ಮುಂಡಗೋಡ: ಆಹಾರ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ನರೇಂದ್ರ ಪವಾರ ನೇತೃತ್ವದ ತಂಡವು ಪಟ್ಟಣ ಹಾಗೂ ಟಿಬೆಟಿಯನ್ ಕ್ಯಾಂಪ್ನ ವಿವಿಧ ಹೋಟೆಲ್ಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿತು.

ಪಟ್ಟಣದ ಬನ್ನಿಕಟ್ಟೆ ಸನಿಹ ಸಸ್ಯಾಹಾರಿ ಹಾಗೂ ಮಾಂಸಾರಿ ಹೋಟೆಲ್ಗಳು, ಟಿಬೆಟಿಯನ್ ಕ್ಯಾಂಪ್ ನಂ.3ರಲ್ಲಿ ಒಟ್ಟು ಮೂರು ಹೋಟೆಲ್ಗಳಿಗೆ ದಿಢೀರ್ ಭೇಟಿ ನೀಡಿದರು. ಹೋಟೆಲ್ಗಳಲ್ಲಿ ಸ್ವಚ್ಛತೆ ಕೈಗೊಳ್ಳದಿರುವ ಕುರಿತು ಮಾಲೀಕರಿಗೆ ಎಚ್ಚರಿಕೆ ನೀಡಿದರು. ವೈಯಕ್ತಿಕ ಸ್ವಚ್ಛತೆ, ಅಡುಗೆ ಕೋಣೆ ಸ್ವಚ್ಚತೆಯ ಕುರಿತು ಹೆಚ್ಚಿನ ಕಾಳಜಿ ವಹಿಸುವಂತೆ ಹೋಟೆಲ್ ಸಿಬ್ಬಂದಿಗೆ ಸೂಚಿಸಿದರು.

ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿ, ನಿಯಮ ಉಲ್ಲಂಘಿಸಿದ ವಿವಿಧ ಅಂಗಡಿಕಾರರಿಗೆ ₹2 ಸಾವಿರ ದಂಡ ವಿಧಿಸಲಾಯಿತು.

ಆಡಳಿತ ವೈದ್ಯಾಧಿಕಾರಿ ಭರತ್ ಡಿ.ಟಿ., ಕಂದಾಯ ಇಲಾಖೆಯ ಆಹಾರ ನಿರೀಕ್ಷಕ ಸಂಜುಕುಮಾರ ಲಮಾಣಿ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎನ್.ಎಚ್. ಹಿರೇಮಠ, ಪ್ರಸಾದ, ಸತೀಶ ಬಿ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-20-1114556636

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.