ಕಾರವಾರ: ಮುಂಡಗೋಡ ತಾಲ್ಲೂಕಿನ ವಿವಿಧ ಸಹಕಾರ ಸಂಘಗಳಿಗೆ ಸಮಾಪನ ಅಧಿಕಾರಿಯನ್ನಾಗಿ ಮುಂಡಗೋಡ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿಯನ್ನು ನೇಮಿಸಲಾಗಿದೆ.

ಮುಂಡಗೋಡದ ಕುಂಬಾರರ ಸಮಾಜದ ಕುಶಲ ಕೈಗಾರಿಕೆ ಕೆಲಸಗಾರರ ಸಹಕಾರ ಸಂಘ, ಹೊಸಕೊಪ್ಪದ ಪಂಚವಟಿ ಮಹಿಳಾ ಮೀನುಗಾರರ ವಿವಿದೋದ್ದೇಶಗಳ ಸಹಕಾರ ಸಂಘ, ಹರಗನಹಳ್ಳಿ ಮತ್ತು ಹಕ್ಕಲಗೇರಿಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ಮುಂಡಗೋಡ ತಾಲ್ಲೂಕು ಪ್ರೈಮರಿ ಸ್ಕೂಲ್ ಕೋ-ಆಪ್ ಸ್ಟೋರ್ಸ್ ಲಿ., ವಿಶಾಲ ಮಹಿಳಾ ಖಾದಿ ಗ್ರಾಮೋದ್ಯೋಗ ಹಾಗೂ ವಿವಿದೋದ್ದೇಶಗಳ ಸಹಕಾರ ಸಂಘಕ್ಕೆ ಸಮಾಪನಾಧಿಕಾರಿಯಾಗಿ ಅವರು ಕರ್ತವ್ಯ ನಿರ್ವಹಿಸಲಿದ್ದಾರೆ. 15 ದಿನಗಳ ಒಳಗಾಗಿ ಸಂಘಗಳಿಗೆ ಸಂಬಂಧಪಟ್ಟವರು ಸಮಾಪನಧಿಕಾರಿ ಸಂಪರ್ಕಿಸಬಹುದು. ಆ ಬಳಿಕ ಸಂಘದ ನೋಂದಣಿ ರದ್ದತಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಹಕಾರ ಇಲಾಖೆಯ ಉಪನಿಬಂಧಕರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-20-620446803

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.