ಶಿರಸಿ: ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳಿಗೆ ತರಬೇತಿ ಕೇಂದ್ರದಂತಿದ್ದ ತಾಲ್ಲೂಕಿನ ಮೇಲಿನ ಓಣಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸುಮಾರು 10 ಎಕರೆ ವಿಸ್ತೀರ್ಣದ ಅರವಿಂದ ಹೆಗಡೆ ಸ್ಮಾರಕ ಕ್ರೀಡಾಂಗಣವು ಸೂಕ್ತ ನಿರ್ವಹಣೆ ಮತ್ತು ಆಡಳಿತಾತ್ಮಕ ಗೊಂದಲಗಳಿಂದಾಗಿ ದುಸ್ಥಿತಿಗೆ ತಲುಪಿದೆ.

ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಅರವಿಂದ ಹೆಗಡೆ ಅವರ ಸ್ಮರಣಾರ್ಥ ದಶಕಗಳ ಹಿಂದೆ ಮೇಲಿನ ಓಣಿಕೇರಿ ಗ್ರಾಮದ ಅರಣ್ಯ ಸರ್ವೆ ನಂಬರ್ದಲ್ಲಿ ಮೈದಾನ ನಿರ್ಮಿಸಲಾಗಿತ್ತು. ಆರಂಭದಲ್ಲಿ ಸ್ಥಳೀಯ ಯುವಕ ಮಂಡಳಿ ಜವಾಬ್ದಾರಿ ವಹಿಸಿಕೊಂಡು ಹಲವು ವರ್ಷಗಳ ಕಾಲ ವ್ಯವಸ್ಥಿತವಾಗಿ ನಿರ್ವಹಿಸಿತ್ತು. ನಂತರದಲ್ಲಿ ಅರಣ್ಯ ಇಲಾಖೆ ಜಾಗವನ್ನು ತನ್ನ ವಶಕ್ಕೆ ಪಡೆಯಲು ಗಿಡ ನೆಡಲು ತೀವ್ರ ಪ್ರಯತ್ನ ನಡೆಸಿತ್ತು.

ಆದರೆ, ಸ್ಥಳೀಯ ಗ್ರಾಮೀಣ ಯುವಕರು ಮತ್ತು ಕ್ರೀಡಾಭಿಮಾನಿಗಳು ಒಗ್ಗಟ್ಟಾಗಿ ಇಲಾಖೆಯ ನಿರ್ಧಾರದ ವಿರುದ್ಧ ತೀವ್ರ ಒತ್ತಡ ಹೇರಿದ ಕಾರಣ ಆ ಪ್ರಯತ್ನ ಕೈಬಿಡಲಾಗಿತ್ತು. ನಂತರದಲ್ಲಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದರೂ ಕ್ರೀಡಾಂಗಣಕ್ಕೆ ಸಂಬಂಧಿಸಿದ ಸೂಕ್ತ ದಾಖಲಾತಿಗಳು ಎಲ್ಲಯೂ ಲಭ್ಯವಿಲ್ಲದಿರುವುದು ಗೊಂದಲ ಮುಂದುವರಿಯುತ್ತಿದೆ. ಇದೇ ಕಾರಣಕ್ಕೆ ನಿರ್ವಹಣೆ ಕೊರತೆಯಿಂದ ಇಡಿ ಮೈದಾನ ದುಸ್ಥಿತಿಗೆ ತಲುಪಿದೆ’ ಎಂದು ಸ್ಥಳೀಯರ ದೂರಾಗಿದೆ.

‘ಪ್ರಸ್ತುತ ಕ್ರೀಡಾಂಗಣದಲ್ಲಿ ಈ ಹಿಂದೆ ನಿರ್ಮಿಸಲಾಗಿದ್ದ ಚಿಕ್ಕದೊಂದು ಕಟ್ಟಡಕ್ಕೆ ಪಂಚಾಯಿತಿ ವತಿಯಿಂದ ದುರಸ್ತಿ ಕಾರ್ಯ ನಡೆಸಿ, ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆಯಾದರೂ, ಉಳಿದಂತೆ ಯಾವುದೇ ಕನಿಷ್ಠ ಮೂಲಸೌಕರ್ಯಗಳಿಲ್ಲ. ವಿಶಾಲವಾದ ಈ ಮೈದಾನದಲ್ಲಿ ಕ್ರೀಡಾಪಟುಗಳಿಗೆ ಅತ್ಯಗತ್ಯವಾಗಿ ಬೇಕಾಗಿರುವ ಶೌಚಾಲಯ ವ್ಯವಸ್ಥೆ ಇಲ್ಲ. ಕ್ರೀಡಾಂಗಣ ಸಮತಟ್ಟಾಗಿಲ್ಲದ ಕಾರಣ ಶಾಲಾ ಕ್ರೀಡಾಕೂಟಗಳ ಆಯೋಜನೆಗೂ ತೊಡಕಾಗುತ್ತಿದೆ’ ಎಂಬುದು ಸ್ಥಳೀಯರಾದ ಗಣಪತಿ ಹೆಗಡೆ ಮಾತಾಗಿದೆ.

