ಶಿರಸಿ: ಇಲ್ಲಿನ ಮಾರಿಕಾಂಬಾ ದೇವಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಪ್ತಪದಿ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಏಳು ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ದೇವಾಲಯದ ಸಭಾಭವನದಲ್ಲಿ ನಡೆದ ಸರಳ ಹಾಗೂ ಅರ್ಥಪೂರ್ಣ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಜೋಡಿಗಳು ವೈವಾಹಿಕ ಬದುಕಿಗೆ ನಾಂದಿ ಹಾಡಿದರು.

ಶಿರ್ಸಿಮಕ್ಕಿಯ ಆಶ್ರಯ ಕಾಲೊನಿಯ ದೀಪಕ ಶೆಟ್ಟಿ ಅವರು ರಾಮನಬೈಲ್ನ ಪೂಜಾ ನಾಯ್ಕ ಜತೆ, ಗಣೇಶನಗರದ ವೀರಣ್ಣ ಬೋವಿವಡ್ಡರ ಅವರು ಹಾನಗಲ್ ತಾಲ್ಲೂಕಿನ ಸವಣೂರಿನ ರೇಣುಕಾ ಗುರುಣ್ಣನವರ್ ಅವರೊಂದಿಗೆ, ಭೈರುಂಬೆ ಸಮೀಪದ ಕಾರೆಕೊಪ್ಪದ ಸಂತೋಷ ಮುಕ್ರಿ ಅವರು ಕಾರೆಕೊಪ್ಪದ ಮಮತಾ ಮುಕ್ರಿ ಜತೆ, ಸಿದ್ದಾಪುರ ವಂದಾನೆಯ ಭರತ ಹಸ್ಲರ ಅವರು ಆಲಳ್ಳಿ ತಾರಗೋಡ ಗ್ರಾಮದ ನಾಗರತ್ನಾ ಹಸ್ಲರ ಅವರೊಂದಿಗೆ, ಮುಂಡಿಗೆತಗ್ಗಿನ ಲೋಕೇಶ್ ಹಸ್ಲರ ಅವರು ಕುಡೇಗೋಡು ಲಕ್ಷ್ಮೀ ಹಸ್ಲರ ಇವರೊಂದಿಗೆ, ಹುಲೇಕಲ್ ಲೋಹಿತಾಶ್ವ ನೇತ್ರೆಕರ ಅವರು ಹುಬ್ಬಳ್ಳಿ ಕುರ್ಡಿಕೇರಿಯ ಪವಿತ್ರಾ ಗುಡಿ ಜತೆ ಹಾಗೂ ಹಾಸಣಗಿಯ ಮಂಜುನಾಥ ಶೆಟ್ಟಿ ಅವರು ಗೋರ್ಸಗದ್ದೆಯ ಶಾರದಾ ಮೊಗೇರ ಅವರೊಂದಿಗೆ ಪರಸ್ಪರ ಹಾರ ಬದಲಾಯಿಸಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-20-1206077167

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.