ರಾಜೇಂದ್ರ ಹೆಗಡೆ

ಶಿರಸಿ: ಅಡಿಕೆ ತೋಟಗಳಲ್ಲಿ ಅಡಿಕೆ ಮಿಳ್ಳೆ (ಮುಗುಡು) ಉದುರುವಿಕೆ ನಿಯಂತ್ರಿಸಲು ಬೆಳೆಗಾರರು ಸಿಂಪಡಿಸುತ್ತಿರುವ ತೀವ್ರ ಸ್ವರೂಪದ ರಾಸಾಯನಿಕಗಳು, ಪ್ರಕೃತಿಯ ಜೀವನಾಡಿಯಾದ ಜೇನುಹುಳುಗಳ ಮಾರಣಹೋಮಕ್ಕೆ ಕಾರಣವಾಗುತ್ತಿವೆ.

ಅಡಿಕೆಯಲ್ಲಿ ಸಿಂಗಾರ ಮೂಡುವ ಸುಂದರ ಸಮಯದಿಂದ ಆರಂಭಿಸಿ, ಅದು ಕಾಯಿಯಾಗಿ ಮುಗುಡು ಕಟ್ಟುವವರೆಗೂ ಒಂದಿಲ್ಲೊಂದು ಕೀಟನಾಶಕಗಳ ಸಿಂಪಡಣೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಪ್ರಸ್ತುತ ಎದುರಾಗಿರುವ ಹವಾಮಾನ ವೈಪರಿತ್ಯದಿಂದಾಗಿ ತೋಟಗಳಲ್ಲಿ ಮುಗುಡು ಉದುರುವ ಸಮಸ್ಯೆ ತೀವ್ರಗೊಂಡಿದೆ. ಇದರಿಂದ ಕಂಗಾಲಾಗಿರುವ ರೈತರು, ರೋಗ ತಡೆಯುವ ಆತುರದಲ್ಲಿ ಕೀಟನಾಶಕಗಳ ಬಳಕೆಯ ಪ್ರಮಾಣವನ್ನು ದುಪ್ಪಟ್ಟುಗೊಳಿಸಿದ್ದಾರೆ.

‘ಬನವಾಸಿ ಭಾಗದಲ್ಲಿ ಈಚಿನ ದಿನಗಳಲ್ಲಿ ಕೀಟನಾಶಕಗಳ ಅತಿಯಾದ ಬಳಕೆ ಕಂಡುಬರುತ್ತಿದ್ದು, ವಡ್ಡಿನಕೊಪ್ಪದ ಪ್ರಗತಿಪರ ಜೇನು ಸಾಕಣೆದಾರೊಬ್ಬರಿಗೆ ಸೇರಿದ 15ಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳ ಇಡೀ ಜೇನು ಕುಟುಂಬವೇ ರಾಸಾಯನಿಕ ವಿಷಕ್ಕೆ ಬಲಿಯಾಗಿದೆ. ಸುತ್ತಮುತ್ತಲಿನ ಪರಿಸರದಲ್ಲೂ ಜೇನುಹುಳುಗಳು ಸತ್ತು ಬೀಳುತ್ತಿದೆ’ ಎಂದು ಜೇನು ಸಂರಕ್ಷಕ ಆರ್.ಪಿ.ಹೆಗಡೆ ಆತಂಕ ವ್ಯಕ್ತಪಡಿಸಿದರು.

‘ಅಡಿಕೆ ಹಿಂಗಾರಿನ ರಕ್ಷಣೆಗಾಗಿ ಬಳಸಲಾಗುವ ಇಮಿಡಾಕ್ಲೋಪ್ರಿಡ್, ಕ್ಲೋರೋಪೈರಿಫಾಸ್ ಅಥವಾ ಸಿಂಥೆಟಿಕ್ ಪೈರೆಥ್ರಾಯ್ಡ್ಗಳಂತಹ ಕೀಟನಾಶಕಗಳು ಜೇನುಹುಳುಗಳ ನರಮಂಡಲದ ಮೇಲೆ ನೇರ ದಾಳಿ ನಡೆಸುತ್ತವೆ. ಜೇನುಹುಳುಗಳು ಅಡಿಕೆ ಹೂವಿನಿಂದ ಪರಾಗ ಮತ್ತು ಮಕರಂದವನ್ನು ಸಂಗ್ರಹಿಸಲು ಹೋದಾಗ ಈ ವಿಷಕಾರಿ ಅಂಶಗಳು ಅವುಗಳ ದೇಹವನ್ನು ಸೇರಿ, ಸ್ಥಳದಲ್ಲೇ ಸಾವು ಸಂಭವಿಸುತ್ತದೆ. ಕೆಲವು ಜೇನುಗಳು ಗೂಡಿಗೆ ಮರಳಿದರೂ ಇಡೀ ಜೇನು ಕುಟುಂಬಕ್ಕೆ ವಿಷ ಹರಡುತ್ತವೆ. ಇದು ಜೇನು ಸಾಕಣೆದಾರರ ಆರ್ಥಿಕ ನಷ್ಟಕ್ಕೆ ಮಾತ್ರವಲ್ಲದೆ, ಇಡೀ ಜೀವವೈವಿಧ್ಯಕ್ಕೆ ಮಾರಕ’ ಎನ್ನುತ್ತಾರೆ ಅವರು.

