ಭಟ್ಕಳ: ಜಾಲಿ ಪಟ್ಟಣ ಪಂಚಾಯಿತಿಯ 13 ವಾರ್ಡ್ಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ 64.58ರಷ್ಟು ಮತದಾರರು ಹಕ್ಕು ಚಲಾಯಿಸಿದರು. ಮತದಾನ ಬಹುತೇಕ ಶಾಂತಿಯುತವಾಗಿತ್ತು. ಎರಡು ಮತಗಟ್ಟೆಗಳ ಬಳಿ ಮತಯಾಚನೆ ಮಾಡುವ ವಿಚಾರದಲ್ಲಿ ತಳ್ಳಾಟವಾಗಿದ್ದು, ಪೊಲೀಸರು ಲಾಠಿ ಬೀಸಿ ಪರಿಸ್ಥಿತಿ ನಿಯಂತ್ರಿಸಿದರು.

ಒಟ್ಟು 20 ವಾರ್ಡ್ಗಳ ಪೈಕಿ ಏಳು ವಾರ್ಡ್ಗಳಲ್ಲಿ ತಂಝೀಂ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 13 ವಾರ್ಡ್ಗಳಿಗೆ ಚುನಾವಣೆ ನಡೆದಿದ್ದು, ಮತ ಎಣಿಕೆಯು ಡಿ.30ರಂದು ನಡೆಯಲಿದೆ.

ಕೆಲವು ವಾರ್ಡ್ಗಳಲ್ಲಿ ಕಡಿಮೆ ಮತದಾನವಾಗಿದೆ. ಅಲ್ಲಿನ ಹಲವರು ವಿದೇಶಗಳಲ್ಲಿ ವಾಸವಾಗಿರುವುದು ಇದಕ್ಕೆ ಕಾರಣವಾಗಿದೆ. ವಾರ್ಡ್ ಸಂಖ್ಯೆ 10 ಜಾಲಿಕೋಡಿಯಲ್ಲಿ ಅತಿ ಹೆಚ್ಚು ಶೇ 80.98ರಷ್ಟು ಮತದಾನವಾಗಿದೆ. ವಾರ್ಡ್ ಸಂಖ್ಯೆ 18 ಮದೀನಾ ಕಾಲೊನಿಯಲ್ಲಿ ಅತಿ ಕಡಿಮೆ ಶೇ 37.54ರಷ್ಟು ಹಕ್ಕು ಚಲಾವಣೆಯಾಗಿದೆ.

ಅಲ್ಲಲ್ಲಿ ತಳ್ಳಾಟ:

ವಾರ್ಡ್ ಸಂಖ್ಯೆ 9 ಜಾಲಿ ಹಾಗೂ ವಾರ್ಡ್ ಸಂಖ್ಯೆ 6 ಹುರಳಿಸಾಲಿನಲ್ಲಿ ಚುನಾವಣೆ ಕಣ ಎರಡು ಗುಂಪುಗಳ ನಡುವೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು. 100ಕ್ಕಿಂತ ಅಧಿಕ ಮಂದಿ ಈ ಎರಡು ವಾರ್ಡ್ಗಳ ಮತಗಟ್ಟೆಯ ರಸ್ತೆಗಳ ಇಕ್ಕೆಲಗಳಲ್ಲಿ ಸೇರಿದ್ದರು. ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಲ್ಲಿ ತಳ್ಳಾಟ, ನೂಕಾಟ ನಡೆಯಿತು. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಲಾಠಿ ಬೀಸಿ ಪರಿಸ್ಥಿತಿ ತಿಳಿಗೊಳಿಸಿದರು.

ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ತಂಝೀಂ ಬೆಂಬಲಿತ ಅಭ್ಯರ್ಥಿಗಳ ವಿರುದ್ದ ಎಂಟು ಜನ ಪಕ್ಷೇತರರು ಕಣಕ್ಕಿಳಿದಿದ್ದಾರೆ. ಇದು ಈ ಬಾರಿಯ ಚುನಾವಣೆ ಮತ್ತಷ್ಟು ಪ್ರತಿಷ್ಠೆಯ ಕಣವಾಗಲು ಕಾರಣವಾಯಿತು.

ಸಿ.ಪಿ.ಐ ದಿವಾಕರ, ಪಿ.ಎಸ್.ಐ.ಗಳಾದ ಭರತ್, ಸುಮಾ.ಬಿ ಹಾಗೂ ಹನುಮಂತಪ್ಪ ಕುಡುಗುಂಟಿ ಸ್ಥಳದಲ್ಲೇ ಇದ್ದು ಬಂದೋಬಸ್ತ್ ನೋಡಿಕೊಂಡರು. ಮತದಾನ ಮುಗಿದ ನಂತರ ಮತಯಂತ್ರಗಳನ್ನು ಭಟ್ಕಳದ ಶ್ರೀ ಗುರುಸುಧೀಂದ್ರ ಕಾಲೇಜಿನಲ್ಲಿ ಇಡಲಾಗಿದೆ.

ಕೋವಿಡ್ ನಿಯಮ ಪಾಲನೆ:

ಪಟ್ಟಣ ಪಂಚಾಯಿತಿಯ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳ ಸಂಪೂರ್ಣ ಚಿತ್ರೀಕರಣ ನಡೆಸಲಾಯಿತು. ಪ್ರತಿ ಮತಗಟ್ಟೆಗೂ ಶುಶ್ರೂಷಕಿಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗಿತ್ತು. ಮತದಾರರ ದೇಹದ ಉಷ್ಣತೆ ತಪಾಸಣೆ ಮಾಡಿ, ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು. ಮತಗಟ್ಟೆ ಒಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿತ್ತು. ಮುಖಗವಸು ಧರಿಸದವರಿಗೆ ಮತಗಟ್ಟೆ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ.

ಜಾಲಿ ಪ.ಪಂ ಚುನಾವಣೆ: ಅಂಕಿ ಅಂಶ

20 – ಒಟ್ಟು ವಾರ್ಡ್ಗಳು

13 – ಚುನಾವಣೆ ನಡೆದ ವಾರ್ಡ್ಗಳು

7 – ಅವಿರೋಧ ಆಯ್ಕೆಯಾದ ವಾರ್ಡ್ಗಳು

35 – ಸ್ಪರ್ಧಿಗಳು

6,580 – ಹಕ್ಕು ಚಲಾಯಿಸಿದ ಮತದಾರರು

3,235 – ಮತ ಚಲಾಯಿಸಿದ ಪುರುಷರು

3,345 – ಮತ ಚಲಾಯಿಸಿದ ಮಹಿಳೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.