ಶಿರಸಿ: ಇಲ್ಲಿನ ಆರೋಹಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಮೇ 22ರಿಂದ 24ರ ವರೆಗೆ ನಗರದ ಯೋಗಮಂದಿರದಲ್ಲಿ ಭಜನಾ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

4 ವರ್ಷಗಳಿಂದ ನಿರಂತರ ಸಂಗೀತ ತರಗತಿ, ರಾಜ್ಯಮಟ್ಟದ ಖ್ಯಾಲ್ ಗಾಯನ ಸ್ಪರ್ಧೆ ಹಾಗೂ ಆರೋಹಿ ಸಾಧಕ ಪ್ರಶಸ್ತಿ ಪ್ರದಾನದಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಸಂಸ್ಥೆಯು, ಈ ವರ್ಷ ಆಧ್ಯಾತ್ಮಿಕ ಸಾಧನೆಗೆ ಪೂರಕವಾದ ಅಪರೂಪದ ಭಜನಾ ಶಿಬಿರವನ್ನು ಆಯೋಜಿಸುತ್ತಿದೆ. ಈ ಶಿಬಿರದಲ್ಲಿ ಭಜನಾ ಮಾರ್ಗಸೂಚಿ, ಧ್ವನಿ ಸಂಸ್ಕಾರ, ರಾಗ-ಶೃತಿ ಜ್ಞಾನ, ವಾದ್ಯ ಬಳಕೆ, ಸಾಮೂಹಿಕ ಗಾಯನ ಹಾಗೂ ಭಕ್ತಿಯ ಮಹತ್ವದ ಕುರಿತು ತರಬೇತಿ ನೀಡಲಾಗುತ್ತದೆ. ಶಿಬಿರದ ಅಂತ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಗುವುದು.

ಶಿಬಿರದ ನಿರ್ದೇಶಕರಾಗಿ ಅಶೋಕೆಯ ಸ್ವರಾತ್ಮ ಗುರುಕುಲದ ಪ್ರಾಚಾರ್ಯ ಹರೀಶ ಹೆಗಡೆ ಕನಕನಹಳ್ಳಿ ಕಾರ್ಯನಿರ್ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಹರಿಕಥೆ ವಿದ್ವಾಂಸ ನಾರಾಯಣದಾಸರು ಹೀಪನಳ್ಳಿ, ಸಂಗೀತ ವಿದ್ವಾಂಸ ಪಂ. ದತ್ತಾತ್ರೇಯ ಗಾಂವ್ಕರ ಚಿಟ್ಟೇಪಾಲ್ ಹಾಗೂ ಆರೋಹಿಯ ವಿದುಷಿ ದೀಪಾ ಶಶಾಂಕ ಭಾಗವಹಿಸಲಿದ್ದಾರೆ. ಶಿಬಿರಕ್ಕೆ ಹೆಸರು ನೊಂದಾಯಿಸಲು ಮೇ 20 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ 9448965464 ಅಥವಾ 9448037684 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಯೋಜಕ ಶಶಾಂಕ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-20-1194239867

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.