ಶಿರಸಿ: ‘ಸಹಕಾರಿ ಸಂಘಗಳ ಮುಖಾಂತರ ರೈತರು ವ್ಯವಹಾರ ನಡೆಸಿದಾಗ ಮಾತ್ರ ಪತ್ತು ಮತ್ತು ಮಾರಾಟ ಜೋಡಣೆ ಬಲಗೊಳ್ಳಲು ಸಾಧ್ಯ’ ಎಂದು ಶಾಸಕ ಶಿವರಾಮ ಹೆಬ್ಬಾರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ದಾಸನಕೊಪ್ಪದಲ್ಲಿ ಶನಿವಾರ ಶಿರಸಿ ಟಿ.ಎಂ.ಎಸ್.ಶಾಖೆಯ ನೂತನ ಗೋದಾಮ ಉದ್ಘಾಟಿಸಿ ಅವರು ಮಾತನಾಡಿದರು.

‘2017ರಲ್ಲಿ ದಾಸನಕೊಪ್ಪದಲ್ಲಿ ಟಿ.ಎಂ.ಎಸ್ ಶಾಖೆ ಪ್ರಾರಂಭವಾದಾಗ ಎದುರಾಗಿದ್ದ ವಿದ್ಯುತ್ ಸಮಸ್ಯೆ ನೀಗಿಸಲು ಸರ್ಕಾರದಿಂದ 33 ಕೆ.ವಿ. ಗ್ರಿಡ್ ಮಂಜೂರು ಮಾಡಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಪ್ರತಿಯಾಗಿ ಟಿ.ಎಂ.ಎಸ್. ಸಂಸ್ಥೆಯು ಬನವಾಸಿ ಹಾಗೂ ದಾಸನಕೊಪ್ಪ ಭಾಗದ ರೈತರಿಗೆ ರಿಯಾಯಿತಿ ದರದಲ್ಲಿ ಗೊಬ್ಬರ, ಕ್ರಿಮಿನಾಶಕ ಹಾಗೂ ಕೃಷಿ ಪರಿಕರಗಳನ್ನು ಪೂರೈಸುವ ಮೂಲಕ ಬೆನ್ನೆಲುಬಾಗಿ ನಿಂತಿದೆ’ ಎಂದರು.

ಜಾಗತಿಕ ಯುದ್ಧದ ಪರಿಣಾಮ ಪ್ರಸ್ತುತ ಡಿ.ಎ.ಪಿ. ಮತ್ತು ಯೂರಿಯಾ ಗೊಬ್ಬರಗಳ ಕೊರತೆಯಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ರೈತರಿಗೆ ಅಗತ್ಯವಿರುವ ಇತರ ಗೊಬ್ಬರಗಳನ್ನು ಸಮರ್ಪಕವಾಗಿ ಪೂರೈಸಲು ಸೂಕ್ತ ನಿರ್ದೇಶನ ನೀಡುವುದಾಗಿ ಶಾಸಕರು ಇದೇ ವೇಳೆ ಭರವಸೆ ನೀಡಿದರು.

ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಸಹಕಾರಿ ಸಂಘಗಳ ಮೂಲಕವೇ ಮಾರಾಟ ಮಾಡಿದರೆ, ಸಂಕಷ್ಟದ ಸಮಯದಲ್ಲಿ ಸಂಘಗಳು ರೈತರ ನೆರವಿಗೆ ಬರಲು ಸಾಧ್ಯವಾಗುತ್ತದೆ ಎಂ ದರು.

ಅಧ್ಯಕ್ಷತೆಯನ್ನು ಟಿ.ಎಂ.ಎಸ್. ಶಿರಸಿ ಅಧ್ಯಕ್ಷ ಜಿ.ಟಿ.ಹೆಗಡೆ ವಹಿಸಿದ್ದರು. ಉಪಾಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ನಿಕಟಪೂರ್ವ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ, ಸದಸ್ಯರಾದ ಎಂ.ಪಿ.ಹೆಗಡೆ, ಎನ್.ಡಿ.ಹೆಗಡೆ , ರವಿ ಹೆಗಡೆ, ಸಿ.ಎಸ್. ಶಾಸ್ತ್ರಿ, ಎಂ.ಎನ್.ಭಟ್, ರಾಜಶೇಖರ ಗೌಡ, ರತ್ನಾಕರ ನಾಯ್ಕ, ಇಂದಿರಾ ಹೆಗಡೆ ಇತರರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಯ ಹೆಗಡೆ ಮಂಡೇಮನೆ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-20-605270230

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.