ಗೋಕರ್ಣ ಸಮುದ್ರದಲ್ಲಿ ಮುಳುಗಿ ಪ್ರವಾಸಿಗ ಸಾವು

ಗೋಕರ್ಣ: ಇಲ್ಲಿಯ ಮೇನ್ ಬೀಚಿನ ಕರಿಯಪ್ಪಕಟ್ಟೆಯ ಬಳಿ, ಶನಿವಾರ ಬೆಳ್ಳಿಗೆ ಸಮುದ್ರದಲ್ಲಿ ಈಜಾಡಲು ಇಳಿದ ಬಿಹಾರ ಮೂಲದ ಪ್ರವಾಸಿಗರೊಬ್ಬರು ಅಲೆಯ ರಭಸಕ್ಕೆ ಸಿಕ್ಕಿ ಮೃತಪಟ್ಟಿದ್ದಾರೆ.
ಕುಮಾರ ಅಭಿಷೇಕ್ (28) ಮೃತಪಟ್ಟ ಪ್ರವಾಸಿಗರಾಗಿದ್ದಾರೆ. ಇವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, 4 ಜನ ಗೆಳೆಯರೊಂದಿಗೆ ಗೋಕರ್ಣಕ್ಕೆ ಬಂದಿದ್ದರು. ಇಲ್ಲಿಯ ಖಾಸಗಿ ವಸತಿ ಗೃಹದಲ್ಲಿ ಉಳಿದಿದ್ದರು. ಶನಿವಾರ ಮುಂಜಾನೆ ಗೆಳೆಯರೊಂದಿಗೆ ಸಮುದ್ರದಲ್ಲಿ ಈಜಾಡಲು ತೆರಳಿದಾಗ ಈ ಘಟನೆ ನಡೆದಿದೆ. ಕೂಡಲೇ ದಡಕ್ಕೆ ತಂದು ರಕ್ಷಿಸಲು ನೋಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.