ಗೋಕರ್ಣ: ‘ಪರಿಸರ ಮಾನವನಿಗೆ ಎಲ್ಲವನ್ನೂ ನೀಡಿದೆ. ಆದರೆ ಮನುಷ್ಯ ಅಪರಿಮಿತ ಬಯಕೆ ಈಡೇರಿಸಿಕೊಳ್ಳಲು ಪರಿಸರವನ್ನು ವಿವಿಧ ತೆರನಾಗಿ ಶೋಷಣೆಗೆ ಒಳಪಡಿಸುತ್ತಿದ್ದಾನೆ. ಇದರಿಂದ ಪರಿಸರದ ಮೇಲೆ ಮನುಷ್ಯನ ಅತೀಯಾದ ಒತ್ತಡದಿಂದ ಪ್ರಾಕೃತಿಕ ವಿಕೋಪ ಸಂಭವಿಸುತ್ತದೆ. ಪರಿಸರ ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ನಿವೃತ್ತ ಡಿಎಫ್ಒ ಲಯನ್ಸ್ ಕ್ಲಬ್ ಗೋಕರ್ಣ ಲಯನ್ಸ್ ಕ್ಲಬ್ ಸದಸ್ಯ ರವಿ ಎಚ್. ನಾಯಕ ಹೇಳಿದರು.
ಹಿರೇಗುತ್ತಿ ಹೈಸ್ಕೂಲಿನಲ್ಲಿ ಸವಿ ಫೌಂಡೇಷನ್ ಮೂಡಬಿದ್ರೆ ಹಾಗೂ ಲಯನ್ಸ್ ಕ್ಲಬ್ ಗೋಕರ್ಣ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಡೆದ ಮಣ್ಣು ಮತ್ತು ಭೂಮಿಯ ಮೇಲೆ ಹವಾಮಾನ ಪರಿಣಾಮದ ಬದಲಾವಣೆಗಳು ಮತ್ತು ಸುಸ್ಥಿರ ಅಭಿವೃದ್ಧಿ, ಯೋಜನೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ರೋಹಿದಾಸ ಗಾಂವಕರ, ‘ಯೋಜನೆ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತದೆ. ಕಾರ್ಯಕ್ರಮದ ಪ್ರಯೋಜನ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು’ ಎಂದರು.
ಸವಿ ಫಂಡೇಷನ್ ಅಧ್ಯಕ್ಷ ಡಾ.ಸಂದೀಪ ನಾಯಕ ಹಿರೇಗುತ್ತಿ, ಮಾತನಾಡಿ ನಮ್ಮ ಸವಿ ಫೌಂಡೇಷನ್ ಹತ್ತು ಹಲವು ಜನಪ್ರಿಯ ಕಾರ್ಯಕ್ರಮಗಳ ಮುಖಾಂತರ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಭತ್ತದ ತಳಿ ಸಂರಕ್ಷಕ ನಾಗರಾಜ ನಾಯ್ಕ ಕಾಗಲ ಅವರನ್ನು ಸನ್ಮಾನಿಸಲಾಯಿತು. ಗೋಕರ್ಣದ ಲಯನ್ಸ್ ಕ್ಲಬ್ ಅಧ್ಯಕ್ಷ ರವಿ ಕೊಡ್ಲೆಕೆರೆ ಹಾಗೂ ಆಡಳಿತ ಮಂಡಳಿಯ ಎನ್.ಟಿ ನಾಯಕ ಮಾತನಾಡಿದರು.
ಕುಮಟಾ ತಾಲ್ಲೂಕು ಮಟ್ಟದ ಯೋಜನಾ ಪ್ರಾತ್ಯಕ್ಷಿಕೆಯಲ್ಲಿ ಪ್ರಥಮ ಬಹುಮಾನವನ್ನು ಸಿ.ವಿ.ಎಸ್.ಕೆ. ಶಾಲೆಯ ಕೃತಿಕಾ ಭಟ್ ಮತ್ತು ದಿಶಾ ಡಿ.ನಾಯ್ಕ, ದ್ವಿತೀಯ ಬಹುಮಾನವನ್ನು ಸಿ.ವಿ.ಎಸ್.ಕೆ. ಶಾಲೆಯ ಸ್ನೇಹಾ ಉದಯ ನಾಯ್ಕ ಮತ್ತು ಸಿಂಚನಾ ಡಿ.ಭಟ್, ತೃತೀಯ ಬಹುಮಾನವನ್ನು ಮಿರ್ಜಾನ ಜನತಾ ವಿದ್ಯಾಲಯದ ತಂಜೀಮ್ ತನ್ವೀರ್ ಶೇಖ್ ಮತ್ತು ದಿಶಾಯಿ ದೇಶಭಂಡಾರಿ ಪಡೆದುಕೊಂಡರು.
ವೇದಿಕೆಯಲ್ಲಿ ಗೋಕರ್ಣ ಲಯನ್ಸ್ ಕ್ಲಬ್ ಕಾರ್ಯದರ್ಶಿ ಅಮಿತ್ ಗೋಕರ್ಣ, ಉಮಾ ಹೆಗಡೆ, ನೇತ್ರಾವತಿ ನಾಯ್ಕ, ಕುಮಟಾ ತಾಲ್ಲೂಕು ವಿಜ್ಞಾನ ಸಂಘದ ಅಧ್ಯಕ್ಷ ಸಿದ್ದರಾಮಪ್ಪ ಭಟಕುರ್ಕಿ ಆನಂದಾಶ್ರಮ ಶಾಲೆ ಬಂಕಿಕೊಡ್ಲ, ಹಿರೇಗುತ್ತಿ ಹೈಸ್ಕೂಲ್ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಎನ್.ರಾಮು ಹಿರೇಗುತ್ತಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.