ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳಿ ಸೇತುವೆ ಕುಸಿತ | ನದಿಯಲ್ಲಿ ಬಿದ್ದ ಲಾರಿ ಹೊರತರಲು ವಾರದ ಬಳಿಕ ಕಾರ್ಯಾಚರಣೆ

ಲಾರಿಯನ್ನು ದಡಕ್ಕೆ ತರುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದ ಲಾರಿ ಮಾಲೀಕ ಸೆಂಥಿಲ್‌ಕುಮಾರ್, ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ್ದ.
Published 14 ಆಗಸ್ಟ್ 2024, 13:39 IST
Last Updated 14 ಆಗಸ್ಟ್ 2024, 13:39 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಕೋಡಿಬಾಗದಲ್ಲಿ ಕಾಳಿ ನದಿಯ ಸೇತುವೆ ಕುಸಿದು, ನದಿಗೆ ಬಿದ್ದ ಲಾರಿಯನ್ನು ದಡಕ್ಕೆ ತರುವ ಕಾರ್ಯಾಚರಣೆಯನ್ನು ಜಿಲ್ಲಾಡಳಿತವು ಒಂದು ವಾರದ ಬಳಿಕ ಬುಧವಾರ ಆರಂಭಿಸಿತು.

ಆಗಸ್ಟ್ 7ರ ತಡರಾತ್ರಿ ಸೇತುವೆ ಕುಸಿದಿದ್ದರಿಂದ ಲಾರಿಯು ನದಿ ಪಾಲಾಗಿತ್ತು. ದಡದಿಂದ 120 ಮೀಟರ್ ದೂರದಲ್ಲಿ ಸೇತುವೆಯ ಅವಶೇಷಗಳ ನಡುವೆ ಲಾರಿ ಸಿಲುಕಿದೆ. ಕ್ರೇನ್ ಬಳಸಿ ಲಾರಿ ಎಳೆಯುವ ಪ್ರಯತ್ನ ನಡೆದಿದೆ.

‘ಲಾರಿಯನ್ನು ದಡಕ್ಕೆ ತರುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದ ಲಾರಿ ಮಾಲೀಕ ತಮಿಳುನಾಡಿನ ಸೆಂಥಿಲ್‌ಕುಮಾರ್, ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ಮಂಗಳವಾರ ರಾತ್ರಿ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ. ಸೆಂಥಿಲ್‌ಕುಮಾರ್ ಮತ್ತು ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದ ಮೇಲೆ ತಮಿಳುನಾಡಿನ ಶಶಿಕುಮಾರ ಮತ್ತು ರಥಿನಂ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಚಿತ್ತಾಕುಲ ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಸೇತುವೆಯ ಅವಶೇಷಗಳಡಿ ಲಾರಿ ಸಿಲುಕಿದ್ದರಿಂದ ಕಾರ್ಯಾಚರಣೆ ಕಷ್ಟವಾಗಿದೆ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು. ಸುರಕ್ಷತೆ ದೃಷ್ಟಿಯಿಂದ ಸೇತುವೆಯ ಸಮೀಪ ಮೀನುಗಾರಿಕೆ ನಡೆಸದಂತೆ ನಿರ್ಬಂಧಿಸಲಾಗಿದೆ.

ಕಾಳಿ ನದಿಯ ಸೇತುವೆ ಅವಶೇಷಗಳೊಂದಿಗೆ ಮುಳುಗಿರುವ ಲಾರಿಯ ಅಲ್ಪ ಭಾಗ ಮಾತ್ರ ಹೊರಕ್ಕೆ ಕಾಣುತ್ತಿರುವುದು.
ಕಾಳಿ ನದಿಯ ಸೇತುವೆ ಅವಶೇಷಗಳೊಂದಿಗೆ ಮುಳುಗಿರುವ ಲಾರಿಯ ಅಲ್ಪ ಭಾಗ ಮಾತ್ರ ಹೊರಕ್ಕೆ ಕಾಣುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT