ಕುಮಟಾ: ತಾಲ್ಲೂಕಿನ ಹೊಲನಗದ್ದೆ ಗಾಂಧಿವನ ಮೈದಾನದಲ್ಲಿ ಗುರುವಾರ ಆರಂಭಗೊಂಡ ತಾಲ್ಲೂಕುಮಟ್ಟದ ದಸರಾ ಕ್ರೀಡಾಕೂಟಕ್ಕೆ ಮಳೆ ಅಡ್ಡಪಡಿಸಿದ್ದರಿಂದ ಶುಕ್ರವಾರ ಮಂದೂಡಲಾಯಿತು.
ಮಹಿಳೆಯರ ಹಾಗೂ ಪುರುಷರ ವಿಭಾಗದ ಹೆಚ್ಚಿನ ಎಲ್ಲ ಕ್ರೀಡೆಗಳು ಅಂತಿಮ ಹಂತ ತಪುತ್ತಿದ್ದಂತೆಯೇ ಮಧ್ಯಾಹ್ನ 3 ಗಂಟೆಗೆ ಧಾರಾಕಾರ ಮಳೆ ಆರಂಭವಾಗಿ ಕ್ರೀಡಾಕೂಟ ಸ್ಥಗಿತಗೊಳಿಸುವುದು ಅನಿವಾರ್ಯವಾಯಿತು. ಕಾರ್ಯಕ್ರಮ ಉದ್ಘಾಟನೆ ಸಮಯದಲ್ಲೂ ಮಳೆ ಬಂದು ಆರಂಭಕ್ಕೆ ವಿಳಂಬವಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ, ‘ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಸೇರಿದಂತೆ ಹಲವು ಯೋಜನೆಗಳನ್ನು ಬಳಸಿಕೊಂಡು ದೇಶದ ಯುವ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಗ್ರಾಮೀಣ ಕ್ರೀಡಾಪಟಗಳಿಗೆ ಮಾದರಿಯಾಗಬೇಕು’ ಎಂದರು.
‘ಈ ಸಲ ದಸರಾ ಕ್ರೀಡಾಕೂಟಕ್ಕೆ ಮಳೆಯ ಅಡಚಣೆ ಜೊತೆ ಹೆಚ್ಚು ತಂಡಗಳು ಪಾಲ್ಗೊಂಡಿದ್ದರಿಂದ ಎಲ್ಲ ಅಂತಿಮ ಪಂದ್ಯಗಳನ್ನು ಶುಕ್ರವಾರ ನಡೆಸಲಾಗುವುದು’ ಎಂದು ತಾಲ್ಲೂಕು ಪಂಚಾಯ್ತಿ ಇಒ ನಾಗರತ್ನಾ ನಾಯಕ ಮಾಹಿತಿ ನೀಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ.ಎಂ. ಹೆಗಡೆ, ಉಪಾಧ್ಯಕ್ಷ ಮಹಾಂತೇಶ ಹರಿಕಂತ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.