ಶಿರಸಿ: ತಾಲ್ಲೂಕಿನ ಕಾಳಂಗಿ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆಂದು ಆರೋಪಿಸಿ ಶುಕ್ರವಾರ ನೂರಾರು ರೈತರು ಸಂಘದ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಈ ವೇಳೆ ಸಹಕಾರಿ ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ರೈತರು, ಮೋಸ ಹೋದ ರೈತರ ಪ್ರಾಣಕ್ಕೆ ಅಪಾಯ ಉಂಟಾದರೆ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸ್ಥಳೀಯ ಪ್ರಮುಖ ಬಸವರಾಜ ನಂದಿಕೇಶ್ವರಮಠ ಮಾತನಾಡಿ, ‘ಕಾಳಂಗಿ ಸೊಸೈಟಿಯಲ್ಲಿ ಮೇಲ್ನೋಟಕ್ಕೆ ₹8 ಕೋಟಿಯಿಂದ ₹10 ಕೋಟಿಗೂ ಅಧಿಕ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ. ಹಾಲಿ ಆಡಳಿತ ಮಂಡಳಿಯು ಮುಖ್ಯ ಕಾರ್ಯನಿರ್ವಾಹಕನನ್ನು ಬಳಸಿಕೊಂಡು, ಸದಸ್ಯರೇ ಅಲ್ಲದವರ ಹೆಸರಿನಲ್ಲಿಯೂ ನಕಲಿ ಸಾಲ ಎತ್ತಿದ್ದಾರೆ. ಠೇವಣಿದಾರರು ಹಣ ವಾಪಸ್ ಕೇಳಿದರೆ ಯಾರದ್ದೋ ಖಾತೆಗೆ ಹಣ ವರ್ಗಾವಣೆ ಮಾಡಿ ವಂಚಿಸಲಾಗಿದೆ. ತಪ್ಪಿತಸ್ಥರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಅವರನ್ನು ಜೈಲಿಗಟ್ಟಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದ ಸಹಾಯಕ ಉಪ ನಿಬಂಧಕಿ ತೇಜಸ್ವಿನಿ, ‘ಪ್ರಾಥಮಿಕ ವರದಿ ಬಂದ ತಕ್ಷಣ ಕಾಯ್ದೆ 64ರ ಅಡಿಯಲ್ಲಿ ಸಮಗ್ರ ತನಿಖೆ ನಡೆಸಲಾಗುವುದು. ರೈತರ ಠೇವಣಿ ಹಣ ಬದಲಾವಣೆಯಾಗಿರುವ ಕುರಿತು ಪ್ರತ್ಯೇಕ ವಿಚಾರಣೆ ನಡೆಸಿ ನ್ಯಾಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಸಹಾಯಕ ಸಹಕಾರಿ ನಿಬಂಧಕ ಅಜಿತ ಶಿರಹಟ್ಟಿ ಮಾತನಾಡಿ, ‘ಆಡಳಿತ ಮಂಡಳಿಯು ಈಗಾಗಲೇ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದು, ಅವರ ಆಸ್ತಿ ಮೇಲೆ ಬೋಜಾ ಜಾರಿಗೊಳಿಸಿದೆ. ಕಾಯ್ದೆ 64ರ ಅಡಿ ತನಿಖೆಗೆ ಆಡಳಿತ ಮಂಡಳಿ ಒಪ್ಪಿಗೆ ನೀಡಿದ್ದು, ಅಪರಾಧ ಸಾಬೀತಾದರೆ ಮೊಕದ್ದಮೆ ಹೂಡಲಾಗುವುದು ಎಂದರು. ಆದರೆ ಈ ಉತ್ತರದಿಂದ ತೃಪ್ತರಾಗದ ಪ್ರತಿಭಟನಾಕಾರರು, ‘ಮೊದಲು ಆಡಳಿತ ಮಂಡಳಿಯನ್ನು ಅಮಾನತು ಮಾಡಿ, ಅವ್ಯವಹಾರದ ವರದಿಯನ್ನು ಇಲ್ಲೇ ನೀಡಬೇಕು’ ಎಂದು ಪಟ್ಟು ಹಿಡಿದು ಧರಣಿ ಮುಂದುವರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-20-1814884495

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.