ಶಿರಸಿ: ‘ಜಿಲ್ಲೆಯ ಅಡಿಕೆ ಬೆಳೆಗಾರರು ಎಲೆಚುಕ್ಕಿ ರೋಗದ ತೀವ್ರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಸಹಕಾರ ಸಂಘಗಳಲ್ಲಿ ರೈತರು ಏಪ್ರಿಲ್ 15ಕ್ಕೆ ಮರುಪಾವತಿಸಬೇಕಾದ ಕೃಷಿ ಮಾಧ್ಯಮಿಕ ಸಾಲದ ಕಂತುಗಳನ್ನು ಒಂದು ವರ್ಷದ ಅವಧಿಗೆ ಮುಂದೂಡಬೇಕು’ ಎಂದು ಒತ್ತಾಯಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಇಲ್ಲಿನ ಟಿಆರ್ಸಿ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ನೇತೃತ್ವದ ನಿಯೋಗವು, ಈ ಕುರಿತು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲು ಸಂಸದರನ್ನು ಸೋಮವಾರ ಆಗ್ರಹಿಸಿತು.

‘ಜಿಲ್ಲೆಯ ಪ್ರಧಾನ ಬೆಳೆಯಾದ ಅಡಿಕೆಯು ಜನರ ಆರ್ಥಿಕ ಶಕ್ತಿಯ ಮೂಲವಾಗಿದೆ. ನಾಲ್ಕು ವರ್ಷಗಳಿಂದ ಕಾಡುತ್ತಿರುವ ಎಲೆಚುಕ್ಕಿ ರೋಗವು ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲ್ಲೂಕುಗಳಲ್ಲಿ ವಿಪರೀತ ಹರಡಿದೆ. ತೋಟಗಾರಿಕಾ ಇಲಾಖೆಯ ಮಾಹಿತಿಯಂತೆ ಈ ಮೂರು ತಾಲ್ಲೂಕುಗಳ 22,186 ಹೆಕ್ಟೇರ್ ಪೈಕಿ 11,732 ಹೆಕ್ಟೇರ್ ಪ್ರದೇಶ ಎಲೆಚುಕ್ಕಿ ರೋಗಕ್ಕೆ ತುತ್ತಾಗಿದೆ. ಇಳುವರಿಯು ಶೇ 20ರಿಂದ ಶೇ 45ರಷ್ಟು ಕುಸಿದಿದ್ದು, ಮರಗಳು ಗಣನೀಯವಾಗಿ ಸಾಯುತ್ತಿವೆ’ ಎಂದು ತಿಳಿಸಲಾಯಿತು.

‘ಸಹಕಾರ ಸಂಘಗಳಲ್ಲಿ, ಬ್ಯಾಂಕುಗಳಲ್ಲಿ ಮಾಡಿದ ಸಾಲ ಮರುಪಾವತಿಸಲು ಸಾಧ್ಯವಾಗದೇ ಶೂಲವಾಗಿ ಪರಿಣಮಿಸುತ್ತಿದೆ. ಕೃಷಿಕರ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಅವರ ಕುಟುಂಬ ನಿರ್ವಹಣೆಯೇ ಸಾಧ್ಯವಾಗದೇ ಸಹಕಾರ ಸಂಘದಿಂದ ಪಡೆದ ಸಾಲ ಮರುಪಾವತಿಸುವುದು ಅಸಾಧ್ಯವೆಂಬ ಅಭಿಪ್ರಾಯ ರೈತ ವಲಯದಿಂದ ವ್ಯಕ್ತವಾಗಿದೆ. ಸಕಾಲಿಕವಾಗಿ ಸಾಲ ಮರುಪಾವತಿ ಆಗದಿದ್ದಲ್ಲಿ ರೈತರು ಬಡ್ಡಿ ರಿಯಾಯಿತಿ ಯೋಜನೆಯಿಂದ ವಂಚಿತರಾಗುವುದಲ್ಲದೆ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿದ್ದಾರೆ’ ಎಂದು ಗಮನಕ್ಕೆ ತರಲಾಯಿತು.

ಇದರ ಜತೆ, ಬೆಟ್ಟ ಭೂಮಿಯನ್ನು ಬ ಖರಾಬ್ನಿಂದ ಮುಕ್ತಗೊಳಿಸುವಂತೆಯೂ ಮನವಿ ಮಾಡಲಾಯಿತು. ‘2012ರ ನಂತರ ಪಹಣಿ ಪತ್ರಿಕೆಯಲ್ಲಿ ಕೈಗೊಂಡ ಬದಲಾವಣೆಗಳಿಂದ ರೈತರಲ್ಲಿ ಭೂಮಿ ಕೈತಪ್ಪುವ ಭೀತಿ ಮೂಡಿದೆ. ಆದ್ದರಿಂದ ಆಕಾರಬಂದ್ ದುರಸ್ತಿಗೊಳಿಸಿ 2012ಕ್ಕಿಂತ ಪೂರ್ವದ ಸ್ಥಿತಿಯನ್ನೇ ಮುಂದುವರಿಸಬೇಕು’ ಎಂದು ವಿನಂತಿಸಲಾಯಿತು.

ಟಿಆರ್ಸಿ ನಿರ್ದೇಶಕರಾದ ಎಸ್.ಎನ್. ಹೆಗಡೆ ಹಾವಳಿಮನೆ, ಸಂತೋಷ ಗೌಡ, ವಿಘ್ನೇಶ್ವರ ಹೆಗಡೆ, ಮುಖ್ಯಕಾರ್ಯನಿರ್ವಾಹಕ ಕಿರಣ ಭಟ್ ಮಾವಿನಕೊಪ್ಪ ಹಾಗೂ ಸಿಬ್ಬಂದಿ ಗಜಾನನ ಹೆಗಡೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-20-327900879

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.