ಶಿರಸಿ: ‘ಕಾಳಂಗಿ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ನಡೆದಿರುವ ಆರ್ಥಿಕ ಅವ್ಯವಹಾರದ ಕುರಿತು ಸಮಗ್ರ ತನಿಖೆ ಕೈಗೊಂಡು, ತಪ್ಪಿತಸ್ಥರು ಎಷ್ಟೇ ಪ್ರಭಾವಿಯಾಗಿದ್ದರೂ ಕಠಿಣ ಶಿಕ್ಷೆ ವಿಧಿಸಲಾಗುವುದು’ ಎಂದು ಶಾಸಕ ಶಿವರಾಮ ಹೆಬ್ಬಾರ ಭರವಸೆ ನೀಡಿದರು.

ಭ್ರಷ್ಟಾಚಾರ ಖಂಡಿಸಿ ನೂರಾರು ರೈತರು ಸಂಘದ ಕಚೇರಿ ಎದುರು ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ‘ಮೇ 26ರ ನಂತರ ಬೆಳೆ ಸಾಲ ವಿತರಣೆಯಾಗಲಿದ್ದು, ಕೆಡಿಸಿಸಿ ಬ್ಯಾಂಕ್ ವತಿಯಿಂದ ಲೆಕ್ಕಪರಿಶೋಧಕರ ವಿಶೇಷ ತಂಡ ರಚಿಸಿ 15 ದಿನಗಳೊಳಗೆ ಹಾಲಿ ಹಾಗೂ ಹಿಂದಿನ ಆಡಳಿತ ಮಂಡಳಿಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಗುವುದು. ಆಡಳಿತ ಮಂಡಳಿ ವಜಾಗೊಳಿಸಲು ಅಗತ್ಯ ಭೂಮಿಕೆ ಸಿದ್ಧಪಡಿಸಲಾಗುತ್ತಿದ್ದು, ತಪ್ಪು ಮಾಡಿದವರನ್ನು ಕೋರ್ಟ್ ಕೂಡ ಕ್ಷಮಿಸುವುದಿಲ್ಲ’ ಎಂದು ಎಚ್ಚರಿಸಿದರು. ಶಾಸಕರ ಭರವಸೆಯ ಬಳಿಕ ರೈತರು ಧರಣಿ ಮೊಟಕುಗೊಳಿಸಿದರು.

ಸಂಘದಲ್ಲಿ ₹8 ಕೋಟಿಯಿಂದ ₹10 ಕೋಟಿ ಮೇಲ್ಪಟ್ಟು ಅವ್ಯವಹಾರ ನಡೆದಿದ್ದು, ಆಡಳಿತ ಮಂಡಳಿಯು ಮುಖ್ಯ ಕಾರ್ಯನಿರ್ವಾಹಕನನ್ನು ಬಳಸಿಕೊಂಡು ಸದಸ್ಯರಲ್ಲದವರ ಹೆಸರಲ್ಲೂ ಸಾಲ ಪಡೆದಿದೆ. ಠೇವಣಿದಾರರ ಹಣ ಬೇರೆಯವರ ಖಾತೆಗೆ ವರ್ಗಾಯಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಕಳೆದ 20 ದಿನಗಳ ಹಿಂದೆ ಸಹಕಾರಿ ಸಹಾಯಕ ನಿಬಂಧಕರು 7 ದಿನದೊಳಗೆ ವರದಿ ನೀಡುವುದಾಗಿ ಭರವಸೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಭ್ರಷ್ಟಾಚಾರ ನಡೆಸಿ ಸಂಘದ ಬಾಗಿಲು ಮುಚ್ಚಲು ಹೊರಟಿರುವ ಹಾಲಿ ಆಡಳಿತ ಮಂಡಳಿಯ 12 ಸದಸ್ಯರನ್ನು ಅಮಾನತಿನಲ್ಲಿಟ್ಟು ತನಿಖೆ ನಡೆಸಬೇಕು ಎಂದು ರೈತರು ಒತ್ತಾಯಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಶಾಸಕ ಹೆಬ್ಬಾರ, ‘ಮೀಟರ್ ಬಡ್ಡಿ ಸಮಸ್ಯೆಯಿಂದ ರಕ್ಷಿಸಲು ಕಾಳಂಗಿ ಸೊಸೈಟಿಗೆ ₹45 ಕೋಟಿ ಸಾಲ ನೀಡಲಾಗಿದೆ. ಪ್ರಸ್ತುತ ರೈತರಿಗೆ ತೊಂದರೆಯಾಗದಂತೆ ಪ್ರಭಾರಿ ಕಾರ್ಯನಿರ್ವಾಹಕರನ್ನು ನೇಮಿಸಿ ಸಾಲ ವಿತರಿಸಲಾಗಿದೆ. ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆ ಓಡಿ ಹೋಗಿ ಸಾಲ ಪಡೆದ 65 ಜನರ ವಿವರಗಳು ನಮ್ಮ ಬಳಿ ಇವೆ. ಪ್ರತಿಯೊಂದು ಆಯಾಮದಲ್ಲೂ ತನಿಖೆ ನಡೆಸಿ ರೈತರ ಹಿತ ಕಾಯಲಾಗುವುದು’ ಎಂದರು.

ಪ್ರಮುಖರಾದ ಬಸವರಾಜ ನಂದಿಕೇಶ್ವರಮಠ, ಅಕ್ಷಯ ಜಕಲಣ್ಣನವರ್, ಹಾಲಪ್ಪ ಜಕಲಣ್ಣನವರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-20-115032549

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.