ಮುಂಡಗೋಡ: ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಸಾರಿಗೆ ಇಲಾಖೆ ಆದಾಯದಲ್ಲಿಯೂ ಏರಿಕೆ ಕಂಡಿದೆ’ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಶಾರದಾ ರಾಠೋಡ ಹೇಳಿದರು.

ಇಲ್ಲಿನ ಬಸ್ ನಿಲ್ದಾಣದಲ್ಲಿ ಮುಂಡಗೋಡ-ಪಣಜಿ ಮಾರ್ಗವಾಗಿ ಸಂಚರಿಸುವ ನೂತನ ಬಸ್ಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಬಸ್ ಘಟಕದಿಂದ ಪಣಜಿಗೆ ನೂತನ ಬಸ್ ಆರಂಭಕ್ಕೆ ಪ್ರಯಾಣಿಕರ ಸಲ್ಲಿಸಿದ ಹಲವು ತಿಂಗಳುಗಳ ಬೇಡಿಕೆ ಈಡೇರಿದಂತಾಗಿದೆ’ ಎಂದರು.

ಸಾರಿಗೆ ಘಟಕ ವ್ಯವಸ್ಥಾಪಕ ಎಚ್.ಎಫ್. ಕುರ್ತಕೋಟಿ ಮಾತನಾಡಿ, ‘ಬಸ್ ನಿಲ್ದಾಣದಿಂದ ಬೆಳಿಗ್ಗೆ 8.15ಕ್ಕೆ ಹೊರಡುವ ಬಸ್, ಬಂಕಾಪುರ, ಹಾನಗಲ್, ಶಿರಸಿ, ಅಂಕೋಲಾ, ಕಾರವಾರ, ಮಡಗಾವ್ ಮಾರ್ಗವಾಗಿ ಸಂಜೆ 6.30ಕ್ಕೆ ಪಣಜಿ ತಲುಪಲಿದೆ. ಮುಂಡಗೋಡದಿಂದ ಬಂಕಾಪುರ ವರೆಗೆ ಮಾತ್ರ ಶಕ್ತಿ ಯೋಜನೆ ಅನ್ವಯಿಸಲಿದೆ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-20-68534106

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.