ಶಿರಸಿ: ಶಾಸಕ ಶಿವರಾಮ ಹೆಬ್ಬಾರ ಅವರು ವೀರಶೈವ ಲಿಂಗಾಯತ ವಿರೋಧಿ ಎಂದು ಸುಳ್ಳು ಆರೋಪ ಮಾಡಿರುವ ಕಾಳಂಗಿ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ರಾಜಶೇಖರ ಗೌಡ ಅವರು ತಕ್ಷಣವೇ ಸಮಾಜದ ಹಾಗೂ ಶಾಸಕರ ಕ್ಷಮೆಯಾಚಿಸಬೇಕು ಎಂದು ಬನವಾಸಿ ಭಾಗದ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಮುದಾಯದ ಪ್ರಮುಖರು, ಶಾಸಕ ಶಿವರಾಮ ಹೆಬ್ಬಾರ ಅವರ ವಿರುದ್ಧ ಕೇಳಿ ಬಂದಿರುವ ಜಾತಿ ನಿಂದನೆಯ ಆರೋಪ ಸಂಪೂರ್ಣ ಸುಳ್ಳು ಮತ್ತು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಶಾಂತ ಗೌಡ, ‘ವೀರಶೈವ-ಲಿಂಗಾಯತ ಸಮಾಜಕ್ಕೆ ಶಾಸಕ ಹೆಬ್ಬಾರ ಅವರ ಕೊಡುಗೆ ಅಪಾರ. ಅವರು ಯಾವತ್ತಿಗೂ ಜಾತಿ-ಧರ್ಮದ ತಾರತಮ್ಯ ಮಾಡಿದವರಲ್ಲ. ಶಾಸಕರು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದು, ನನ್ನನ್ನೂ ಸೇರಿದಂತೆ ಸಮುದಾಯದ ಹಲವು ನಾಯಕರನ್ನು ರಾಜಕೀಯವಾಗಿ ಬೆಳೆಸಿದ್ದಾರೆ. ಸಮಾಜದ ದೇವಾಲಯಗಳ ಅಭಿವೃದ್ಧಿಗೂ ಶ್ರಮಿಸಿದ್ದಾರೆ. ಇಂದು ಶಾಸಕರ ವಿರುದ್ಧ ಆರೋಪ ಮಾಡುತ್ತಿರುವ ರಾಜಶೇಖರ ಗೌಡ ಅವರು ಹಿಂದೆ ಸಹಕಾರ ಸಂಘದ ಅಧ್ಯಕ್ಷರಾಗಲು ಶಾಸಕ ಹೆಬ್ಬಾರ ಅವರೇ ಕಾರಣ ಎಂಬುದನ್ನು ಮರೆಯಬಾರದು’ ಎಂದರು.

ಬನವಾಸಿ ಸಹಕಾರ ಸಂಘದ ಮಾಜಿ ಅಧ್ಯಕ್ಷ ವಿನಯ ಗೌಡ ಭಾಶಿ ಮಾತನಾಡಿ, ‘ಶಾಸಕರ ಮೇಲೆ ಮಾಡಿರುವ ಜಾತಿ ನಿಂದನೆಯ ಆರೋಪ ಸತ್ಯಕ್ಕೆ ದೂರವಾಗಿದೆ. ಸಮಾಜಕ್ಕೆ ಶಾಸಕರ ಕೊಡುಗೆ ದೊಡ್ಡದಾಗಿದ್ದು, ಅವರ ವಿರುದ್ಧದ ಈ ಅಪಪ್ರಚಾರವನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ರಾಜಶೇಖರ ಗೌಡ ಅವರು ತಮ್ಮ ಹೇಳಿಕೆ ತಪ್ಪಾಯಿತು ಎಂದು ಬಹಿರಂಗವಾಗಿ ಕ್ಷಮೆ ಕೇಳಲೇಬೇಕು’ ಎಂದು ಒತ್ತಾಯಿಸಿದರು.

ಬದನಗೋಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ ಮಾತನಾಡಿ, ‘ಶಾಸಕ ಶಿವರಾಮ ಹೆಬ್ಬಾರ ಅವರ ವಿರುದ್ಧದ ಲಿಂಗಾಯತ ವಿರೋಧಿ ಹೇಳಿಕೆ ಮೂರ್ಖತನದ ಪರಮಾವಧಿಯಾಗಿದೆ. ಕಾಳಂಗಿ ಸಹಕಾರ ಸಂಘದಲ್ಲಿ ತಾವೇ ನಡೆಸಿದ ಅವ್ಯವಹಾರ ಮತ್ತು ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ರಾಜಶೇಖರ ಗೌಡ ಅವರು ಲಿಂಗಾಯತ ವಿರೋಧಿ ಎಂಬ ಹೊಸ ರಾಗ ಹಾಡುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಅವರು ವೀರಶೈವ-ಲಿಂಗಾಯತ ಸಮಾಜದ ಹೆಸರನ್ನು ಹಾಳು ಮಾಡುತ್ತಿದ್ದು, ಕೂಡಲೇ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

ಸಮಾಜದ ಮುಖಂಡರಾದ ರಾಜು ಗೌಡ ಕಂತ್ರಾಜಿ, ಉಮೇಶ ಗೌಡ ಕಾಳಂಗಿ, ವೀರಭದ್ರ ಗೌಡ ತಿಗಣಿ, ಶಂಕರ ಗೌಡ ಕಂತ್ರಾಜಿ, ಉದಯ ಗೌಡ, ಮಹಾದೇವ ಗೌಡ, ನಾಗರಾಜ ಅಂಡಗಿ, ಶಿವಕುಮಾರ ಗೌಡ ಕಂತ್ರಾಜಿ, ವಸಂತ ಗೌಡ, ಬಸವರಾಜ ಗೌಡ, ಗಣಪತಿ ಗೌಡ, ಸುಭಾಸ ಗೌಡ, ಬಸವರಾಜ ಗೌಡ ಸಂತೋಳ್ಳಿ, ಎಂ.ಜಿ.ಪಾಟೀಲ ಹಾಗೂ ಚನ್ನಪ್ಪ ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-20-1032169606

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.