ಶಿರಸಿ: ‘ಬಿಜೆಪಿ ರೈತ ಮೋರ್ಚಾವು ಶಿರಸಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬನವಾಸಿ ಮಂಡಲದ ಅಧ್ಯಕ್ಷ ರಮೇಶ ನಾಯ್ಕ ಮತ್ತು ಇತರ ನಾಯಕರು ನೀಡಿದ ಹೇಳಿಕೆಗಳಲ್ಲಿ ಸತ್ಯಾಂಶವಿಲ್ಲ. ಈ ಪ್ರತಿಭಟನೆ ರೈತರ ಹಿತದೃಷ್ಟಿಯಿಂದ ಮಾಡಿದ್ದಲ್ಲ, ರಾಜಕೀಯ ಲಾಭಕ್ಕಾಗಿ ಮಾಡಲಾಗಿದೆ’ ಎಂದು ಬನವಾಸಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿದ್ದು ನರೇಗಲ್ ಆರೋಪಿಸಿದ್ದಾರೆ.

ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಕಡಗೋಡು ಗ್ರೀಡ್ ಕಾಮಗಾರಿ ವಿಳಂಬಕ್ಕೆ ಯಾರು ಕಾರಣ ಎಂಬುದು ರೈತರಿಗೆ ಚೆನ್ನಾಗಿ ತಿಳಿದಿದೆ. ಶಿರಸಿ ಪೂರ್ವ ಭಾಗದ ಜನರ ವಿಷಯದಲ್ಲಿ ಶಾಸಕರ ಆಡಳಿತ ವೈಫಲ್ಯವಿದೆ ಎಂದು ಹೇಳುವುದು ಹಾಸ್ಯಸ್ಪದ. ಮಳೆಗಾಲ ಆರಂಭವಾಗಿ ವೋಲ್ಟೇಜ್ ಸಮಸ್ಯೆ ಇಲ್ಲದ ಸಮಯದಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಕೇವಲ ಪ್ರಚಾರದ ಗೀಳು’ ಎಂದು ವ್ಯಂಗ್ಯವಾಡಿದ್ದಾರೆ.

‘ಬಿಜೆಪಿ ಮುಖಂಡರಿಗೆ ಕಾಳಜಿ ಇದ್ದರೆ, ವಿದ್ಯುತ್ ಕಂಬ ಹಾಕಲು ಜಾಗ ನೀಡದೆ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿ ಕಾಮಗಾರಿ ತಡೆದವರ ಮನವೊಲಿಸುವ ಕೆಲಸ ಮಾಡಲಿ. ಈ ಸಮಸ್ಯೆಗೆ ಶಾಸಕರು ತಮ್ಮ ಸ್ವಂತ ಹಣ ನೀಡಿಯಾದರೂ ಪರಿಹಾರ ಒದಗಿಸಲು ಸಿದ್ಧರಿರುವುದು ಜನರಿಗೆ ತಿಳಿದಿದೆ. ವರದಾ ನದಿಗೆ ಚೆಕ್ ಡ್ಯಾಂಗಳನ್ನು ನಿರ್ಮಿಸಿ ಶಾಸಕರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದನ್ನು ಮರೆತು ಅರ್ಥವಿಲ್ಲದ ಆರೋಪ ಮಾಡಿದರೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ’ ಎಂದು ಎಚ್ಚರಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-20-1341524929

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.