ಕುಮಟಾ: ನೆರೆಯ ಅಂಕೋಲಾಕ್ಕೆ ಮಾತ್ರ ಸೀಮಿತವಾಗಿದ್ದ ಕರಿ ಈಶಾಡ ಹಾಗೂ ಇತರೆ ಜಾತಿಯ ಉತ್ತಮ ಮಾವಿನ ಹಣ್ಣಿನ ಸವಿಯನ್ನು ಅಲ್ಲಿಯ ಮಹಿಳೆಯರು ತಾಲ್ಲೂಕಿಗೂ ಹಂಚುತ್ತಿದ್ದಾರೆ.

ಸುಮಾರು ಐದು ವರ್ಷಗಳ ಹಿಂದೆ ಮಾವು ಪ್ರಿಯರಿಗೆ ಉತ್ತಮ ತಳಿಯ ಮಾವು ಪಟ್ಟಣದಲ್ಲಿ ಹೇರಳ ಪ್ರಮಾಣದಲ್ಲಿ ಸಿಗುತ್ತಿರಲಿಲ್ಲ. ಈಚೆಗೆ ಅಂಕೋಲಾದ ಮಹಿಳೆಯರು ನಿತ್ಯ ಐದಾರು ವಾಹನಗಳಲ್ಲಿ ಮಾವಿನ ಹಣ್ಣನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಪಟ್ಟಣದ ಗಿಬ್ ವೃತ್ತ, ಹೊಸ ಬಸ್ ನಿಲ್ದಾಣ ಎದುರು, ಮಾರುಕಟ್ಟೆ ಪ್ರದೇಶ ಹೀಗೆ ಜನ ಜಂಗುಳಿ ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.

ಅಂಕೋಲಾದ ಕರಿ ಈಶಾಡ ಮಾವು ಜೊತೆ, ರತ್ನಾಗಿರಿ ಆಪೂಸ್ ಮುಂತಾದ ಉತ್ತಮ ಗುಣಮಟ್ಟದ ಮಾವನ್ನೂ ಮಾರಾಟ ಮಾಡುತ್ತಿದ್ದಾರೆ. ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದಿಂದ ಮಾರುಕಟ್ಟೆಗೆ ಬರುವ ಗ್ರಾಹಕರು ಹಣ್ಣು ಖರೀದಿಗೆ ಮುಗಿಬೀಳುತ್ತಿದ್ದಾರೆ.

‘25ಕ್ಕೂ ಹೆಚ್ಚು ಮಹಿಳೆಯರು ಮಾವಿನ ಹಣ್ಣಿನ ಬುಟ್ಟಿಗಳನ್ನು ಐದಾರು ವಾಹನಗಳಲ್ಲಿ ತುಂಬಿಕೊಂಡು ಬಂದು ಮೊದಲೇ ಆಯ್ಕೆ ಮಾಡಿಕೊಂಡ ಸ್ಥಳದಲ್ಲಿ ವ್ಯಾಪಾರ ಮಾಡುತ್ತೇವೆ. ಈ ವರ್ಷ ಮಾವಿನ ಬೆಳೆಗೆ ವಾತಾವರಣ ಚೆನ್ನಾಗಿದ್ದುದರಿಂದ ಉತ್ತಮ ಇಳುವರಿ ಬಂದಿದೆ. ಹಳ್ಳಿ ಭಾಗದ ವ್ಯಾಪಾರಿಗಳಿಗೆ ಆದಾಯ ಗಳಿಕೆಗೆ ದಾರಿಯಾಗಿದೆ’ ಎಂದು ವ್ಯಾಪಾರಿ ಅಂಕೋಲಾದ ಮಂಜುಳಾ ಗೌಡ ಹೇಳಿದರು.

‘ವ್ಯಾಪಾರ ಮುಗಿಸಿ ಊರಿಗೆ ಹೋದ ನಂತರ ಮಾವು ಗುತ್ತಿಗೆದಾರರಿಂದ ಹಣ್ಣು ಖರೀದಿಸಿ ನಾಳಿನ ವ್ಯಾಪಾರಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಸಂಜೆ ಹೊತ್ತು ಮಾವಿನ ಹಣ್ಣು ಮಾರಾಟವಾಗದೆ ಉಳಿದರೆ ಅದನ್ನು ಕೊಂಚ ಕಡಿಮೆ ದರಕ್ಕೆ ಮಾರಾಟ ಮಾಡುತ್ತೇವೆ. ಪ್ರತಿಯೊಬ್ಬರು ದಿನವೊಂದಕ್ಕೆ ಸರಾಸರಿ 350 ರಿಂದ 400 ಮಾವಿನ ಹಣ್ಣನ್ನು ಮಾರಾಟ ಮಾಡುತ್ತೇವೆ. ಕಳೆದ ಕೆಲ ವರ್ಷಗಳಲ್ಲಿ ಇಲ್ಲಿ ನಮ್ಮದೇ ಅನೇಕ ಗ್ರಾಹಕರನ್ನು ಸೃಷ್ಟಿಸಿಕೊಂಡಿದ್ದೇವೆ’ ಎಂದರು.

‘ಉತ್ತಮ ಮಾವಿನ ಹಣ್ಣು ಖರೀದಿಗೆ ಅಂಕೋಲಾಕ್ಕೆ ಹೋಗಬೇಕಿತ್ತು. ಈಗ ಬೇರೆ ಬೇರೆ ತಳಿಯ ಮಾವಿನ ಹಣ್ಣು ಪಟ್ಟಣದಲ್ಲಿಯೇ ಲಭ್ಯವಾಗುತ್ತಿರುವುದು ಮಾವು ಪ್ರಿಯರಿಗೆ ಅನುಕೂಲವಾಗಿದೆ’ ಎಂದು ಗ್ರಾಹಕ ಪ್ರವೀಣ ನಾಯ್ಕ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.