ಶಿರಸಿ: ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಸಂಬಂಧ ಸ್ಥಳೀಯರು ಹಾಗೂ ಪರಿಸರ ಕಾರ್ಯಕರ್ತರಿಗೆ ಯಾವುದೇ ಪೂರ್ವ ಮಾಹಿತಿ ನೀಡದೆ, ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಮತ್ತು ರಾಜ್ಯದ ಎಂಜಿನಿಯರಿಂಗ್ ಅಧಿಕಾರಿಗಳ ತಂಡವು ದಟ್ಟ ಅರಣ್ಯ ಪ್ರದೇಶಗಳಲ್ಲಿ ತಾಂತ್ರಿಕ ಸ್ಥಳ ಪರಿಶೀಲನೆ ನಡೆಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

‘ಏ. 28ರಂದು ನಡೆದ ಈ ಭೇಟಿಯಲ್ಲಿ ಅಧಿಕಾರಿಗಳು ಮುಖ್ಯವಾಗಿ ಭೂಪ್ರದೇಶದ ಸಮೀಕ್ಷೆ ನಡೆಸಿದ್ದಾರೆ. ಜತೆಗೆ, ಅರಣ್ಯದಲ್ಲಿ ಸಾಗುವ ಪೈಪ್ಲೈನ್ ಹಾಗೂ ಸುರಂಗ ಸಾಗುವ ಮಾರ್ಗಗಳನ್ನು ವೀಕ್ಷಿಸಿದ್ದಾರೆ. ಬೇಡ್ತಿಯ ಉಪನದಿಯಾದ ಪಟ್ಟಣಹಳ್ಳದ ಬಳಿ ನೀರನ್ನು ಎತ್ತುವ ತಂತ್ರಜ್ಞಾನ ಮತ್ತು 6 ರಿಂದ 15 ಕಿಲೋಮೀಟರ್ ಉದ್ದದ ಬೃಹತ್ ಸುರಂಗ ಮಾರ್ಗ ನಿರ್ಮಿಸುವ ಕುರಿತು ತಂಡದ ಸದಸ್ಯರು ಮೌಲ್ಯಮಾಪನ ಮಾಡಿದ್ದಾರೆ. ಮೆಣಸಗೋಡ ಮತ್ತು ಪಟ್ಟಣಹಳ್ಳದ ದಟ್ಟ ಕಾಡಿನ ಮಧ್ಯೆ ಅಣೆಕಟ್ಟು ಕಟ್ಟುವ ಸಾಧ್ಯತೆಗಳನ್ನು ಪರಿಶೀಲಿಸಿದ್ದಾರೆ. ಪಟ್ಟಣಹಳ್ಳದಿಂದ ಸುರಂಗದ ಮೂಲಕ ಬರುವ ನೀರು ವರದಾ ನದಿಯನ್ನು ಸೇರುವ ಅಂತಿಮ ಗುರಿಯನ್ನು ನಕ್ಷೆಯೊಂದಿಗೆ ತಾಳೆ ಮಾಡಿದ್ದಾರೆ. ಇಷ್ಟೆಲ್ಲ ಮಾಡಿದರೂ ಯಾರೊಬ್ಬರಿಗೂ ಪೂರ್ವ ಮಾಹಿತಿ ನೀಡಿಲ್ಲ’ ಎಂದು ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಪದಾಧಿಕಾರಿಯೊಬ್ಬರು ಆರೋಪಿಸಿದರು.

‘ಅರಣ್ಯ ನಾಶದ ಭೀತಿಯನ್ನು ಮರೆಮಾಚಲು ಲಿಫ್ಟ್ ಇರಿಗೇಶನ್ ಎಂಬ ಹೊಸ ನಾಟಕವನ್ನು ಮುನ್ನೆಲೆಗೆ ತಂದಿದ್ದಾರೆ. ಸುರಂಗ ಮಾರ್ಗಗಳು ಮತ್ತು ಪೈಪ್ಲೈನ್ಗಳಿಂದ ಕಾಡಿನ ಅಡಿಯಲ್ಲಿ ಆಗುವ ಭೂವೈಜ್ಞಾನಿಕ ಬದಲಾವಣೆಗಳು ಹಾಗೂ ಜಲಮೂಲಗಳ ಮೇಲಾಗುವ ಭೀಕರ ಪರಿಣಾಮಗಳ ಬಗ್ಗೆ ಅಧಿಕಾರಿಗಳು ಮೌನ ವಹಿಸಿದ್ದಾರೆ. ಶಿರಸಿಯ ಮೆಣಸಗೋಡ, ಪಟ್ಟಣಹಳ್ಳ, ಕೆಂಗ್ರೆ ಹಾಗೂ ಸುರೆಮನೆಯಂತಹ ಜೀವವೈವಿಧ್ಯದ ತಾಣಗಳಲ್ಲಿ ಅಧಿಕಾರಿಗಳ ಓಡಾಟವು ಮಲೆನಾಡಿನ ಸರ್ವನಾಶಕ್ಕೆ ಮುನ್ನುಡಿ ಬರೆದಂತಿದೆ’ ಎನ್ನುತ್ತಾರೆ ಪರಿಸರ ಕಾರ್ಯಕರ್ತ ಎನ್.ಎಂ. ಹೆಗಡೆ.

‘ತಾಂತ್ರಿಕ ಭೇಟಿಯು ವಿವರವಾದ ಯೋಜನಾ ವರದಿ ಅಂತಿಮಗೊಳಿಸಲು ಅತ್ಯಂತ ನಿರ್ಣಾಯಕವಾಗಿದೆ. ಸಂಗ್ರಹಿಸಿದ ದತ್ತಾಂಶಗಳನ್ನು ಆಧರಿಸಿ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ವರದಿ ಸಲ್ಲಿಕೆಯಾಗಲಿದೆ. ವರದಿ ಬಂದ ತಕ್ಷಣ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಅರಣ್ಯ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, ಪ್ರಕೃತಿಯ ಒಡಲಿಗೆ ಕತ್ತರಿ ಹಾಕುವ ಇಂತಹ ಅವೈಜ್ಞಾನಿಕ ಯೋಜನೆಗಳನ್ನು ಹಿತಾಸಕ್ತಿಗಳಿಗಾಗಿ ಜಾರಿಗೆ ತಂದರೆ, ಮುಂದಿನ ದಿನಗಳಲ್ಲಿ ಮಲೆನಾಡಿಗರಿಂದ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ’ ಎಂಬುದು ಪರಿಸರ ಕಾರ್ಯಕರ್ತರ ಎಚ್ಚರಿಕೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-20-960524656

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.