ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ತುಂತುರು ಮಳೆ ಸುರಿಯುತ್ತಿದ್ದು, ಹಬ್ಬದ ಸಂಭ್ರಮಕ್ಕೆ ಅಡ್ಡಿ ಉಂಟುಮಾಡಿತು.
ಕರಾವಳಿ ಭಾಗದ ತಾಲ್ಲೂಕುಗಳಲ್ಲಿ ಶನಿವಾರ ರಾತ್ರಿಯಿಂದಲೂ ಆಗಾಗ ತುಂತುರು ಮಳೆ ಸುರಿಯಿತು. ಘಟ್ಟದ ಮೇಲಿನ ಹಲವೆಡೆ ಎರಡು ದಿನಗಳಿಂದಲೂ ಎಡಬಿಡದೆ ಸುರಿದ ಮಳೆಯಿಂದ ಹಬ್ಬದ ಸಂಭ್ರಮದಲ್ಲಿದ್ದ ಜನರು ಬೇಸರಿಸುವಂತಾಯಿತು. ಮಳೆಯಿಂದಾಗಿ ಪಟಾಕಿ ವ್ಯಾಪಾರ ಕಳೆಗುಂದಿದೆ ಎಂದು ವ್ಯಾಪಾರಿಗಳು ಬೇಸರಿಸಿದರು.