ಮುಂಡಗೋಡ: ಪಟ್ಟಣದ ಹೊರವಲಯದ ಹುಬ್ಬಳ್ಳಿ ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಿದ್ದು, ಪರ್ಯಾಯವಾಗಿ ಮಾಡಿದ್ದ ಕಚ್ಚಾ ರಸ್ತೆಯಲ್ಲಿ ಮಳೆಯ ನೀರು ಸಂಗ್ರಹಗೊಂಡ ಪರಿಣಾಮ, ವಾಹನಗಳು ಸಂಚರಿಸಲು ಆಗದೇ, ಮಂಗಳವಾರ ಬೆಳಗಿನ ಜಾವದಿಂದ ಮಧ್ಯಾಹ್ನದವರೆಗೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಶಿರಸಿಯಿಂದ ಮುಂಡಗೋಡ ಮಾರ್ಗವಾಗಿ ಹುಬ್ಬಳ್ಳಿಗೆ ಇದೇ ರಾಜ್ಯ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಸಂಚಾರಕ್ಕೆ ಅಗತ್ಯವಿರುವ ಸಣ್ಣ ಸೇತುವೆ ಕಾಮಗಾರಿಯನ್ನು ಭಾನುವಾರದಿಂದ ಆರಂಭಿಸಲಾಗಿದೆ.

ಆದರೆ, ಕಳೆದ ಎರಡು ದಿನಗಳಿಂದ ಅಕಾಲಿಕವಾಗಿ ಮಳೆ ಸುರಿಯುತ್ತಿದ್ದು, ಪರ್ಯಾಯವಾಗಿ ಮಾಡಿರುವ ಮಣ್ಣಿನ ರಸ್ತೆಯಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿವೆ. ಜಲ್ಲಿಕಲ್ಲುಗಳನ್ನು ಹಾಕಿ ಭದ್ರವಾಗಿ ಮಾಡಬೇಕಿದ್ದ ಪರ್ಯಾಯ ರಸ್ತೆಯು, ಗುತ್ತಿಗೆದಾರನ ನಿರ್ಲಕ್ಷತನದಿಂದ, ಕೆಸರಿನ ರಸ್ತೆಯಾಗಿ, ರಾಜ್ಯ ಹೆದ್ದಾರಿಯು ಅರ್ಧ ದಿನ ಬಂದ್ ಆಗಿತ್ತು. ದೂರದ ಊರಿಗೆ ಹೊರಟಿದ್ದ ವಾಹನಗಳು, ಪ್ರಯಾಣಿಕರು ನಾಲ್ಕೈದು ಗಂಟೆಗಳ ಕಾಲ ರಸ್ತೆಯಲ್ಲಿ ನಿಂತಿದ್ದರು. ರಾಜ್ಯ ರಸ್ತೆ ಸಾರಿಗೆ ಬಸ್ಗಳು, ತಡಸದಿಂದ ಕೋಣನಕೇರಿ ಮಾರ್ಗವಾಗಿ ಮುಂಡಗೋಡಕ್ಕೆ ಸಂಚರಿಸಿದವು.

‘ಕುಟುಂಬ ಸಮೇತರಾಗಿ ಮನೆ ದೇವರಿಗೆ ಹೊರಟಿದ್ದೆವು. ಬೆಳಿಗ್ಗೆಯಿಂದ ನಾಲ್ಕು ತಾಸು ಇಲ್ಲಿಯೇ ನಿಂತುಕೊಂಡಿದ್ದೇವೆ. ಮಕ್ಕಳು, ಮಹಿಳೆಯರು ಬೆಳಗಿನ ತಿಂಡಿ ಸಹ ಮಾಡಿಲ್ಲ. 30ಕ್ಕೂ ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿವೆ. ಅಧಿಕಾರಿಗಳ ನಿರ್ಲಕ್ಷದಿಂದ ನಾವು ಪರದಾಡಬೇಕಾಗಿದೆ. ಅಡ್ಡ ಮಳೆ ಬರುತ್ತದೆ ಎನ್ನುವ ಸಾಮಾನ್ಯ ಜ್ಞಾನವಾದರೂ, ಗುತ್ತಿಗೆದಾರರಿಗೆ ಇರಬೇಕು. ಯಾರೋ ಮಾಡುವ ತಪ್ಪಿಗೆ ಜನರು ತೊಂದರೆ ಅನುಭವಿಸುವಂತಾಗಿದೆ’ ಎಂದು ಪ್ರಯಾಣಿಕ ಶರತ್ ಆಕ್ರೋಶದಿಂದ ಹೇಳಿದರು.

‘ಅಡ್ಡ ಚರಂಡಿ (ಸಿಡಿ) ಕಾಮಗಾರಿ ಮಾಡಲಾಗುತ್ತಿದ್ದು, ಪರ್ಯಾಯವಾಗಿ ಮಾಡಿದ್ದ ಕಚ್ಚಾ ರಸ್ತೆಯಲ್ಲಿ ಮಳೆಯಿಂದ ಲಾರಿಯೊಂದು ಸಿಲುಕಿ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ನಂತರ, ಅಗತ್ಯ ಕ್ರಮ ಕೈಗೊಂಡು ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ’ ಎಂದು ಲೋಕೋಪಯೋಗಿ ಎಇಇ ಮಹದೇವಪ್ಪ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-20-735162659

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.