ಶಿರಸಿ: ‘ನುಡಿದಂತೆ ನಡೆಯುವುದರ ಮೂಲಕ ಧರ್ಮ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು’ ಎಂದು ಬೆಳಗಾವಿ ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಜಡ್ಡಿಗದ್ದೆಯ ಮಂಡಲ ವ್ಯಾಪ್ತಿಯಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಆಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ಹಿಂದೂ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು.

‘ನಾವು ಹಿಂದೂ ಎಂದು ಹೇಳಿಕೊಳ್ಳಲು ಹಿಂಜರಿಯಬಾರದು. ಅಭಿಮಾನದಿಂದ ಸಂಘಟಿತರಾಗಬೇಕು. ಯುಗಾದಿಯಂತಹ ಹಬ್ಬಗಳಲ್ಲಿ ಎಲ್ಲರ ಮನೆಗೆ ತೆರಳಿ ಪ್ರೀತಿ ಹಂಚಿದರೆ ಮಾತ್ರ ಮತಾಂತರ ತಡೆಯಲು ಸಾಧ್ಯ. ಹಿಂದೂಗಳನ್ನು ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಸದೃಢಗೊಳಿಸುವುದೇ ದೇಶ ಉಳಿಸುವ ಹಾದಿ’ ಎಂದು ತಿಳಿಸಿದರು.

ದಿಕ್ಸೂಚಿ ಭಾಷಣ ಮಾಡಿದ ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಚಾಲಕ ಸೂರ್ಯನಾರಾಯಣ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವೈಖರಿ ಹಾಗೂ ಮುಂದಿನ ಪೀಳಿಗೆಯಲ್ಲಿ ಹಿಂದುತ್ವ ಜಾಗೃತಿ ಅಗತ್ಯವನ್ನು ವಿವರಿಸಿದರು.

ಶಿವರಾಮ ಭಟ್ ಹೊಸ್ಮನೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಗಿರಿಜಾ ಹೆಗಡೆ, ರತ್ನಾವತಿ ನಾಯ್ಕ ಇದ್ದರು. ಸಮಾವೇಶಕ್ಕೂ ಮುನ್ನ ಜಡ್ಡಿಗದ್ದೆ ದೇವಸ್ಥಾನದಿಂದ ಸಭಾಂಗಣದವರೆಗೆ ಭಾರತ ಮಾತೆ ಚಿತ್ರದ ಶೋಭಾಯಾತ್ರೆ ನಡೆಯಿತು. ವೇದಘೋಷ, ಭಗವದ್ಗೀತೆ ಪಠಣ ಹಾಗೂ ದೇಶಭಕ್ತಿ ಗೀತೆಗಳು ಸಮಾವೇಶಕ್ಕೆ ಕಳೆ ನೀಡಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-20-673680895

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.