ಮುಂಡಗೋಡ: ಹೂವು ಬಿಡುವ ಸಮಯದಲ್ಲಿ ಬಿದ್ದ ಅಂಟು ಇಬ್ಬನಿಯು ಮಾವು ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಇಳುವರಿ ಕೊರತೆ ನಡುವೆಯೂ ಕೈಗೆ ಬಂದಿರುವ ಮಾವಿನ ದರ ಇಳಿಕೆ, ವ್ಯಾಪಾರಿಗಳಿಗೆ ಕಹಿ ಅನುಭವ ನೀಡುತ್ತಿದೆ.

ತಾಲ್ಲೂಕಿನ ಪಾಳಾ ಹೋಬಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದೆ. ಆಪೂಸ್, ಪೈರಿ, ಸಿಂಧುಲಾ, ಮಲಗೋಬಾ ಸೇರಿದಂತೆ ಇನ್ನಿತರ ತಳಿಗಳ ಹಣ್ಣುಗಳನ್ನು ಈ ಭಾಗದಲ್ಲಿ ಕಾಣಬಹುದು.

ಒಂದು ವರ್ಷ ಅಧಿಕ ಇಳುವರಿ, ಮತ್ತೊಂದು ವರ್ಷ ಕಡಿಮೆ ಇಳುವರಿ ಸಾಮಾನ್ಯವಾಗಿದೆ. ಈ ವರ್ಷ ತಾಲ್ಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಇಳುವರಿ ಸಿಕ್ಕಿದೆ. ಹೊರ ಜಿಲ್ಲೆಗಳಿಂದ ತಾಲ್ಲೂಕಿನ ಮಾರುಕಟ್ಟೆಗೆ ಕಾಲಿಟ್ಟಿರುವ ಮಾವು ಸಹ ಇದಕ್ಕೆ ಕಾರಣವಾಗಿದೆ ಎಂದು ಗುತ್ತಿಗೆ ಹಿಡಿದ ಮಾವು ವ್ಯಾಪಾರಿಗಳು ಅಳಲು ತೋಡಿಕೊಂಡರು.

‘ಪ್ರತಿ ವರ್ಷ ಇಲ್ಲಿನ ಆಪೂಸ್ ಮಾವು, ಮುಂಬೈ ಮಾರುಕಟ್ಟೆಗೆ ಹೋಗಿ, ಅಲ್ಲಿಂದ ವಿದೇಶಕ್ಕೆ ರಫ್ತಾಗುತ್ತಿತ್ತು. ಯುದ್ಧದ ಕಾರಣ ಮಾವು ರಫ್ತಾಗುತ್ತಿಲ್ಲ. ಮುಂಬೈ ಮಾರುಕಟ್ಟೆಗೆ ಕಳುಹಿಸಿದ ಮಾವು ಕೆ.ಜಿಗೆ ₹30ರಿಂದ ₹40 ದರದಲ್ಲಿ ಮಾರಾಟವಾಗುತ್ತಿದೆ. ಇದರಿಂದ, ಸಾಗಾಣಿಕ ವೆಚ್ಚವೂ ಸಿಗುತ್ತಿಲ್ಲ. ವಾರ್ಷಿಕ ಗುತ್ತಿಗೆ ಹಿಡಿದವರಿಗೆ ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗುತ್ತಿದೆ' ಎಂದು ವ್ಯಾಪಾರಿ ಮಹ್ಮದಜಾಫರ್ ಗೋಣೂರ ಹೇಳಿದರು.

‘ಈ ವರ್ಷ ಕಡಿಮೆ ಮಾವು ಇಳುವರಿಯಿಂದ ರೈತರಿಗೆ ನಷ್ಟವಾಗಿದೆ. ಕಳೆದ ವರ್ಷ ತಾಲ್ಲೂಕಿನಲ್ಲಿ ಮಾವು ಬೆಳೆಯ ವಿಮಾ ಕಂತಿನ ಹಣ ಹೆಚ್ಚಿಸಿದ್ದರಿಂದ, ಬಹುತೇಕ ಬೆಳೆಗಾರರು ವಿಮೆ ಮಾಡಿಸಲಿಲ್ಲ. ಬೇರೆ ತಾಲ್ಲೂಕುಗಳಲ್ಲಿ ಮಾವು ವಿಮಾ ಕಂತಿನ ಹಣ ಕಡಿಮೆ ಇತ್ತು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡುವಲ್ಲಿ ವಿಫಲರಾಗಿದ್ದಾರೆ’ ಎಂದು ಮಾವು ಬೆಳೆಗಾರ ಶಿವಜ್ಯೋತಿ ಹುದ್ಲಮನಿ ಆರೋಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-20-896843688

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.