ಶಿರಸಿ: ಇಲ್ಲಿನ ಎಂ.ರಮೇಶ ಪ್ರಶಸ್ತಿ ಸಮಿತಿಯಿಂದ ವಾರ್ಷಿಕವಾಗಿ ನೀಡುವ ‘ಎಂ.ರಮೇಶ ಪ್ರಶಸ್ತಿ’ಗೆ ಹಿರಿಯ ಯಕ್ಷಗಾನ ಕಲಾವಿದ ತ್ರಯಂಬಕ ಹೆಗಡೆ ಇಡುವಾಣಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಪ್ರಶಸ್ತಿ ಸಮಿತಿಯ ಸ್ಥಾಪಕಿ ವಿಜಯನಳಿನಿ ರಮೇಶ ಈ ಕುರಿತು ಮಾಹಿತಿ ನೀಡಿದ್ದು, ‘ಮೂರು ವರ್ಷಗಳಿಂದ ಯಕ್ಷಗಾನ, ನಾಟಕ, ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಿರುವ ಸಾಧಕರಿಗೆ ಎಂ.ರಮೇಶ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತ ಬರಲಾಗಿದೆ. ಈ ವರ್ಷದ ಪ್ರಶಸ್ತಿಗೆ ತ್ರಯಂಬಕ ಹೆಗಡೆ ಇಡುವಾಣಿ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ನಗರದ ನಯನ ಸಭಾಂಗಣದಲ್ಲಿ ಜ.5 ರಂದು ಆಯೋಜನೆಗೊಂಡಿದೆ. ಮಹಾಗಣಪತಿ ಯಕ್ಷಗಾನ ಮಂಡಳಿ ಇಡಗುಂಜಿಯ ಸಂಚಾಲಕ ಶಿವಾನಂದ ಹೆಗಡೆ ಕೆರೆಮನೆ ಅಧ್ಯಕ್ಷತೆ ವಹಿಸುವರು. ನೇತ್ರತಜ್ಞ ಡಾ.ಮೋಹನ ಹೊಸಬಾಳೆ ಪ್ರಶಸ್ತಿ ಪ್ರದಾನ ಮಾಡುವರು. ಸಮಿತಿಯ ಸಂಚಾಲಕಿ ಪ್ರಜ್ಞಾ ಮತ್ತಿಹಳ್ಳಿ, ಸದಸ್ಯ ಮಧುಕೇಶ್ವರ ಮತ್ತಿಹಳ್ಳಿ ಇತರರು ಇರಲಿದ್ದಾರೆ’ ಎಂದು ತಿಳಿಸಿದ್ದಾರೆ.

‘ಪ್ರತಿವರ್ಷ ಯಕ್ಷಗಾನ, ನಾಟಕ, ಸಾಹಿತ್ಯ ಕ್ಷೇತ್ರಗಳ ಯಾವುದಾದರೊಂದರಲ್ಲಿ ದೀರ್ಘಕಾಲ ಸೇವೆಸಲ್ಲಿಸುತ್ತಿದ್ದು, ಅವರ ಸಾಧನೆಗೆ ಈವರೆಗೆ ಯಾವುದೇ ಪ್ರಶಸ್ತಿ-ಪುರಸ್ಕಾರಗಳು ದೊರಕದಿರುವ ಪ್ರತಿಭಾವಂತರನ್ನು ಗುರುತಿಸಿ, ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.