ಭಟ್ಕಳ: ತಾಲ್ಲೂಕಿನ ಶಿರಾಲಿಯ ನಿವಾಸಿ, ಸಾಹಿತಿ ರಮೇಶ ಸರಾಫ (74) ಸೋಮವಾರ ಅನಾರೋಗ್ಯದಿಂದ ನಿಧನರಾದರು. ಮೃತರಿಗೆ ಓರ್ವ ಪುತ್ರ, ಪುತ್ರಿ ಇದ್ದಾರೆ.

ಶಿರಾಲಿ ಗ್ರಾಮದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಅವರು, ಭಟ್ಕಳ ತಾಲ್ಲೂಕಿನ ಪತ್ರಿಕೋದ್ಯಮ, ಸಾಹಿತ್ಯ, ಮಕ್ಕಳ ಬೇಸಿಗೆ ಶಿಬಿರ, ಮಕ್ಕಳ ಯಕ್ಷಗಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದರು.

ಭಟ್ಕಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.

'ವೈರಸ ಶಿರಾಲಿ' (ವೈದ್ಯ ರಮೇಶ್ ಸರಾಫ್) ಎಂಬ ಕಾವ್ಯನಾಮದಲ್ಲಿ ವಿವಿಧ ಪತ್ರಿಕೆಗಳಲ್ಲಿ ನೂರಾರು ಲೇಖನಗಳನ್ನು ಪ್ರಕಟಿಸಿ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದರು. ಗಣಿ ಧೂಳಿನಿಂದ ಮೂಡಿಬಂದ ಚುಟುಕುಗಳು, ಅಂದ ವ್ಯಕ್ತಿತ್ವಕ್ಕೆ ಚಂದ ಪಂಚಾಂಗ, ಶಾಲೆಗೆ ಮೇಷ್ಟ್ರು ಬಂದಿದ್ದಾರೆ ಮುಂತಾದ ಕೃತಿಗಳನ್ನು ರಚಿಸಿದ್ದರು. ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು.

'ಆಚಾರ' ಮತ್ತು 'ಬೆಳಕಿಂಡಿ' ಪತ್ರಿಕೆಗಳನ್ನು ಪ್ರಾರಂಭಿಸುವ ಮೂಲಕ ಭಟ್ಕಳದ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬುನಾದಿ ಹಾಕಿದವರಾಗಿ ಗುರುತಿಸಿಕೊಂಡಿದ್ದರು. ಕೊಂಕಣಿ ಮಾತೃ ಭಾಷೆಯಾಗಿದ್ದರೂ ಭಟ್ಕಳದಲ್ಲಿ ಕನ್ನಡದ ಸಾಹಿತ್ಯದೀಪ ಬೆಳಗಿದ್ದರು.

ಭಟ್ಕಳ ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಅವರ ನಿಧನಕ್ಕೆ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶಿರಾಲಿಯ ಕಲಾಸಿರಿ ಪ್ರತಿಷ್ಠಾನ, ಶಿರಾಲಿಯ ಗುರು ನಮನ ಬಳಗ ಹಾಗೂ ಇನ್ನಿತರ ಸಾಂಸ್ಕೃತಿಕ ಹಾಗೂ ಸಾಮಾಜಿಕ ವಲಯದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.