ಮುಂಡಗೋಡ: ಪಟ್ಟಣದ ಹೊರವಲಯದಲ್ಲಿರುವ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ (ಕೆಎಫ್ಡಿಸಿ) ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ಮರಗಳ ಕಟಾವು ನಂತರ ಅಲ್ಲಲ್ಲಿ ಬಿದ್ದಿದ್ದ ಟೊಂಗೆಗಳು ಸಹಿತ ಉರುವಲು ಕಟ್ಟಿಗೆಯನ್ನು ಒಯ್ಯಲು ಜನರು ಮುಗಿಬಿದ್ದ ದೃಶ್ಯ ಸೋಮವಾರ ಕಂಡುಬಂತು.

ನಾಲ್ಕು ವರ್ಷಗಳ ನಂತರ ಹೆಚ್ಚಿನ ಪ್ರಮಾಣದಲ್ಲಿ ಅಕೇಶಿಯಾ ಮರಗಳ ಕಟಾವು ಕಾರ್ಯ ನಡೆದಿದ್ದು, ಉರುವಲು ಹೇರಳವಾಗಿ ಲಭ್ಯವಿತ್ತು. ಅಡುಗೆ ಅನಿಲ ಸಿಲಿಂಡರ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದ ಜನರಿಗೆ, ಉರುವಲು ಕಟ್ಟಿಗೆ ಒಯ್ಯಲು ಇಲಾಖೆಯವರು ಅನುಮತಿ ನೀಡಿದ್ದರಿಂದ, ಬೈಕ್, ಟ್ರ್ಯಾಕ್ಟರ್, ಗೂಡ್ಸ್ ವಾಹನಗಳ ಸಮೇತ ಅರಣ್ಯಕ್ಕೆ ಬಂದು ಉರುವಲು ಸಂಗ್ರಹಿಸುತ್ತಿದ್ದಾರೆ.

‘ಸಿಲಿಂಡರ್ಗಾಗಿ ನಾಲ್ಕೈದು ದಿನಗಳಿಂದ ಪಾಳಿ ಹಚ್ಚಿದರೂ ಸಿಗುತ್ತಿಲ್ಲ. ಊರ ಸಮೀಪವೇ ಇರುವ ಅರಣ್ಯದಿಂದ ಕಟ್ಟಿಗೆ ಒಯ್ಯಲು ಅವಕಾಶ ನೀಡಿದ್ದಾರೆ. ಕಟ್ಟಿಗೆ ಒಯ್ಯುವ ಸುದ್ದಿ ಒಬ್ಬರಿಂದ ಒಬ್ಬರಿಗೆ ಹರಡಿದ್ದರಿಂದ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ’ ಎಂದು ಪಾರ್ವತೆವ್ವ ಹೇಳಿದರು.

‘ಭಾನುವಾರ ಸಾಕಷ್ಟು ಸಂಖ್ಯೆಯಲ್ಲಿ ಜನರು ಉರುವಲು ಕಟ್ಟಿಗೆ ಒಯ್ದಿದ್ದಾರೆ. ಇದರಿಂದ ಅರಣ್ಯದಲ್ಲಿ ದೂರದೂರದ ವರೆಗೆ ಓಡಾಡಿ ಉರುವಲು ಕಟ್ಟಿಗೆ ಸಂಗ್ರಹಿಸಬೇಕಾಗಿದೆ. ನಸುಕಿನಲ್ಲಿಯೇ ಊಟ ಕಟ್ಟಿಕೊಂಡು ಬಂದು ಉರುವಲು ಒಯ್ಯುತ್ತಿದ್ದೆವೆ’ ಎಂದು ಸ್ಥಳೀಯ ನಿವಾಸಿ ಇಬ್ರಾಹಿಂ ಹೇಳಿದರು.

‘ಕೆಲವು ದಿನಗಳ ಹಿಂದೆಯೇ ಅಕೇಶಿಯಾ ಮರಗಳನ್ನು ಕಟಾವು ಮಾಡಲಾಗಿತ್ತು. ಈಗ ಮತ್ತೆ, ಸಸಿಗಳನ್ನು ಹಚ್ಚಬೇಕಾಗಿರುವುದರಿಂದ, ಬಿದ್ದ ಟೊಂಗೆಗಳ ಸಹಿತ ಉರುವಲು ಕಟ್ಟಿಗೆ ಒಯ್ಯಲು ಸಾರ್ವಜನಿಕರಿಗೆ ಒಂದು ದಿನ ಕಾಲಾವಕಾಶ ನೀಡಲಾಗಿತ್ತು. ಆದರೆ, ಜನರು ನಮಗೆ ಇನ್ನೂ ಕಟ್ಟಿಗೆ ಸಿಕ್ಕಿಲ್ಲ ಎಂದು ಹೇಳಿದ್ದರಿಂದ ಸೋಮವಾರವೂ ಅವಕಾಶ ನೀಡಲಾಯಿತು’ ಎಂದು ಬೀಟ್ ಫಾರೆಸ್ಟರ್ ಮೌನೇಶ ಕಮ್ಮಾರ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-20-1688672964

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.