‘ಸುತ್ತ ಯಾವುದೇ ರಕ್ಷಣಾ ಬೇಲಿಯಿಲ್ಲದೆ ಇರುವುದರಿಂದ ಜಾನುವಾರುಗಳ ಮುಕ್ತ ಹಾವಳಿ ಕೇಂದ್ರವಾಗಿದೆ. ರಾತ್ರಿ ವೇಳೆ ಮದ್ಯ ವ್ಯಸನಿಗಳ ತಾಣವಾಗುತ್ತದೆ. ಮಳೆಗಾಲ ದಲ್ಲಿ ಇಡಿ ಕ್ರೀಡಾಂಗಣ ಹುಲ್ಲು, ಗಿಡ ಗಳಿಂದ ತುಂಬುತ್ತದೆ. ವಾರ್ಷಿಕವಾಗಿ ಇಲ್ಲಿ ಸ್ಥಳೀಯ ಯುವಕರು ಕ್ರಿಕೆಟ್ ಟೂರ್ನ ಮೆಂಟ್ ಆಯೋಜಿಸುವ ಸಮಯದಲ್ಲಿ ಮಾತ್ರ ತಮ್ಮ ಸ್ವಂತ ಶ್ರಮದಿಂದ ತಾತ್ಕಾಲಿಕವಾಗಿ ಸ್ವಚ್ಛಗೊಳಿಸುತ್ತಾರೆ. ಇಲ್ಲವೇ ಯಾವುದಾದರೂ ಯಕ್ಷಗಾನ ಕಾರ್ಯಕ್ರಮಗಳಾದರೆ ಸಂಘಟಕರು ಆ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಆ ಪಂದ್ಯಾವಳಿ ಅಥವಾ ಕಾರ್ಯಕ್ರಮ ಮುಗಿದ ನಂತರ ವರ್ಷವಿಡೀ ಕ್ರೀಡಾಂಗಣವನ್ನು ಕೇಳುವವರೇ ಇಲ್ಲದಂತಾ ಗುತ್ತದೆ’ ಎನ್ನುತ್ತಾರೆ ಅವರು.

ಮೈದಾನದ ಮಾಲೀಕತ್ವದ ಕುರಿತು ಗೊಂದಲವಿದ್ದು, ಅದನ್ನು ಬಗೆಹರಿಸಬೇಕು. ಜತೆ ಕ್ರೀಡಾಂಗಣ ನಿರ್ವಹಣೆಗೆ ಪಂಚಾಯಿತಿಗೆ ವಿಶೇಷ ಅನುದಾನ ನೀಡುವ ಅಗತ್ಯವಿದೆ

-ಗಣೇಶ ಹೆಗಡೆ, ಮೇಲಿನ ಓಣಿಕೇರಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ

ಕಾಯಂ ಅನುದಾನ ಕಾಯ್ದಿರಿಸಿ

‘ಹತ್ತಾರು ಹಳ್ಳಿಗಳಿಗೆ ಕೇಂದ್ರ ಸ್ಥಾನದಂತಿರುವ ಈ ಕ್ರೀಡಾಂಗಣದ ದುಸ್ಥಿತಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಾಲಿಕತ್ವದ ಗೊಂದಲ ಬಗೆಹರಿಸಿ, ಸೂಕ್ತ ದಾಖಲಾತಿಗಳನ್ನು ಸಿದ್ಧಪಡಿಸಬೇಕು. ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ಹಾಗೂ ಕ್ರೀಡಾ ಇಲಾಖೆಯು ಜಂಟಿಯಾಗಿ ಕಾರ್ಯಪ್ರವೃತ್ತರಾಗಿ ಮೈದಾನದ ಸುತ್ತಲೂ ಸುಸಜ್ಜಿತ ರಕ್ಷಣಾ ಬೇಲಿ ನಿರ್ಮಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

‘ಮೈದಾನವನ್ನು ಸಮತಟ್ಟುಗೊಳಿಸುವ ಜತೆ ಕ್ರೀಡಾಪಟುಗಳಿಗೆ ಶೌಚಾಲಯ ಸೇರಿದಂತೆ ಸುಸಜ್ಜಿತ ಸೌಲಭ್ಯಗಳನ್ನು ಒದಗಿಸಬೇಕು. ಕೇವಲ ವರ್ಷಕ್ಕೊಮ್ಮೆ ಸ್ವಚ್ಛಗೊಳಿಸುವ ಬದಲಾಗಿ, ನನೆಗುದಿಗೆ ಬಿದ್ದಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಸ್ತಾವನೆಗೆ ಮರುಜೀವ ನೀಡಿ ಅಥವಾ ಪಂಚಾಯಿತಿ ವತಿಯಿಂದಲೇ ಕಾಯಂ ಆಗಿ ನಿರ್ವಹಣೆ ಮಾಡಲು ಅನುದಾನ ಕಾಯ್ದಿರಿಸಬೇಕು’ ಎಂಬುದು ಅವರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.