ಶಿರಸಿ: ಸ್ಥಳೀಯವಾಗಿ ಲಭ್ಯವಿರುವ ಹಲಸಿನ ಕಾಯಿಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿರುವ ಬೆನ್ನಲ್ಲೇ, ಇಲ್ಲಿನ ಕದಂಬ ಮಾರ್ಕೇಟಿಂಗ್ ಸಂಸ್ಥೆಯು ರೈತ ಕುಟುಂಬಗಳಿಗೆ ಆದಾಯದ ಹೊಸ ದಾರಿ ತೋರಿಸಲು ಮುಂದಾಗಿದೆ.

ಗುಣಮಟ್ಟ ಮತ್ತು ಏಕರೂಪತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಮಂಗಳವಾರ ಸಂಸ್ಥೆಯ ಸಭಾಭವನದಲ್ಲಿ ಹಲಸಿನ ಹಪ್ಪಳ ಹಾಗೂ ಚಿಪ್ಸ್ ತಯಾರಿಕಾ ಕಾರ್ಯಾಗಾರವು ನಡೆಯಿತು.

ಕಾರ್ಯಾಗಾರದಲ್ಲಿ ಕೇವಲ ಅನುಭವೀ ಗೃಹಿಣಿಯರಷ್ಟೇ ಅಲ್ಲದೆ, ಸ್ವಯಂ ಉದ್ಯೋಗದ ಕನಸು ಹೊತ್ತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಶಿರಸಿ ಸೇರಿದಂತೆ ಅಕ್ಕಪಕ್ಕದ ತಾಲ್ಲೂಕುಗಳು ಹಾಗೂ ತೀರ್ಥಹಳ್ಳಿಯಿಂದಲೂ ಆಗಮಿಸಿದ್ದ ಆಸಕ್ತರು, ಉದ್ಯಮಿ ಮಮತಾ ಶಮೆಮನೆ ಹಾಗೂ ಶ್ವೇತಾ ಹೆಗಡೆ ಅವರಿಂದ ಹಲಸಿನ ಮೌಲ್ಯವರ್ಧನೆಯ ಕೌಶಲಗಳನ್ನು ಆಸಕ್ತಿಯಿಂದ ಕಲಿತರು. ಉತ್ತಮ ತಳಿಯ ಹಲಸಿನ ಆಯ್ಕೆಯಿಂದ ಹಿಡಿದು, ಕತ್ತರಿಸುವ ವಿಧಾನ, ಕರಿಯುವ ತಾಪಮಾನ ಮತ್ತು ದೀರ್ಘಕಾಲ ರುಚಿ ಕೆಡದಂತೆ ಸಂರಕ್ಷಿಸುವ ತಂತ್ರಜ್ಞಾನದವರೆಗೆ ಪ್ರಾಯೋಗಿಕವಾಗಿ ಮನವರಿಕೆ ಮಾಡಿಕೊಡಲಾಯಿತು.

ಕದಂಬ ಸಂಸ್ಥೆಯ ವಿಶ್ವೇಶ್ವರ ಭಟ್ ಕೋಟೆಮನೆ ಮಾತನಾಡಿ, ‘ರೈತರು ಕೇವಲ ಬೆಳೆಗಾರರಾಗಷ್ಟೇ ಉಳಿಯದೆ, ಮೌಲ್ಯವರ್ಧಿತ ಉತ್ಪನ್ನಗಳ ತಯಾರಕರಾಗಬೇಕು. ಕದಂಬ ಸಂಸ್ಥೆಯು ಕೇವಲ ತರಬೇತಿ ನೀಡುವುದಕ್ಕೆ ಸೀಮಿತವಾಗದೆ, ಸಿದ್ಧಪಡಿಸಿದ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನೂ ಕಲ್ಪಿಸುತ್ತದೆ’ ಎಂದರು.

ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು, ಗ್ರಾಮೀಣ ಸೊಗಡಿನ ತಿಂಡಿಗಳಿಗೆ ಆಧುನಿಕ ಮಾರುಕಟ್ಟೆಯ ಸ್ಪರ್ಶ ನೀಡುತ್ತಿರುವ ಪ್ರಯತ್ನವನ್ನು ಶ್ಲಾಘಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-20-952931033

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.