ಶಿರಸಿ: ತಾಲ್ಲೂಕಿನ ದಾಸನಕೊಪ್ಪದ ಕಾಳಂಗಿ ಸೇವಾ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರಗಳ ದೂರಿಗೆ ಸಂಬಂಧಿಸಿದಂತೆ, 11 ವರ್ಷಗಳ ವಹಿವಾಟಿನ ಲೆಕ್ಕಪತ್ರಗಳನ್ನು ತನಿಖೆಗೆ ಒಳಪಡಿಸಲು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಆದೇಶ ಹೊರಡಿಸಿದ್ದಾರೆ.

ಕಾಳಂಗಿ ಸೇವಾ ಸಹಕಾರ ಸಂಘದಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕೆಲವು ದಿನಗಳಿಂದ ಸ್ಥಳೀಯ ರೈತರು ಹಾಗೂ ಸಂಘದ ಸದಸ್ಯರು ತೀವ್ರ ಪ್ರತಿಭಟನೆ ನಡೆಸುತ್ತಿದ್ದರು. ಪ್ರಸ್ತುತ ಅಧಿಕಾರದಲ್ಲಿರುವ ಆಡಳಿತ ಮಂಡಳಿಯ ಅವಧಿಯಲ್ಲೇ ಈ ಲೋಪಗಳಾಗಿವೆ ಎಂದೂ ಆರೋಪಿಸಿದ ಪ್ರತಿಭಟನಕಾರರು, ತನಿಖೆಗೆ ಪಟ್ಟು ಹಿಡಿದಿದ್ದರು.

ಇದಕ್ಕೆ ಪ್ರತಿಯಾಗಿ ಹಾಲಿ ಆಡಳಿತ ಮಂಡಳಿಯು, 2015ರಿಂದ ಸಂಘದಲ್ಲಿ ನಡೆದಿರುವ ಎಲ್ಲಾ ವ್ಯವಹಾರಗಳ ಆಳ-ಅಗಲವನ್ನು ಕೆದಕಬೇಕು ಎಂದು ನಿಬಂಧಕರಿಗೆ ಮನವಿ ಸಲ್ಲಿಸಿತ್ತು. ಪ್ರತಿಭಟನಕಾರರು ಮತ್ತು ಆಡಳಿತ ಮಂಡಳಿ ನಡುವಿನ ಹಗ್ಗಜಗ್ಗಾಟದ ಬೆನ್ನಲ್ಲೇ, ಸಹಾಯಕ ನಿಬಂಧಕರು ಆಡಳಿತ ಮಂಡಳಿ ಕೋರಿಕೆಯ ಅವಧಿಯನ್ನೇ ತನಿಖೆಗೆ ಮಾನ್ಯ ಮಾಡಿದ್ದಾರೆ. ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 64ರ ಅಡಿಯಲ್ಲಿ ಈ ತನಿಖೆ ನಡೆಯಲಿದೆ.

ಇದರನ್ವಯ 2015ರ ಏಪ್ರಿಲ್ 1ರಿಂದ 2026ರ ಮಾರ್ಚ್ 30ರವರೆಗಿನ ಸುದೀರ್ಘ ಸಮಯದ ಆರ್ಥಿಕ ಮತ್ತು ಆಡಳಿತಾತ್ಮಕ ವ್ಯವಹಾರಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಲು ಹಸಿರು ನಿಶಾನೆ ನೀಡಲಾಗಿದೆ. ಒಟ್ಟು 12 ಪ್ರಮುಖ ಅಂಶಗಳನ್ನು ಗುರುತಿಸಿ, ಅದರ ಆಧಾರದ ಮೇಲೆ ಸೂಕ್ಷ್ಮವಾಗಿ ತನಿಖೆ ನಡೆಸಿ, ಮುಂದಿನ ಎರಡು ತಿಂಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ವಿಚಾರಣಾಧಿಕಾರಿಗಳಿಗೆ ಗಡುವು ನೀಡಲಾಗಿದೆ.

ಸಹಾಯಕ ನಿಬಂಧಕರ ಈ ಆದೇಶ ಸ್ವಾಗತಿಸಿರುವ ಸಂಘದ ಉಪಾಧ್ಯಕ್ಷ ನಟರಾಜ ಹೊಸೂರು, ‘ಸಂಘದ ನಿಷ್ಠಾವಂತ ರೈತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನಡೆಸಿದ ಪ್ರಾಮಾಣಿಕ ಪ್ರಯತ್ನಕ್ಕೆ ಸಿಕ್ಕ ಮೊದಲ ಜಯಬಿದು. ಸತ್ಯ ಶೀಘ್ರದಲ್ಲೇ ಹೊರಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-20-1707780845

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.