ಮುಂಡಗೋಡ: ಇಲ್ಲಿನ ಬಸ್ ನಿಲ್ದಾಣದಿಂದ ಕಲಘಟಗಿ ಮಾರ್ಗದ ಬಸ್ಗಾಗಿ ಎರಡು ಗಂಟೆ ಕಾದರೂ, ಬಸ್ ಬಾರದ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ಪ್ರಯಾಣಿಕರು, ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ರಾಜ್ಯ ರಸ್ತೆ ಸಾರಿಗೆಯ ಬಸ್ ತಡೆದು, ಭಾನುವಾರ ಪ್ರತಿಭಟಿಸಿದರು.

ಪ್ರತಿದಿನ ಸಂಜೆ ಕಲಘಟಗಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ನಿಗದಿತ ಸಮಯ ಮೀರಿ ಒಂದು ಗಂಟೆ ಕಳೆದರೂ ಬಂದಿಲ್ಲ. ಈ ಮಾರ್ಗದಲ್ಲಿ ಹೋಗುವ ಪ್ರಯಾಣಿಕರ ಸಂಖ್ಯೆಯೂ ಎಂದಿಗಿಂತ ತುಸು ಹೆಚ್ಚಿತ್ತು. ಬದಲಿಯಾಗಿ ಸ್ಥಳೀಯ ಡಿಪೋದಿಂದ ಬಸ್ ವ್ಯವಸ್ಥೆ ಕಲ್ಪಿಸುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ. ಆದರೆ, ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಆಕ್ರೋಶಗೊಂಡ ಪ್ರಯಾಣಿಕರು, ಹುಬ್ಬಳ್ಳಿಗೆ ಹೊರಟಿದ್ದ ಬಸ್ ಅನ್ನು ಏಕಾಏಕಿ ತಡೆದು, ಪ್ರತಿಭಟಿಸಿದರು.

ಸ್ಥಳಕ್ಕೆ ಬಂದ ಪೊಲೀಸರು, ಪ್ರಯಾಣಿಕರ ಮನವೊಲಿಸಿ, ಬಸ್ಗಳು ಸುಗಮವಾಗಿ ಸಂಚರಿಸುವಂತೆ ಕ್ರಮ ಕೈಗೊಂಡರು. ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ, ಸ್ಥಳೀಯ ಡಿಪೋದಿಂದ ಬದಲಿಯಾಗಿ ಕಲಘಟಗಿ ಮಾರ್ಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಯಿತು.

'‘ಹಾನಗಲ್ ಘಟಕದಿಂದ ಸಂಜೆ ಬರಬೇಕಿದ್ದ ಬಸ್ ಬಂದಿಲ್ಲ. ಇದರಿಂದ ಕಲಘಟಗಿ ಮಾರ್ಗದಲ್ಲಿ ಬಸ್ ಇಲ್ಲದಂತಾಗಿತ್ತು. ಪಾಳಿ ಮುಗಿಸಿ, ಊಟಕ್ಕೆ ಹೊರಟಿದ್ದ ಚಾಲಕ, ನಿರ್ವಾಹಕರಿಗೆ, ಕಲಘಟಗಿಗೆ ಹೋಗಿ ಬರುವಂತೆ ಸೂಚಿಸಿ, ಪರ್ಯಾಯವಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಯಿತು’ ಎಂದು ಘಟಕ ವ್ಯವಸ್ಥಾಪಕ ಎಸ್.ಎಂ.ಕುರ್ತಕೋಟಿ ಹೇಳಿದರು.

‘ಕಲಘಟಗಿ ಮಾರ್ಗವಾಗಿ ಪ್ರತಿದಿನ ರಾತ್ರಿ 8.30ಕ್ಕೆ ಇಲ್ಲಿನ ನಿಲ್ದಾಣದಿಂದ ಬಸ್ ಬಿಡಬೇಕು. ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ’ ಎಂದು ಯುವಮುಖಂಡ ಕೆಂಜೋಡಿ ಗಲಬಿ ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-20-405178498

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.