ಮುಂಡಗೋಡ: ಇಲ್ಲಿನ ಬಸ್ ನಿಲ್ದಾಣದಿಂದ ಯಲ್ಲಾಪುರ ಮಾರ್ಗದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ ಸರಿಯಾದ ಸಮಯಕ್ಕೆ ಬಿಡದಿರುವುದರಿಂದ, ಆಕ್ರೋಶಗೊಂಡ ಪ್ರಯಾಣಿಕರು, ಸಾರಿಗೆ ಸಿಬ್ಬಂದಿಯನ್ನು ಬುಧವಾರ ತರಾಟೆಗೆ ತೆಗೆದುಕೊಂಡರು.

ಮಧ್ಯಾಹ್ನ 3ಗಂಟೆಗೆ ಇಲ್ಲಿನ ನಿಲ್ದಾಣದಿಂದ ಹೊರಡಬೇಕಿದ್ದ ಬಸ್, ಸಂಜೆಯಾದರೂ ನಿಲ್ದಾಣಕ್ಕೆ ಬಂದಿಲ್ಲ. ಗಂಟೆಗಟ್ಟಲೇ ಕಾದರೂ, ಸಾರಿಗೆ ಸಿಬ್ಬಂದಿ ಬದಲಿ ವ್ಯವಸ್ಥೆ ಮಾಡಿಲ್ಲ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು, ಬಸ್ ನಿಲ್ದಾಣದಲ್ಲಿ ಪ್ರತಿಭಟನೆಗೆ ಮುಂದಾದರು.

ಪಟ್ಟಣದಿಂದ ಯಲ್ಲಾಪುರಕ್ಕೆ ಹೋಗುವ ಮಾರ್ಗದಲ್ಲಿ ತಾಲ್ಲೂಕಿನ ಹಲವು ಹಳ್ಳಿಗಳು ಬರುತ್ತವೆ. ನಿತ್ಯವೂ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಆದರೆ, ಸರಿಯಾದ ಸಮಯಕ್ಕೆ ಬಸ್ ಸಂಚಾರ ಇಲ್ಲದೇ, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರಯಾಣಿಕ ರವಿ ಪಾಟೀಲ ದೂರಿದರು.

‘ಳಿಗ್ಗೆಯೂ ಯಲ್ಲಾಪುರದಿಂದ ಮುಂಡಗೋಡಕ್ಕೆ ಬರುವ ಬಸ್, ಎರಡು ಗಂಟೆ ತಡವಾಗಿ ಬಿಟ್ಟಿದೆ. ಕೆಲವರು, ಬಸ್ ಬಾರದಿದ್ದಾಗ ಖಾಸಗಿ ವಾಹನದಲ್ಲಿ ಮುಂಡಗೋಡಕ್ಕೆ ಬಂದಿದ್ದಾರೆ. ಈ ಮಾರ್ಗದಲ್ಲಿ ಈಚೆಗಿನ ದಿನಗಳಲ್ಲಿ ನಿಗದಿತ ಸಮಯ ಮೀರಿ, ಸಾರಿಗೆ ಬಸ್ಗಳು ಸಂಚರಿಸುತ್ತಿವೆ. ಕೆಲವು ಮಾರ್ಗ ಮಧ್ಯೆ ಕೆಟ್ಟು ನಿಲ್ಲುವಂತ ದೃಶ್ಯ ಸಾಮಾನ್ಯವಾಗಿದೆ. ಸಾರಿಗೆ ಸಿಬ್ಬಂದಿಗೆ ಪ್ರಯಾಣಿಕರ ಕಷ್ಟ ಅರ್ಥವಾಗುತ್ತಿಲ್ಲ. ಬಸ್ ಬರುತ್ತದೆ ಎನ್ನುತ್ತಲೇ ಸಮಯ ದೂಡುತ್ತಿದ್ದಾರೆ’ಎಂದು ಪ್ರಯಾಣಿಕರಾದ ಝೀನತ್, ಸವಿತಾಬಾಯಿ ಹೇಳಿದರು.

‘ತಾಲ್ಲೂಕಿನಲ್ಲಿ ಬಸ್ ಘಟಕವಿದ್ದರೂ, ಸಾರಿಗೆ ಸಮಸ್ಯೆ ಮುಂದುವರಿದಿದೆ. ಸ್ಥಳೀಯ ಘಟಕದಿಂದ ಹೊಸ ಬಸ್ಗಳನ್ನು ಬಿಡುವ ವ್ಯವಸ್ಥೆಯಾಗಬೇಕು. ಹಳೆಯ ಬಸ್ಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಓಡಿಸುತ್ತಿರುವುದರಿಂದ, ಎಲ್ಲೆಂದರಲ್ಲಿ ಹಾಳಾಗಿ ನಿಲ್ಲುತ್ತವೆ. ಇದರಿಂದ, ನಿಗದಿತ ಸಮಯ ಮೀರಿ, ಬಸ್ಗಳು ಸಂಚರಿಸುವಂತ ಪರಿಸ್ಥಿತಿಯಿದೆ. ಸಾರಿಗೆ ಅಧಿಕಾರಿಗಳು ಈ ಕುರಿತು ಗಮನಹರಿಸಬೇಕು’ ಎಂದು ಮುಂಡಗೋಡ ನಾಗರಿಕ ವೇದಿಕೆ ಅಧ್ಯಕ್ಷ ಗುಡ್ಡಪ್ಪ ಕಾತೂರ ಆಗ್ರಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-20-2066170984

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.