ಶಿರಸಿ: ‘ದೇವರನ್ನು ನಂಬಿದರೆ ನಿಂತ ನೆಲವೇ ದೇವಾಲಯವಾಗುತ್ತದೆ’ ಎಂದು ವಿದ್ವಾಂಸ ಉಮಾಕಾಂತ ಭಟ್ ಕೆರೆಕೈ ನುಡಿದರು.

ತಾಲ್ಲೂಕಿನ ಪಡಂಬೈಲಿನ ದೊಡ್ಡಜಡ್ಡಿಯ ಸುರೇಶ ಹೆಗಡೆ ಅವರ ತವರುಮನೆ ತೋಟದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಘನಾಶಿನಿ ನದಿ ಪೂಜೆ, ಬಾಗಿನ ಅರ್ಪಣೆ ಹಾಗೂ ಗಂಗಾರತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇವಾಲಯ ನಿರ್ಮಿಸಿ ಕ್ಷೇತ್ರ ಮಾಡಬೇಕಾಗಿಲ್ಲ, ತವರಿನ ಭಾವವೃಷ್ಟಿ ಸುರಿಸುವ ಇಂತಹ ಕ್ಷೇತ್ರಗಳು ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಪ್ರೇರಣೆ ನೀಡುತ್ತವೆ’ ಎಂದರು.

ಹಿರಿಯ ಸಾಹಿತಿ ಜಿ.ಎ.ಹೆಗಡೆ ಸೋಂದಾ, ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಶರ್ಮಾ ನಾಡಗುಳಿ ಶುಭ ಹಾರೈಸಿದರು. ಸುರೇಶ ಹೆಗಡೆ ಅವರು ತಾವು ಓದಿದ ಹೆಗಡೆಕಟ್ಟಾ ಪ್ರೌಢಶಾಲೆ ಹಾಗೂ ಪಂಚಲಿಂಗ ಪ್ರಾಥಮಿಕ ಶಾಲೆಗೆ ಧನಸಹಾಯದ ಚೆಕ್ ಹಸ್ತಾಂತರಿಸಿದರು.

ಬಡಾವಣೆಯ ಸಿಮೆಂಟ್ ರಸ್ತೆ ಉದ್ಘಾಟನೆ ಹಾಗೂ ಒಳಚರಂಡಿ ನೀರು ಶುದ್ಧೀಕರಣ ಘಟಕದ ಗುದ್ದಲಿಪೂಜೆ ನೆರವೇರಿಸಲಾಯಿತು. ಸಾಹಿತಿ ಜಯಪ್ರಕಾಶ ಹಬ್ಬು ನಿರ್ವಹಿಸಿದರು. ರೇಖಾ ಹೆಗಡೆ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-20-94609562

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.