ಮುಂಡಗೋಡ: ಬಿಸಿಲಿನ ಧಗೆಯಿಂದ ವನ್ಯ ಪ್ರಾಣಿಗಳು ನೀರಿಗಾಗಿ ನಾಡಿನ ಸನಿಹ ಬರುತ್ತಿವೆ. ಅರಣ್ಯದಲ್ಲಿನ ಕೆರೆಕಟ್ಟೆಗಳು ನೀರಿಗಾಗಿ ಬಾಯ್ದೆರೆದು ಬರಿದಾಗಿವೆ. ವನ್ಯಪ್ರಾಣಿ, ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು, ಅರಣ್ಯ ಇಲಾಖೆ ಕಳೆದ ಕೆಲವು ದಿನಗಳ ಹಿಂದೆ, ಕೃತಕ ತೊಟ್ಟಿಗಳಿಗೆ ನೀರುಣಿಸುವ ಕಾರ್ಯ ಮಾಡಿದ್ದರೂ ನೀರು ತುಂಬಿಸುವ ಕೆಲಸ ನಡೆದಿಲ್ಲ ಎಂಬ ದೂರು ವ್ಯಾಪಕವಾಗಿದೆ.

ತಾಲ್ಲೂಕಿನ ಸನವಳ್ಳಿ ಭಾಗದಲ್ಲಿ ಜಿಂಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ನೀರು ಅರಸಿ ಜಲಾಶಯದ ದಡಭಾಗ, ಗ್ರಾಮದಂಚಿನವರೆಗೆ ಬರುತ್ತಿವೆ. ಆಹಾರ, ನೀರು ಅರಸಿ ಬರುವ ಜಿಂಕೆಗಳು, ಕೆಲವು ನಾಯಿ ದಾಳಿಗೆ ತುತ್ತಾಗುತ್ತಿವೆ. ಸನವಳ್ಳಿ ಜಲಾಶಯದ ದಡಭಾಗದಲ್ಲಿ ಜಿಂಕೆಯೊಂದು ಮೃತಪಟ್ಟ ಘಟನೆ ಈಚೆಗೆ ನಡೆದಿದೆ.

‘ಆಹಾರ, ನೀರಿಗಾಗಿ ಮಂಗಗಳು ಪರಿತಪಿಸುವುದನ್ನು ರಾಜ್ಯ ಹೆದ್ದಾರಿಯಲ್ಲಿ ಕಾಣಬಹುದು. ವಡಗಟ್ಟಾ ಚೆಕ್ಪೋಸ್ಟ್ ಸನಿಹ, ಗುಂಪು ಗುಂಪಾಗಿ ಕಂಡುಬರುವ ಮಂಗಗಳು, ಪ್ರಯಾಣಿಕರು ನೀಡುವ ಹಣ್ಣುಹಂಪಲಕ್ಕಾಗಿ ಕೈ ಚಾಚುವ ದೃಶ್ಯ ಸಾಮಾನ್ಯವಾಗಿದೆ. ಪ್ರಾಣಿ, ಪಕ್ಷಿಗಳಿಗೆ ಅರಣ್ಯದಲ್ಲಿ ಆಹಾರ, ನೀರು ಸಿಗದಿದ್ದಾಗ ಜನವಸತಿಯತ್ತ ಬರುತ್ತವೆ’ ಎನ್ನುತ್ತಾರೆ ಪ್ರಯಾಣಿಕ ಮಂಜುನಾಥ ಹುಲಸ್ವಾರ.

‘ವನ್ಯ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ, ಕೆಲವು ದಿನಗಳ ಹಿಂದೆ ಕೃತಕ ತೊಟ್ಟಿಗಳಲ್ಲಿ ಅರಣ್ಯ ಇಲಾಖೆಯವರು ನೀರು ತುಂಬಿಸುವ ಕಾರ್ಯ ಮಾಡಿದ್ದರು. ಆದರೆ, ಕೆಲವೇ ದಿನ ಮಾತ್ರ ನೀರು ತುಂಬಿಸಿ, ಮತ್ತೆ ತುಂಬಿಸುವುದನ್ನು ಮರೆತಿದ್ದಾರೆ’ ಎಂಬುದು ಜನರ ಆರೋಪ.

‘ಮೇ ತಿಂಗಳಲ್ಲಿ ಬಿಸಿಲಿನ ಪರಿಣಾಮ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಮೂಕ ಪ್ರಾಣಿಗಳ ಬಾಯಾರಿಕೆ ಇಂಗಿಸುವ ಕೆಲಸ ಹೆಚ್ಚಾಗಲಿ’ ಎಂದು ಬಸವರಾಜ ಹಳ್ಳಮ್ಮನವರ ಆಗ್ರಹಿಸಿದರು.

‘ಸನವಳ್ಳಿ ಅರಣ್ಯ ಪ್ರದೇಶದಲ್ಲಿನ ತೊಟ್ಟಿಗಳಲ್ಲಿ ನೀರು ತುಂಬಿಸಲು ಕ್ರಮವಹಿಸಲಾಗುವುದು. ಗುಂಜಾವತಿ, ಇಂದೂರ ಭಾಗದಲ್ಲಿ ಹಳ್ಳದಲ್ಲಿ ನೀರಿನ ಹರಿವಿದ್ದು ತೊಂದರೆ ಇಲ್ಲ’ ಎಂದು ಆರ್ಎಫ್ಒ ಅಪ್ಪಾರಾವ ಕಾಳಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-20-1169414890

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.