ದಾಂಡೇಲಿ: ನಗರದ ಹಾಗೂ ಗ್ರಾಮೀಣ ಭಾಗದಲ್ಲಿ ಶನಿವಾರ ಸಂಜೆ ಗಾಳಿ, ಗುಡುಗು ಮಿಶ್ರಿತ ಒಂದು ಗಂಟೆಗೂ ಹೆಚ್ಚು ಹೊತ್ತು ಮಳೆ ಸುರಿಯಿತು.
ನಗರದ ಅನೇಕ ಕಡೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿದ್ದು, ಗಟಾರು ತುಂಬಿ ರಸ್ತೆಯಲ್ಲಿ ಕಡ್ಡಿ ಕಸ ಹರಡಿಕೊಂಡಿತು. ಬೇಸಿಗೆಗೆ ಬೇಸತ್ತ ಜನರಿಗೆ ಮಳೆ ಖುಷಿ ತಂದಿದೆ. ಓಣಿಯಲ್ಲಿ ಚಿಕ್ಕ ಮಕ್ಕಳು ಮಳೆಗೆ ಮೈಯೊಡ್ಡಿ ಕುಣಿದು ಕುಪ್ಪಳಿಸಿ ಖುಷಿ ಪಟ್ಟರು.
ಸುಭಾಷ ನಗರ ಮಸೀದಿ ಪಕ್ಕದ ಪಂಜಾ ಮಕಾನ್‌ದಲ್ಲಿ ಮಳೆ ನೀರು ಒಳನುಗ್ಗಿದ್ದು, ಸುಮಾರು ಎರಡು ಅಡಿ ನೀರು ನಿಂತಿದೆ.