ಶಿರಸಿ: ಎಲೆಚುಕ್ಕಿ ಹಾಗೂ ಕೊಳೆರೋಗದಂತಹ ಸಂಕಷ್ಟಗಳ ನಡುವೆಯೇ ಅಡಿಕೆ ಮರಗಳಿಗೆ ಬರುವ ರೋಗ ನಿಯಂತ್ರಣಕ್ಕೆ ಅತ್ಯಗತ್ಯವಾಗಿರುವ ಮೈಲುತುತ್ತದ ಬೆಲೆ ಕೆಜಿಗೆ ₹300 ರಿಂದ ₹550ಕ್ಕೆ ಏರಿಕೆಯಾಗಿರುವುದು ಬೆಳೆಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆಯೇ ಅಡಿಕೆ ತೋಟಗಳಿಗೆ ಬಾಧಿಸುವ ಕೊಳೆ ರೋಗ ತಡೆಗಟ್ಟಲು ಬೋರ್ಡೋ ದ್ರಾವಣ ಸಿಂಪಡಿಸುವುದು ಅನಿವಾರ್ಯ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಮೈಲುತುತ್ತದ ಬೆಲೆಯಲ್ಲಿ ಶೇ.30ರಿಂದ 40ರಷ್ಟು ಏರಿಕೆ ಕಂಡುಬಂದಿದೆ. ‘ಜಾಗತಿಕ ಮಾರುಕಟ್ಟೆಯಲ್ಲಿ ತಾಮ್ರದ ಅದಿರಿನ ಬೆಲೆ ಹೆಚ್ಚಳ, ಸಾರಿಗೆ ವೆಚ್ಚದ ಏರಿಕೆ ಹಾಗೂ ಪೂರೈಕೆಯಲ್ಲಿನ ವ್ಯತ್ಯ ಯವೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣ’ ಎಂದು ವ್ಯಾಪಾರಿಗಳು ವಿಶ್ಲೇಷಿಸುತ್ತಿದ್ದಾರೆ.

‘ಅಡಿಕೆ ತೋಟಗಳ ಸಂರಕ್ಷಣೆಗೆ ಮಳೆಗಾಲದಲ್ಲಿ ಕನಿಷ್ಠ ಎರಡರಿಂದ ಮೂರು ಬಾರಿ ಕಡ್ಡಾಯವಾಗಿ ಮೈಲುತುತ್ತ ಸಿಂಪಡಿಸಬೇಕಾಗುತ್ತದೆ. ಪ್ರಸ್ತುತ ಎಲೆಚುಕ್ಕಿ ರೋಗಕ್ಕೂ ಮುನ್ನೆಚ್ಚರಿಕಾ ಕ್ರಮವಾಗಿ ಮದ್ದು ಸಿಂಪಡಣೆ ಆಗಲೇಬೇಕು. ಹೀಗಾಗಿ ಏಪ್ರಿಲ್, ಮೇ ತಿಂಗಳಲ್ಲಿಯೂ ಮೈಲು ತುತ್ತದ ಅಗತ್ಯತೆಯಿದೆ. ಆದರೆ ಈ ಬಾರಿ ಮೈಲುತುತ್ತದ ಜತೆಗೆ ಕೃಷಿ ಕಾರ್ಮಿಕರ ಕೂಲಿಯೂ ಗಗನಕ್ಕೇರಿದೆ. ಒಂದು ಕಡೆ ಅಡಿಕೆ ಧಾರಣೆ ಸ್ಥಿರವಾಗಿದ್ದರೂ, ಇನ್ನೊಂದೆಡೆ ಕೃಷಿ ಪರಿಕರಗಳ ಬೆಲೆ ಏರಿಕೆಯಿಂದಾಗಿ ಎಕರೆಗೆ ತಗಲುವ ನಿರ್ವಹಣಾ ವೆಚ್ಚ ದುಪ್ಪಟ್ಟಾಗುತ್ತಿದೆ. ಇದು ರೈತರ ನಿವ್ವಳ ಆದಾಯಕ್ಕೆ ಕತ್ತರಿ ಹಾಕುತ್ತಿದೆ’ ಎನ್ನುತ್ತಾರೆ ಅಡಿಕೆ ಬೆಳೆಗಾರ ಶಿವಪ್ರಸಾದ ಹೆಗಡೆ.

‘ಈಗಾಗಲೇ ಎಲೆಚುಕ್ಕಿ ಹಾಗೂ ಹಳದಿ ರೋಗದಿಂದಾಗಿ ಅಡಿಕೆ ಇಳುವರಿ ತೀವ್ರವಾಗಿ ಕುಸಿದಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಮೈಲುತುತ್ತದ ದರವೂ ವಿಪರೀತ ಏರಿಕೆಯಾಗಿದೆ. ಆದರೆ ಇದಕ್ಕೆ ಸರ್ಕಾರ ನೀಡುವ ಸಹಾಯಧನ ಹಳೆಯ ದರಕ್ಕೆ ಅನುಗುಣವಾಗಿಯೇ ಇದೆ. ಎಕರೆಗೆ ₹600 ಮಾತ್ರ ಸಹಾಯಧನ ನೀಡಲಾಗುತ್ತಿದೆ. ಪ್ರಸಕ್ತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಸರ್ಕಾರ ಮೈಲುತುತ್ತದ ಸಹಾಯಧನವನ್ನು ತಕ್ಷಣವೇ ಹೆಚ್ಚಿಸಬೇಕು ಮತ್ತು ರಿಯಾಯಿತಿ ದರದಲ್ಲಿ ಗುಣಮಟ್ಟದ ಔಷಧಿ ವಿತರಿಸಬೇಕು’ ಎಂಬುದು ಅಡಿಕೆ ಬೆಳೆಗಾರರ ಆಗ್ರಹವಾಗಿದೆ.

'ಬೆಲೆ ಏರಿಕೆಯ ಲಾಭ ಪಡೆಯಲು ಮಾರುಕಟ್ಟೆಯಲ್ಲಿ ನಕಲಿ ಅಥವಾ ಕಲಬೆರಕೆ ಮೈಲುತುತ್ತದ ಹಾವಳಿ ಹೆಚ್ಚಾಗುವ ಸಾಧ್ಯತೆ ಇದೆ. ಕಡಿಮೆ ಬೆಲೆಗೆ ಸಿಗುವ ಗುಣಮಟ್ಟವಿಲ್ಲದ ಪುಡಿಯನ್ನು ಬಳಸಿದರೆ ರೋಗ ನಿಯಂತ್ರಣಕ್ಕೆ ಬಾರದೆ ಇಡಿ ಬೆಳೆ ನಾಶವಾಗುವ ಅಪಾಯವಿದೆ' ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.