ಮುಂಡಗೋಡ: ಬಾಯ್ದೆರೆದ ಭೂಮಿಗೆ ಬಿದ್ದ ಮಳೆಯು, ಅನ್ನದಾತನನ್ನು ವರ್ಷದ ಕಾಯಕಕ್ಕೆ ಅಡಿ ಇಡುವಂತೆ ಮಾಡಿದೆ. ಬಿರು ಬಿಸಿಲಿನಿಂದ ಬಸವಳಿದು, ನೆರಳಿನಡಿ ಆಶ್ರಯ ಪಡೆಯುತ್ತಿದ್ದ ರೈತ ಸಮೂಹ, ತಕ್ಕ ಮಟ್ಟಿಗೆ ತಂಪಾಗಿರುವ ಗದ್ದೆಗಳ ಸ್ವಚ್ಛತೆಯಲ್ಲಿ ನಿರತರಾಗಿರುವುದು ಶುಕ್ರವಾರ ಕಂಡುಬಂತು.

ಸಾಂಪ್ರದಾಯಿಕ ಬೆಳೆ ಬೆಳೆಯಲು, ರೈತರು ಹೊಲ,ಗದ್ದೆಗಳನ್ನು ಸ್ವಚ್ಛಗೊಳಿಸುತ್ತ, ಮಣ್ಣನ್ನು ಹದಗೊಳಿಸುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಕಳೆದೆರಡು ದಿನಗಳಿಂದ ತಾಲ್ಲೂಕಿನ ಕೆಲವೆಡೆ ಮಳೆಯಾಗಿದೆ. ಕೆಲವೆಡೆ ಬಿರುಸಿನ ಮಳೆಯಾದರೆ, ಇನ್ನೂ ಕೆಲವೆಡೆ ಭೂಮಿ ಹಸಿಯಾಗುವಷ್ಟು ಮಳೆಯಾಗಿದೆ. ಅರೆಮಲೆನಾಡಿನ ತಾಲ್ಲೂಕಿನಲ್ಲಿ ಅಲ್ಲಲ್ಲಿ ಸಾಂಪ್ರದಾಯಿಕ ಬೆಳೆಯಾದ ಭತ್ತವನ್ನು ಬೆಳೆಯುವ ರೈತರು, ಗದ್ದೆಗಳನ್ನು ಹದಗೊಳಿಸಲು ಮುಂದಾಗಿದ್ದಾರೆ.

‘ಇನ್ನೊಂದೆರೆಡು ದೊಡ್ಡ ಮಳೆಯಾದರೆ, ಭೂಮಿ ಹದಗೊಳಿಸುವ ಕೆಲಸಕ್ಕೆ ವೇಗ ಸಿಗಲಿದೆ. ಸದ್ಯಕ್ಕೆ ಕಡಿಮೆ ಸಂಖ್ಯೆಯಲ್ಲಿ ರೈತರು, ಗದ್ದೆಗಳನ್ನು ಹದಗೊಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಇನ್ನೊಂದು ವಾರದಲ್ಲಿ ನಿರೀಕ್ಷೆಯಂತೆ ವರುಣ ಧರೆಗಿಳಿದರೆ, ಕೃಷಿ ಚಟುವಟಿಕೆ ಬಿರುಸುಗೊಳ್ಳಲಿದೆ. ಒಣಬಿತ್ತನೆಗೆ ಈಗಲೇ ಹದಗೊಳಿಸಬೇಕಾಗಿರುವುದರಿಂದ, ಗದ್ದೆಗಳಲ್ಲಿ ಟ್ರ್ಯಾಕ್ಟರ್ಗಳಿಂದ ಮಣ್ಣು ಹದಮಾಡುವ ಕೆಲಸ ಆರಂಭವಾಗಿದೆ’ ಎಂದು ರೈತ ಮಂಜುನಾಥ ಹಾನಗಲ್ ಹೇಳಿದರು.

ತಾಲ್ಲೂಕಿನ ಚವಡಳ್ಳಿ, ತಮ್ಯಾನಕೊಪ್ಪ, ಕ್ಯಾಸನಕೇರಿ, ಇಂದೂರ, ಕಾತೂರ ಸೇರಿದಂತೆ ಇನ್ನಿತರ ಕಡೆಗಳಲ್ಲಿ, ಟ್ರ್ಯಾಕ್ಟರ್ಗಳ ಮೂಲಕ ಗದ್ದೆಗಳನ್ನು ಸ್ವಚ್ಛಗೊಳಿಸುವ ಕೆಲಸ ಕಂಡುಬಂದಿದ್ದು, ಮುಂಗಾರು ಆಗಮನವನ್ನು ನೋಡಿಕೊಂಡು, ಬಿತ್ತನೆಗೆ ಈಗಲೇ ಗದ್ದೆಗಳನ್ನು ತಯಾರು ಮಾಡಬೇಕಿದೆ. ಭತ್ತ ಹಾಗೂ ಗೋವಿನಜೋಳ ಬೆಳೆಗೆ ಭೂಮಿ ಹದ ಮಾಡುವ ಪ್ರಕ್ರಿಯೆ ಇನ್ನೊಂದು ವಾರದಲ್ಲಿ ವೇಗ ಪಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-20-536582088

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.