‘ಜೇನುಹುಳುಗಳು ಕೇವಲ ಜೇನುತುಪ್ಪ ನೀಡುವುದಕ್ಕಷ್ಟೇ ಸೀಮಿತವಾಗಿಲ್ಲ. ಇವು ಪ್ರಕೃತಿಯ ಅತ್ಯುತ್ತಮ ಪರಾಗಸ್ಪರ್ಶಕಗಳು. ತೋಟಗಳಲ್ಲಿ ಜೇನು ಸಾಕಣೆ ಮಾಡುವುದರಿಂದ ಅಡಿಕೆ ಇಳುವರಿಯಲ್ಲಿ ಶೇ 20ರಿಂದ 40 ರಷ್ಟು ಇಳುವರಿ ಹೆಚ್ಚುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಗುಣಮಟ್ಟದ ಕಾಯಿ ಕಚ್ಚಲು ಮತ್ತು ಉತ್ತಮ ಫಸಲು ಪಡೆಯಲು ಜೇನುಹುಳುಗಳ ಪರಾಗಸ್ಪರ್ಶ ಪ್ರಕ್ರಿಯೆಯೇ ಮೂಲ ಕಾರಣವಾಗಿದೆ. ಜೇನುಗಳೇ ಇಲ್ಲದಿದ್ದರೆ ಭವಿಷ್ಯದಲ್ಲಿ ಅಡಿಕೆ ಇಳುವರಿಯೂ ಕುಸಿಯಲಿದೆ ಎಂಬ ಸತ್ಯವನ್ನು ರೈತರು ಅರಿಯಬೇಕಿದೆ’ ಎನ್ನುತ್ತಾರೆ ಪ್ರಕೃತಿ ಸಂಸ್ಥೆ ಮುಖ್ಯಸ್ಥ ಪಾಂಡುರಂಗ ಹೆಗಡೆ.

ಕೆಲವೆಡೆ ರೈತರು ತೋಟಗಾರಿಕಾ ಇಲಾಖೆ ಶಿಫಾರಸು ಮಾಡಿದ ಕೀಟನಾಶಕಗಳನ್ನು ಬಿಟ್ಟು, ತೀವ್ರ ವಿಷಕಾರಿ ರಾಸಾಯನಿಕಗಳನ್ನು ಬಳಸುತ್ತಿರುವುದೇ ಈ ದುರಂತಕ್ಕೆ ಕಾರಣ

-ಗಣೇಶ ಹೆಗಡೆ ತೋಟಗಾರಿಕಾ ಇಲಾಖೆ ಅಧಿಕಾರಿ

ಬಳಕೆಗೆ ನಿಷೇಧ ಹೇರಲಿ

‘ಅಡಿಕೆ ಬೆಳೆಯ ರಕ್ಷಣೆಯೂ ಆಗಬೇಕು, ಇನ್ನೊಂದೆಡೆ ಪರಿಸರಕ್ಕೆ ಪೂರಕವಾದ ಜೇನು ಸಂತತಿಗೂ ಹಾನಿಯಾಗಬಾರದು. ಇದಕ್ಕಾಗಿ ಜೈವಿಕ ಕೀಟನಾಶಕಗಳನ್ನು ಬಳಸಬೇಕು. ಜೇನು ಸಂತತಿಗೆ ಮಾರಕವಾಗುವ ಕೀಟನಾಶಕಗಳ ಬಳಕೆಗೆ ನಿಷೇಧ ಹೇರಬೇಕು. ಈ ಕುರಿತು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಜೇನು ಸಂರಕ್ಷಕ ಆರ್.ಪಿ.ಹೆಗಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.