ಮುಂಡಗೋಡ: ಈಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಗೋವಿನಜೋಳ ಬೆಳೆ ಹಾನಿಯಾದ ಪ್ರದೇಶಕ್ಕೆ ಸಹಾಯಕ ಕೃಷಿ ನಿರ್ದೇಶಕ ಕೆ.ಎನ್.ಮಹಾರೆಡ್ಡಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ತಾಲ್ಲೂಕಿನ ಸನವಳ್ಳಿ, ಬಾಚಣಕಿ, ಕಾತೂರ, ಇಂದೂರ ಸೇರಿದಂತೆ ಕೆಲವೆಡೆ ಆಲಿಕಲ್ಲು ಮಳೆಯಿಂದ ಗೋವಿನಜೋಳ ಹಾನಿಯಾಗಿತ್ತು.

ಬೇಸಿಗೆ ಬೆಳೆಯು ಆಲಿಕಲ್ಲು ಮಳೆಯಿಂದ ನೆಲಕ್ಕೆ ಒರಗಿ, ಹೆಚ್ಚಿನ ಹಾನಿ ಸಂಭವಿಸಿದೆ. ಇನ್ನೊಂದು ತೀಂಗಳಲ್ಲಿ ಕೈಗೆ ಬರುತ್ತಿದ್ದ ಫಸಲು, ನೆಲಕ್ಕಚ್ಚಿದೆ ಎಂದು ರೈತರು ದೂರಿದ್ದರು. ಈ ಹಿನ್ನೆಲೆಯಲ್ಲಿ, ಕೃಷಿ ಅಧಿಕಾರಿಗಳು ಗದ್ದೆಗಳಿಗೆ ಭೇಟಿ ನೀಡಿ, ರೈತರಿಂದ ಮಾಹಿತಿ ಪಡೆದುಕೊಂಡರು.

‘ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾಗಿರುವ ರೈತರಿಗೆ ಕಾಲಮಿತಿಯೊಳಗೆ ಗರಿಷ್ಠ ಪರಿಹಾರ ನೀಡಬೇಕು. ಅಕಾಲಿಕ ಮಳೆಯಿಂದ ಅತಂತ್ರವಾಗಿರುವ ರೈತರಿಗೆ ಸರ್ಕಾರ ಸ್ಪಂದಿಸಬೇಕು’ ಎಂದು ರೈತರಾದ ರಾಮಚಂದ್ರ ಆರೆಗೊಪ್ಪ, ಶಿವಾನಂದ ಕೆರಿಹೊಲದವರ, ರಾಜು ಗುಬ್ಬಕ್ಕನವರ, ಅಜ್ಜಯ್ಯ ಹಿರೇಮಠ, ಪರಸಪ್ಪ ಬೋಕಿಯವರ ಒತ್ತಾಯಿಸಿದರು.

‘ಈಚೆಗೆ ಸುರಿದ ಆಲಿಕಲ್ಲು ಮಳೆಗೆ ಸಾಲಗಾಂವ, ಅಜ್ಜಳ್ಳಿ, ಸನವಳ್ಳಿ ಭಾಗದ 13ಕ್ಕೂ ಹೆಚ್ಚು ರೈತರ, ಸುಮಾರು 25 ಎಕರೆ ಗೋವಿನಜೋಳ ಬೆಳೆ ಹಾನಿಯಾಗಿದೆ. ಕಂದಾಯ ಇಲಾಖೆಯ ಜೊತೆಗೂಡಿ ಜಂಟಿ ಸಮೀಕ್ಷೆ ಮಾಡಲಾಗಿದೆ. ಪರಿಹಾರಕ್ಕಾಗಿ ಮೇಲಧಿಕಾರಿಗಳಿಗೆ ವರದಿ ಕಳಿಸಲಾಗುವುದು’ ಎಂದು ಕೃಷಿ ಸಹಾಯಕ ನಿರ್ದೇಶಕ ಕೆ.ಎನ್.ಮಹಾರೆಡ್ಡಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-20-1466367886

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.