ಶಿರಸಿ: 'ಹಾಡು, ಭಜನೆ ಮತ್ತು ಪೂಜೆಯಂತಹ ಭಕ್ತಿ ಪ್ರಧಾನ ಮಾರ್ಗಗಳಿಗೆ ಅಪರಿಮಿತ ಶಕ್ತಿಯಿದೆ. ಒಗ್ಗಟ್ಟಿನ ಹೋರಾಟದಿಂದ ನಮಗೆ ಭಾಗಶಃ ಫಲ ಸಿಕ್ಕಿದ್ದು, ನಮ್ಮ ಕಣಿವೆಗಳ ರಕ್ಷಣೆಯ ಕೂಗು ನಾಡಿನಾದ್ಯಂತ ಮೊಳಗುತ್ತಿರಬೇಕು' ಎಂದು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕರೆ ನೀಡಿದರು.

ಬೇಡ್ತಿ-ಅಘನಾಶಿನಿ ಮತ್ತು ಶರಾವತಿ ನದಿ ಕಣಿವೆಗಳ ಉಳಿವಿನ ಹೋರಾಟದ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಹಿನ್ನೆಲೆ ನಗರದ ಯೋಗ ಮಂದಿರದಲ್ಲಿ ಭಗವತ್ಪಾದ ಪ್ರಕಾಶನ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪರಿಸರ ಗೀತೆಗಳ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಪ್ರಾಸ್ತಾವಿಕ ಮಾತನಾಡಿ, ‘ವಿಶ್ವ ಜಲದಿನದಂದು ನದಿ ಕಣಿವೆ ಕುರಿತ ಹಾಡುಗಳು ಲೋಕಾರ್ಪಣೆಗೊಂಡಿವೆ. ಈ ಹಿಂದೆ ಶಿರಸಿಯ ಮಾತೃಮಂಡಳಿಯವರು ಬೀದಿಗಳಲ್ಲಿ ಪರಿಸರ ಗೀತೆ ಹಾಡಿ ನಡೆಸಿದ ಜನಜಾಗೃತಿ ಮಾದರಿಯಾಗಿದೆ. ಸ್ಪರ್ಧೆಗೆ ಬಂದಿದ್ದ 70ಕ್ಕೂ ಹೆಚ್ಚು ಗೀತೆಗಳನ್ನು ಧ್ವನಿಮುದ್ರಿಸಿ ಪ್ರಸಾರ ಮಾಡುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಭಗವತ್ಪಾದ ಪ್ರಕಾಶನದ ನಿರ್ದೇಶಕ ಕೆ.ವಿ.ಭಟ್ ವಿಜೇತರನ್ನು ಘೋಷಿಸಿದರು. ಯಶಸ್ವಿನಿ ಅಜ್ಜಿಬಳ, ರಮೇಶ ಬಿಳೇಕಲ್, ಮಂಜುಳಾ ಉಡುಪಿ, ಗೀತಾ ಬೊಂಗಳೂರು, ಶರಾವತಿ ಶಿರ್ನಾಲಾ, ರವಿಶಂಕರ ದೊಡ್ನಳ್ಳಿ, ಗಣಪತಿ ವಜ್ರಳ್ಳಿ ಹಾಗೂ ಗುರುಪ್ರಸಾದ ಮಾಳಕೊಪ್ಪಾ ಅವರು ಬಹುಮಾನ ಪಡೆದರು.

ನಿರ್ಣಾಯಕಿ ಭಾಗರಥಿ ಹೆಗಡೆ, ನಿರ್ವಾಹಕಿ ಭಾರತಿ ಹೆಗಡೆ ಮತ್ತು ಆರಾಧನಾ ಭಜನಾ ತಂಡದವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-20-322836892

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.