ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕರ್ಣದ ಅಶೋಕೆಯಲ್ಲಿ ‘ಸೇವಕ ಸೌಧ’ ಉದ್ಘಾಟನೆ

Last Updated 28 ನವೆಂಬರ್ 2022, 14:51 IST
ಅಕ್ಷರ ಗಾತ್ರ

ಕಾರವಾರ: ‘ಸೇವೆಗೆ ಉನ್ನತ ಸ್ಥಾನವಿದೆ. ಇದು ಭಾರತದ ಪರಂಪರೆ. ಸೇವಕರು ಯಾವ ವೈಭವವೂ ಇಲ್ಲದೇ ಸೇವೆಯಲ್ಲಿ ನಿರತರಾಗಿರುತ್ತಾರೆ. ಅವರಿಗೆ ಅತ್ಯುನ್ನತ ಗೌರವ ಸಲ್ಲಬೇಕು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ಗೋಕರ್ಣದ ಅಶೋಕೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಸೋಮವಾರ, ‘ಸೇವಕ ಸೌಧ’ದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸೇವಕರು ವೈಭವಕ್ಕೆ ಕಾರಣರಾಗುತ್ತಾರೆ. ಆದರೆ, ಅವರಿಗೆ ವೈಭವ ಇಲ್ಲ. ಅವರಿಗೂ ಗೌರವ ಸಲ್ಲಿಸಬೇಕು ಎಂಬ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ಭವನ ನಿರ್ಮಿಸಲಾಗುತ್ತಿದೆ. ಸಾಲು ಸಾಲು ಉದ್ಘಾಟನೆಗಳು ನಡೆಯಲಿವೆ. ಸೇವಾಸೌಧದ ಉದ್ಘಾಟನೆ ಇದರಲ್ಲಿ ಮೊದಲನೆಯದು. ಸ್ವಾಮೀಜಿ ವಾಸಿಸುವ ಸ್ಥಳಕ್ಕಿಂತಲೂ ಎತ್ತರದಲ್ಲಿ ಸೇವಾ ಸೌಧ ನಿರ್ಮಿಸಲಾಗಿದೆ. ಇದು ಸೇವೆಗೆ ಸಂದ ಗೌರವ’ ಎಂದು ಬಣ್ಣಿಸಿದರು.

ಸೇವಾ ಸೌಧವನ್ನು ಉದ್ಘಾಟಿಸಿದ ಭಟ್ಕಳ ಶಾಸಕ ಸುನೀಲ ನಾಯ್ಕ ‘ಅಶೋಕೆಯಲ್ಲಿ ವಿಶ್ವವಿದ್ಯಾಪೀಠದ ಆವರಣದಲ್ಲಿ ಅದ್ಭುತ ಕಾರ್ಯ ಆಗುತ್ತಿದೆ. ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಲು ಸ್ವಾಮೀಜಿ ಪ್ರೇರಣೆ. ಅಧಿಕಾರ ಇದ್ದರೂ ಇಲ್ಲದಿದ್ದರೂ ಸೇವೆ ಸಲ್ಲಿಸಲು ಸದಾ ಬದ್ಧ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಗೋಕರ್ಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಜನ್ನು, ‘ಆರೇಳು ವರ್ಷಗಳಿಂದ ಇಲ್ಲಿ ನಡೆಯುತ್ತಿರುವ ಕಾರ್ಯಗಳು ಇಡೀ ಗೋಕರ್ಣಕ್ಕೆ ಹೆಮ್ಮೆ. ಇಂಥ ಕಾಡು ಪ್ರದೇಶದಲ್ಲಿ ಅದ್ಭುತ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ’ ಎಂದು ಹೇಳಿದರು.

ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್‍.ಹೆಗಡೆ ಹರಗಿ, ಡಾ.ಡಿ.ಡಿ.ಶರ್ಮಾ, ಕುಮಟಾ ಉಪವಿಭಾಗಾಧಿಕಾರಿ ರಾಘವೇಂದ್ರ ಪಿ.ಜಗಳಾಸರ, ಸಿ.ಪಿ.ಐ ವಸಂತ ಆಚಾರ್, ನಿರ್ಮಿತಿ ಪರಿಷತ್ತಿನ ಸದಸ್ಯರು ಇದ್ದರು. ಸೇವಕ ಸೌಧದಲ್ಲಿ ವಾಸ ಮಾಡುವವರಿಗೆ ಮನೆಗಳ ಕೀಲಿಕೈಗಳನ್ನು ಹಸ್ತಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT