾ ಕೇಂದ್ರದ ಕಾರ್ಯದರ್ಶಿ ಕರುಣಾಕರ ನಾಯ್ಕ ಹೇಳಿದರು.

ಪಟ್ಟಣದ ಡಾ. ಎ.ವಿ.ಬಾಳಿಗಾ ವಾಣಿಜ್ಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘ ಈಚೆಗೆ ಏರ್ಪಡಿಸಿದ್ದ ` ಗೋ ರಕ್ಷಣೆ' ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಆಧುನಿಕ ಪದ್ಧತಿ ಕೃಷಿ ಅಳವಡಿಕೆಯಿಂದ ಹೈನುಗಾರಿಕೆ ಆಧಾರಿತ ಕೃಷಿ ನಿಧಾನವಾಗಿ ನಶಿಸುತ್ತಿದೆ. ಯಾವುದೇ ಕೃಷಿಗೆ ಹಸವಿನ ಗೊಬ್ಬರ, ಕೃಷಿಕರ ಆರೋಗ್ಯಕ್ಕೆ ಹಾಲಿನ ಉತ್ಪನ್ನಗಳ ಬಳಕೆ ಮಾಡುವುದು ಪ್ರಕೃತಿದತ್ತವಾದ ನಿಯಮವಾಗಿತ್ತು. ಆದರೆ ಅದನ್ನು ಮೀರಿದ ಆಧುಕಿನ ಕೃಷಿ ಪದ್ಧತಿಯಿಂದ ಗೋರಕ್ಷಣೆಯಂಥ ನಮ್ಮ ಅತ್ಯುತ್ತಮ ಸಂಸಕೃತಿ ಆಧಾರಿತ ಜೀವನ ಪದ್ಧತಿ ಮಾಯವಾಗುತ್ತಿದೆ. ಅದನ್ನು ರಕ್ಷಿಸಲು ಹೊಸ ಪೀಳಿಗೆ ಮುಂದಾಗಬೇಕಿದೆ' ಎಂದರು.

ಪ್ರಾಚಾರ್ಯ ಎನ್.ಡಿ. ನಾಯಕ, `ಗೋ ತಳಿ ರಕ್ಷಣೆ ನಮ್ಮ ಸಂಸ್ಕೃತಿಯ ಭಾಗದ ಜೊತೆಗೆ ಅರ್ಥಿಕ ವ್ಯವಸ್ಥೆಯ ಭಾಗವೂ ಆಗಿದೆ' ಎಂದರು. ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಅರವಿಂದ ನಾಯಕ, ಪದಾಧಿಕಾರಿಗಳಾದ ವಿಕಾಸ ನಾಯ್ಕ, ದೀಪಾ ಪೈ, ಮಂಜುನಾಥ ವೆರ್ಣೇಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.