ಶಿರಸಿ: ತಾಲ್ಲೂಕಿನಲ್ಲಿ ಬೇಸಿಗೆಯ ಬಿಸಿಲು ಏರುತ್ತಿದ್ದಂತೆ ತಾಲ್ಲೂಕಿನ ಪ್ರಮುಖ ಜಲಮೂಲವಾದ ಶಾಲ್ಮಲಾ ನದಿ ಬತ್ತಿರುವುದು ಹಾಗೂ ನಗರದ ಜೀವನಾಡಿಗಳಾದ ಹೊಳೆಗಳಲ್ಲಿ ನೀರಿನ ಹರಿವು ಕ್ಷೀಣಿಸಿರುವುದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಏಕಕಾಲಕ್ಕೆ ಜಲಸಂಕಷ್ಟದ ಆತಂಕ ಮೂಡಿಸಿದೆ.

ತಾಲ್ಲೂಕಿನ ಕೃಷಿ ಸಂಸ್ಕೃತಿಯ ಬೆನ್ನೆಲುಬಾದ ಶಾಲ್ಮಲಾ ನದಿಯ ಹರಿವು ಏಪ್ರಿಲ್ ಅಂತ್ಯಕ್ಕೆ ಬಹುತೇಕ ಸ್ತಬ್ಧಗೊಂಡಿರುವುದು ಕೃಷಿಕರಿಗೆ ಹೊಡೆತ ನೀಡಿದೆ. ನದಿಯನ್ನೇ ನಂಬಿಕೊಂಡಿರುವ ಸಾವಿರಾರು ಪಂಪ್ಸೆಟ್ಗಳಿಗೆ ಈಗ ನೀರಿಗೆ ಪರದಾಡುವಂತಾಗಿದೆ.

‘ಅಡಿಕೆ ಮತ್ತು ಮಸಾಲೆ ಬೆಳೆಗಳಿಗೆ ಕನಿಷ್ಠ ವಾರದಲ್ಲಿ ಮೂರು ದಿನ ನೀರುಣಿಸುವುದು ಅನಿವಾರ್ಯವಾಗಿದ್ದು, ಈಗ ಹತ್ತು ದಿನಕ್ಕೊಮ್ಮೆ ನೀರು ಹರಿಸುವುದೂ ದುಸ್ತರವಾಗಿದೆ. ನದಿಯ ಕೆಲವು ಆಳವಾದ ಗುಂಡಿಗಳಲ್ಲಿ ಉಳಿದಿರುವ ಅಲ್ಪ ಪ್ರಮಾಣದ ನೀರೇ ಈಗ ಕೃಷಿಕರ ಅನುಕೂಲಕ್ಕೆ ಲಭ್ಯವಾಗುತ್ತಿದೆ. ಉಳಿದಂತೆ ನೀರಿಲ್ಲದ ಕಡೆ ತೋಟಗಳಿಗೆ ಹಾಯಸಲಾಗದೆ ತೇವಾಂಶ ಕುಸಿದು ಬೆಳೆಗಳು ಒಣಗುವ ಭೀತಿ ಎದುರಾಗಿದೆ’ ಎನ್ನುತ್ತಾರೆ ಹುಲೇಕಲ್ ಭಾಗದ ಕೃಷಿಕ ರಮೇಶ ನಾಯ್ಕ.

‘ಶಾಲ್ಮಲಾ ನದಿ ಅವಲಂಬಿಸಿ 2 ಸಾವಿರ ಎಕರೆಗೂ ಹೆಚ್ಚು ಅಡಿಕೆ ತೋಟವಿದೆ. ಶೇ.50ರಷ್ಟು ತೋಟಗಳಿಗೆ ಬೇಸಿಗೆಯಲ್ಲಿ ನೀರುಣಿಸುವುದು ವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ನದಿ ನೀರು ಕ್ಷೀಣಿಸಿರುವುದು ಅಡಿಕೆ ಬೆಳೆಗಾರರಿಗೆ ಆತಂಕ ತಂದಿದೆ’ ಎನ್ನುತ್ತಾರೆ ಅವರು.

ಇತ್ತ ನಗರದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ನಗರಕ್ಕೆ ಕುಡಿಯುವ ನೀರು ಪೂರೈಸುವ ಕೇಂಗ್ರೆ ಹಾಗೂ ಮಾರಿಗದ್ದೆ ಹೊಳೆಗಳಲ್ಲಿ ನೀರಿನ ಹರಿವು ತೀರಾ ಇಳಿಮುಖವಾಗಿದೆ. ನಗರಕ್ಕೆ ನಿತ್ಯ ಅಗತ್ಯವಿರುವ 75 ಲಕ್ಷ ಲೀಟರ್ ನೀರನ್ನು ಪೂರೈಸಲು ನಗರಸಭೆ ಹರಸಾಹಸ ಪಡುತ್ತಿದೆ.

‘ಈಗಾಗಲೇ ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲಿ ತಾತ್ಕಾಲಿಕ ಒಡ್ಡು ನಿರ್ಮಿಸಿ, ಮರಳಿನ ಚೀಲಗಳ ಮೂಲಕ ನೀರು ಸಂಗ್ರಹಿಸಲಾಗಿದ್ದರೂ, ಹೆಚ್ಚುತ್ತಿರುವ ತಾಪಮಾನದಿಂದಾಗಿ ಶೇಖರಣೆಯಾದ ನೀರು ವೇಗವಾಗಿ ಕರಗುತ್ತಿದೆ. ಕಳೆದ ವರ್ಷಗಳಿಗಿಂತ ಈ ಬಾರಿ ಬೇಸಿಗೆಯ ಆರಂಭದಲ್ಲೇ ನೀರಿನ ಲಭ್ಯತೆ ಕಡಿಮೆಯಾಗಿದ್ದು, ಭವಿಷ್ಯದಲ್ಲಿ ನಿತ್ಯ ನೀರು ಪೂರೈಕೆ ಸವಾಲಾಗುವ ಸಾಧ್ಯತೆಯಿದೆ’ ಎಂಬುದು ನಗರಸಭೆ ಅಧಿಕಾರಿಗಳ ಮಾತು.

ಕೇಂಗ್ರೆ ಹಾಗೂ ಮಾರಿಗದ್ದೆ ಹೊಳೆಗಳಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು ಇದೇ ರೀತಿ ನೀರು ಇಳಿಮುಖವಾದರೆ ಮುಂದಿನ ದಿನಗಳಲ್ಲಿ ನಿತ್ಯ ನೀರು ಪೂರೈಕೆ ಕಷ್ಟಸಾಧ್ಯವಾಗಬಹುದು.
–ಸೂಪಿಯಾನ್ ಬ್ಯಾರಿ, ನಗರಸಭೆ ಕಿರಿಯ ಎಂಜಿನಿಯರ್

ಮಳೆ ಬಂದರೆ ಮಾತ್ರ ಬೆಳೆ ರಕ್ಷಣೆ ಆಗುತ್ತದೆ. ಇದೇ ರೀತಿ ಉಷ್ಣಾಂಶ ಹೆಚ್ಚಿದರೆ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತದೆ.
–ಸತ್ಯನಾರಾಯಣ ಹೆಗಡೆ, ಶಾಲ್ಮಲಾ ನದಿ ನೀರು ಬಳಕೆದಾರ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.