ಮುಂಡಗೋಡ: ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ಗಳ ಪೂರೈಕೆ ಸ್ಥಗಿತಗೊಂಡಿರುವುದರಿಂದ ಕೆಲವು ಹೋಟೆಲ್ ಮಾಲೀಕರು ಉರುವಲು ಕಟ್ಟಿಗೆ ಬಳಸಿ, ತಿಂಡಿತಿನಿಸು ತಯಾರು ಮಾಡಲು ಮುಂದಾಗಿದ್ದಾರೆ.

ರಸ್ತೆ ಬದಿ ಫಾಸ್ಟ್ ಫುಡ್ ಮಾಡುತ್ತಿದ್ದ ತಾತ್ಕಾಲಿಕ ಅಂಗಡಿಗಳು ಸಿಲಿಂಡರ್ ಕೊರತೆಯಿಂದ ಒಂದೊಂದಾಗಿ ಬಂದ್ ಆಗುತ್ತಿವೆ. ಸೂಕ್ತ ಜಾಗ ಇದ್ದವರು, ಈ ಮೊದಲು ಒಲೆ ಬಳಸುತ್ತಿರುವವರು ಸದ್ಯದ ಪರಿಸ್ಥಿತಿ ಎದುರಿಸಲು ಪರ್ಯಾಯ ದಾರಿ ಕಂಡುಕೊಂಡಿದ್ದಾರೆ. ಆದರೆ, ಬಹುತೇಕ ಹೋಟೆಲ್ಗಳಲ್ಲಿ ಹೊಸದಾಗಿ ಒಲೆ ಮಾಡಲು ಸ್ಥಳಾವಕಾಶದ ಕೊರತೆಯ ಜೊತೆಗೆ ಉರುವಲು ಕಟ್ಟಿಗೆ ಬಳಸಲು ಸಾಧ್ಯವಾಗದ ಸ್ಥಿತಿ ಇರುವುದರಿಂದ, ವಾಣಿಜ್ಯ ಬಳಕೆಯ ಸಿಲಿಂಡರ್ ಸಿಗದೇ ಪರದಾಡುತ್ತಿದ್ದಾರೆ.

ಕೆಲವರು ಸದ್ಯದ ಮಟ್ಟಿಗೆ ಸಿಲಿಂಡರ್ ಅಗತ್ಯವಿರದಿದ್ದರೂ, ಮುಂದೆ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕದಿಂದ ಉಗ್ರಾಣಕ್ಕೇ ಹೋಗಿ ಸರದಿಯಲ್ಲಿ ಸಿಲಿಂಡರ್ ಇಟ್ಟು ನಿಂತುಕೊಳ್ಳುತ್ತಿದ್ದಾರೆ. ಒಟಿಪಿ ಬರದ ಹೊರತು ಸಿಲಿಂಡರ್ ಕೊಡುವುದಿಲ್ಲ ಎಂದು ಸಿಬ್ಬಂದಿ ಹೇಳಿದ ನಂತರ, ಖಾಲಿ ಸಿಲಿಂಡರ್ ಹೊತ್ತುಕೊಂಡು ಮರಳಿ ಮನೆಗೆ ಬರುವ ದೃಶ್ಯ ಕಾಣಬಹುದಾಗಿದೆ.

‘ಗ್ರಾಮೀಣ ಪ್ರದೇಶಗಳಲ್ಲಿ ಸಿಲಿಂಡರ್ ಬಳಕೆ ಕಡಿಮೆಯಿತ್ತು. ಕೆಲವರು, ಹೆಚ್ಚುವರಿ ಸಿಲಿಂಡರ್ಗಳನ್ನು ಅಗತ್ಯವಿದ್ದವರಿಗೆ ಕೊಡುತ್ತಿದ್ದರು. ಆದರೆ, ಈಗ ಗ್ರಾಮೀಣ ಪ್ರದೇಶದ ಜನರೇ, ಸಿಲಿಂಡರ್ಗಾಗಿ ಪಟ್ಟಣದ ಗೋಡೌನ್ಗೆ ಬಂದು ವಿಚಾರಿಸುತ್ತಿದ್ದಾರೆ. ಕೆಲವರು ಹೆಚ್ಚಿನ ದರ ನೀಡುತ್ತೇವೆ, ಸಿಲಿಂಡರ್ ನೀಡಿ ಎನ್ನುತ್ತಿದ್ದಾರೆ. ಬುಕ್ಕಿಂಗ್ ಮಾಡಿದರೂ ಒಟಿಪಿ ಬರುತ್ತಿಲ್ಲ. ಗೋಡೌನ್ಗೆ ಬಂದು ವಿಚಾರಿಸಿದರೆ, ಒಟಿಪಿ ಇಲ್ಲದೇ ಸಿಲಿಂಡರ್ ಕೊಡುವುದಿಲ್ಲ ಎಂದು ಹೇಳುತ್ತಾರೆ’ ಎಂದು ಇಂದೂರ ಗ್ರಾಮದ ಫಕ್ಕೀರೇಶ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.