ಮುಂಡಗೋಡ: ಇಲ್ಲಿನ ಬಂಕಾಪುರ ರಸ್ತೆ ಹಾಗೂ ಶಿರಸಿ ರಸ್ತೆಯಲ್ಲಿರುವ ಬಂಕ್ಗಳಲ್ಲಿ ಶನಿವಾರ ಕೃಷಿ ಯಂತ್ರೋಪಕರಣಗಳಿಗೆ ಡೀಸೆಲ್ ತರಲು ಬಂಕ್ಗಳಿಗೆ ಬಂದಿದ್ದ ರೈತರಿಗೆ, ಕ್ಯಾನ್ಗಳಲ್ಲಿ ಡಿಸೇಲ್ ಕೊಡುವುದಿಲ್ಲ ಎಂದು ಬಂಕ್ ಸಿಬ್ಬಂದಿ ಹೇಳಿದ್ದರಿಂದ, ರೈತರು ಹಾಗೂ ಬಂಕ್ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು.

ಡೀಸೆಲ್ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ ರೈತರಿಗೆ, ‘ಕ್ಯಾನ್ಗಳಲ್ಲಿ ಡೀಸೆಲ್ ಭರ್ತಿ ಮಾಡಿಕೊಡದಂತೆ ತೈಲ ಕಂಪನಿಯ ಅಧಿಕಾರಿಗಳು ಲಿಖಿತವಾಗಿ ತಿಳಿಸಿದ್ದಾರೆ. ವಾಹನಗಳಿಗೆ ಮಾತ್ರ ಪೆಟ್ರೋಲ್, ಡೀಸೆಲ್ ಹಾಕಲಾಗುವುದು. ನಿಯಮ ಮೀರಿದರೆ ಕಂಪನಿಯಿಂದ ನಮಗೆ ನೋಟಿಸ್ ಬರುತ್ತದೆ ಎಂದು ಬಂಕ್ ಮಾಲೀಕರು ಹೇಳಿದರು.

ಆದರೆ, ರೈತರು, ಕಂಪನಿಯ ಅಧಿಕಾರಿಯೊಂದಿಗೆ ಪೋನ್ ಮೂಲಕ ಸದ್ಯದ ಪರಿಸ್ಥಿತಿ ವಿವರಿಸಿದರು. ನಂತರ, ಸ್ಥಳದಲ್ಲಿದ್ದ ರೈತರಿಗೆ ಕ್ಯಾನ್ಗಳಲ್ಲಿ ಡೀಸೆಲ್ ತುಂಬಿಸಿಕೊಳ್ಳಲು ಅವಕಾಶ ಮಾಡಿಕೊಡಲಾಯಿತು’ ಎಂದು ರೈತ ವಿನೋದ ಹೇಳಿದರು.

‘ಕೃಷಿ ಚಟುವಟಿಕೆಗೆ ಡೀಸೆಲ್ ಕೊರತೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕೃಷಿ ಯಂತ್ರೋಪಕರಣಗಳಿಗೆ ಡೀಸೆಲ್ ಅಗತ್ಯವಿದ್ದು, ಕ್ಯಾನ್ಗಳಲ್ಲಿ ತುಂಬಿ ಕೊಡಲು ಅವಕಾಶ ಮಾಡಿಕೊಡಬೇಕು. ಕೃಷಿ ಕೆಲಸದಲ್ಲಿ ನಿರತರಾಗಿರುವ ಟ್ರ್ಯಾಕ್ಟರ್ಗಳು ಪ್ರತಿ ಬಾರಿ ಇಂಧನ ಖಾಲಿಯಾದಾಗ ಬಂಕ್ಗೆ ಬಂದು ತುಂಬಿಸಿಕೊಂಡು ಹೋಗುವುದು ಆಗದು. ಇದರಿಂದ ಸಮಯ ಹಾಗೂ ಇಂಧನವೂ ವ್ಯರ್ಥವಾಗುತ್ತದೆ’ ಎಂದು ಟ್ರ್ಯಾಕ್ಟರ್ ಮಾಲೀಕ ಮಂಜುನಾಥ ಪಾಟೀಲ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-20-582118981

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.