ಶಿರಸಿ: ‘ಕಾಳಂಗಿ ಸೇವಾ ಸಹಕಾರ ಸಂಘದಲ್ಲಿ ತಾವೇ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಿ, ತಮ್ಮ ತಪ್ಪು ಮುಚ್ಚಿಕೊಳ್ಳಲು ಮುಖ್ಯ ಕಾರ್ಯನಿರ್ವಾಹಕರ ಮೇಲೆ ಆರೋಪ ಮಾಡುತ್ತಿರುವ ಹಾಲಿ ಆಡಳಿತ ಮಂಡಳಿಯ ನಡೆ ಹಾಸ್ಯಾಸ್ಪದ’ ಎಂದು ಬದನಗೋಡ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಣೇಶ ಕ್ಷತ್ರೀಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘವು 2020 ರಿಂದ 2024ರವರೆಗೆ ಲಾಭದಲ್ಲಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಹೊಸ ಆಡಳಿತ ಮಂಡಳಿಯು ಕೇವಲ ಒಂದೇ ವರ್ಷದಲ್ಲಿ ₹1.65 ಕೋಟಿ ನಷ್ಟ ತೋರಿಸಿದೆ. ಚುನಾವಣೆ ಪೂರ್ವದಲ್ಲಿ ರೈತರಿಗೆ ನೀಡಿದ ಯಾವುದೇ ಆಶ್ವಾಸನೆ ಈಡೇರಿಸದೇ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ. ಈ ಭ್ರಷ್ಟಾಚಾರ ಸಂಪೂರ್ಣ ಬಯಲಿಗೆ ಬಂದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸಿದರು.

ರೈತ ಹಿತರಕ್ಷಣಾ ಸಮಿತಿಯ ಬಸವರಾಜ ನಂದಿಕೇಶ್ವರಮಠ ಮಾತನಾಡಿ, ‘ಸದಸ್ಯರಲ್ಲದವರ ಹೆಸರಿನಲ್ಲಿ ಹಾಗೂ ರೈತರಿಗೆ ತಿಳಿಯದೇ ಅವರ ಹೆಸರಲ್ಲೇ ಬೇನಾಮಿ ಸಾಲ ಪಡೆದು ಹಣ ಗುಳುಂ ಮಾಡಲಾಗಿದೆ. ಸಹಕಾರಿ ಕಲಂ 64ರ ಅಡಿ ತನಿಖೆಗೆ ಆದೇಶವಾಗಿದ್ದು, ದಾಖಲೆಗಳನ್ನು ಬದಲಾಯಿಸುವ ಮುನ್ನ ಸಹಾಯಕ ನಿಬಂಧಕರು ಹಾಲಿ ಆಡಳಿತ ಮಂಡಳಿಯನ್ನು ತಕ್ಷಣ ಅಮಾನತಿನಲ್ಲಿಡಬೇಕು. ನೈತಿಕತೆ ಇದ್ದರೆ ನಿರ್ದೇಶಕರು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ’ ಎಂದರು.

ಮಾಜಿ ನಿರ್ದೇಶಕ ಅಕ್ಷಯ ಜಕಲಣ್ಣನವರ ಮಾತನಾಡಿ, ‘ರೈತರ ಹೆಸರಿನಲ್ಲಿ ಸಾಲ ಪಡೆದು ಆ ಹಣವನ್ನು ಮೀಟರ್ ಬಡ್ಡಿ ದಂದೆಗೆ ಬಳಸಲಾಗಿದೆ’ ಎಂದು ಆರೋಪಿಸಿದರು.

ಸಮಿತಿಯ ಪ್ರಮುಖರಾದ ಹಾಲಪ್ಪ ಜಕಲಣ್ಣನವರ, ಅಬ್ದುಲ್ ಸತ್ತಾರ ಸಾಬ್, ಉಮೇಶ ಗೌಡ ಕಾಳಂಗಿ, ಪ್ರಶಾಂತ ಗೌಡ ಸಂತೊಳ್ಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-20-1727459435

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.